ರಾಜನಿವಾಸ ದಲ್ಲಿ ವಿಶೇಷ ಪಾತ್ರವೊಂದರಲ್ಲಿ ಶ್ರೀ ನಗರ ಕಿಟ್ಟಿ
Posted date: 30 Thu, Sep 2021 12:11:38 PM
ಡಿಎಎಂ36ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಕನ್ನಡ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡು , ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಂತದಲ್ಲಿದೆ. ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದ್ದು ಜೊತೆಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್ ವೊಂದರಲ್ಲಿ ಚಿತ್ರದ ಮುಖ್ಯಭಾಗವನ್ನು ಚಿತ್ರೀಕರಿಸಲಾಗಿದೆ. 

ಮುಖ್ಯ ಭೂಮಿಕೆಯಲ್ಲಿ ರಾಘವ್ ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಖ್ಯಾತ ನಟ ಶ್ರೀ ನಗರ ಕಿಟ್ಟಿ ಅವರು ವಿಶೇಷ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಿಥುನ್ ಸುವರ್ಣ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ *ದಾ.ಪಿ ಆಂಜನಪ್ಪ ಹಾಗೂ  ಲೋಕೇಶ್ ಎನ್ ಗೌಡ ಅವರು ಬಂಡವಾಳ ಹೂಡಿದ್ದಾರೆ. ಹಾಗೂ *

ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed