``ಅಬ್ಬಬ್ಬ``ಟ್ರೇಲರ್ ಸಖತಾಗಿದೆ ಅಂದ್ರು ಡಾಲಿ ಧನಂಜಯ
Posted date: 06 Tue, Feb 2024 10:33:34 AM
"ಆ ದಿನಗಳು" ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಂ.ಚೈತನ್ಯ ನಿರ್ದೇಶನದ, "ಫ್ಯಾಮಿಲಿ ಪ್ಯಾಕ್" ಚಿತ್ರದ ನಂತರ ಲಿಖಿತ್ ಶೆಟ್ಟಿ & ಅಮೃತ ಅಯ್ಯಂಗಾರ್ ನಾಯಕ, ನಾಯಕಿಯಾಗಿ ನಟಿಸಿರುವ "ಅಬ್ಬಬ್ಬ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ರಾಕ್ಷಸ ಡಾಲಿ ಧನಂಜಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, "ಅಬ್ಬಬ್ಬ" ಚಿತ್ರದ ಟ್ರೇಲರ್ ಸಖತಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. 
 
“ನಾನು ಸಾಮಾನ್ಯವಾಗಿ ಒಂದೇ ಜಾನರ್ ನ ಸಿನಿಮಾ ಮಾಡುವುದಿಲ್ಲ. ಆದರೆ ನಾನು ನಿರ್ದೇಶಿಸಿರುವ ಕಾಮಿಡಿ ಜಾನರಿನ ಎರಡನೇ ಸಿನಿಮಾ "ಅಬ್ಬಬ್ಬ". ಕುಟುಂಬ ಸಮೇತ ನೋಡಬಹುದಾದ ಪಕ್ಕ ಪೈಸಾ ವಸೂಲ್ ಸಿನಿಮಾ ಇದು.‌ ಫೆಬ್ರವರಿ 16 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಕೆ.ಎಂ.ಚೈತನ್ಯ.
 
ಫ್ರೈಡೇ ಫಿಲಂ ಹೌಸ್ ಹಾಗೂ ಮೀರಾಮಾರ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಆನ್ ಆಗಸ್ಟೇನ್, ವಿವೇಕ್ ಥಾಮಸ್ ಹಾಗೂ ವಿಜಯ್ ಬಾಬು ಅವರು ಮಾತನಾಡಿ ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧನಂಜಯ ಅವರಿಗೆ ಧನ್ಯವಾದ ಹೇಳಿದರು.
 
ಇದೊಂದು ಹಾಸ್ಟೆಲ್ ನಲ್ಲಿ ನಡೆಯುವ ಕಾಮಿಡಿ ಜಾನರ್ ನ ಕಥೆ.‌ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕ ಲಿಖಿತ್ ಶೆಟ್ಟಿ. 
 
ಬಾಯ್ಸ್ ಹಾಸ್ಟೆಲ್ ಹೇಗಿರುತ್ತದೆ ಎಂದು ನೋಡಲು ಹೋಗಿ ಪಜೀತಿ ಪಡುವ ಹುಡುಗಿಯ ಪಾತ್ರ ನನ್ನದು ಎಂದು ನಾಯಕಿ ಅಮೃತ ಅಯ್ಯಂಗಾರ್ ತಿಳಿಸಿದರು. ರಾಹು - ಕೇತು - ತಾಂಡವ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದಾಗಿ ನಟರಾದ ಅಜಯ್ ರಾಜ್,  ಧನರಾಜ್ ಆಚಾರ್ ಹಾಗ ತಾಂಡವ ಹೇಳಿದರು. ಛಾಯಾಗ್ರಾಹಕ ಮನೋಹರ್ ಜೋಶಿ ಹಾಗೂ ನಟ ವಿಜಯ್ ಚಂಡೂರ್ " ಅಬ್ಬಬ್ಬ" ಚಿತ್ರದ ಬಗ್ಗೆ ಮಾತನಾಡಿದರು. 
 
ಹೆಸರಾಂತ ಕೆ.ಆರ್.ಜಿ ಸಂಸ್ಥೆಯ  ಮೂಲಕ ಈ ಚಿತ್ರ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed