` ಜಾಲಿಡೇಸ್ ` ಈ ವಾರ ತೆರೆಗೆ
Posted date: 18/January/2009

ಯಂಗ್ ಡ್ರೀಂಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ `ಜಾಲಿಡೇಸ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಳೆ ಹೃದಯಗಳ ಮೋಜಿನ ದಿನಗಳು ಎಂ.ಡಿ.ಶ್ರೀಧರ್ ಅವರ ನಿರ್ದೇಶನದಲ್ಲಿ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ಮಾಪಕ ಮಾದಿರೆಡ್ಡಿ ಪರಮ್ ತಿಳಿಸಿದ್ದಾರೆ. ಮಿಕ್ಕಿ.ಜೆ.ಮಯೂರ್ ಅವರ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳು ಕೇಳುಗರ ಮನಸೂರೆಗೊಂಡಿದೆ. ಅತ್ಯುತ್ತಮ ಸ್ಥಳಗಳಲ್ಲಿ ಚಿತ್ರೀಕೃತವಾಗಿರುವ `ಜಾಲಿಡೇಸ್` ಯುವ ಪೀಳಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಹಿಡಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಂ.ಡಿ.ಶ್ರೀಧರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಮಿಕ್ಕಿ ಜೆ ಮಯೂರ್ ಸಂಗೀತ, ಪಿ.ಆರ್.ಸೌಂದರ್ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಕವಿರಾಜ್ ಗೀತರಚನೆ ಹಾಗೂ ರಂಗಸ್ವಾಮಿ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಶ್ವಾಸ್, ದೀಪು, ಪ್ರವೀಣ್, ನಿರಂಜನ್, ಐಶ್ವರ್ಯನಾಗ್, ಋತ್ವ, ಸ್ಪೂರ್ತಿ, ಕೀರ್ತಿ, ಋತಿಕಾ, ಸುಚೀಂದ್ರಪ್ರಸಾದ್, ಕಿಶೋರಿಬಲ್ಲಾಳ್, ಶ್ರೀರಾಘವ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed