RED & WHITE ಸೆವೆನ್ ರಾಜ್ ನಿರ್ಮಾಣದ``ಹೊಸತರ``ನಿರ್ದೇಶಕ ಅಫ್ಜಲ್ ಹೊಸಚಿತ್ರ``ನೆನಪುಗಳ ಮಾತು ಮಧುರ``
Posted date: 17 Sun, Nov 2024 08:18:48 AM
ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಅವರು "ಹೊಸತರ" ಎಂಬ ಚಿತ್ರದ ಮೂಲಕ ನಿರ್ದೇಶನಕನಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಲಿನಲ್ಲಿರುವ ಸಂದರ್ಭದಲ್ಲೇ ಅಫ್ಜಲ್ ಮತ್ತೊಂದು ಚಿತ್ರವನ್ನು ನಿರ್ದೇಶಿಸಿದ್ದಾರೆ. RED & WHITE  ಸೆವೆನ್ ರಾಜ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ "ನೆನಪುಗಳ ಮಾತುಮಧುರ" ಎಂಬ ಶೀರ್ಷಿಕೆ ಇಟ್ಟಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ನೂತನ ಚಿತ್ರದ ಶೀರ್ಷಿಕೆ ಅನಾವಾರಣ ಮಾಡಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ‌.  ಬೆಂಗಳೂರು, ಆನೇಕಲ್ , ಕೆಂಗೇರಿ ಸುತ್ತಾಮುತ್ತಾ ಚಿತ್ರೀಕರಣ ನಡೆದಿದೆ. 

"ನೆನಪುಗಳ ಮಾತು ಮಧುರ" ಚಿತ್ರದಲ್ಲಿ   ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ. ವಿಭಿನ್ನ (ANTHOLOGY TYPE)  ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ,  ಹಾರರ್ , ಹಾಸ್ಯ ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳು ಇರಲಿದೆ ಎನ್ನುತ್ತಾರೆ ನಿರ್ದೇಶಕ ಅಫ್ಜಲ್. 

ಅಫ್ಜಲ್(ಸೂಪರ್ ಸ್ಟಾರ್ಸ್) ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಗ್ರಹಣ,  ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ,  ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ M.S. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತವಿದೆ‌.

 ನಿರ್ದೇಶಕ ಅಫ್ಜಲ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಸಹ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed