``ಮ್ಯಾಕ್ಸ್``ಯಶಸ್ಸು; ``ಥ್ಯಾಂಕ್ಸ್ ಗಿವಿಂಗ್`` ಹೇಳಿದ ಕಿಚ್ಚ ಸುದೀಪ್
Posted date: 31 Tue, Dec 2024 12:04:54 PM
ಎರಡೂವರೆ ವರ್ಷದ ಬಳಿಕ ನನ್ನ ಚಿತ್ರ ಬಿಡುಗಡೆಯಾಗಿದೆ. ಮ್ಯಾಕ್ಸ್ ಚಿತ್ರ ಯಶಸ್ಸು ಕಂಡಿದೆ,ಅದರ ಖುಷಿ ಅನುಭವಿಸಲು ಬಿಡಿ, ಪ್ರೀಕ್ವೆಲ್, ಸೀಕ್ವೆಲ್ ಯಾವುದರ ಬಗ್ಗೆ ಸದ್ಯಕ್ಕೆ ಗಮನ ಹರಿಸಿಲ್ಲ. ಸಿನಿಮಾ ಸಂಭ್ರಮದ ಖುಷಿಯಲ್ಲಿದ್ದೇನೆ ಎಂದರು ಕಿಚ್ಚ ಸುದೀಪ್.

ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ “ಥ್ಯಾಂಕ್ಸ್ ಗಿವಿಂಗ್” ಏರ್ಪಡಿಸಿದ್ದ ಕಿಚ್ಚ ಸುದೀಪ್ ಮತ್ತವರ ತಂಡ ಚಿತ್ರದ ಯಶಸ್ಸಿನ ಸಂಭ್ರಮ ಹಂಚಿಕೊಂಡಿತು.

ಈ ವೇಳೆ ಮುಕ್ತವಾಗಿ ಮಾತು ಹಂಚಿಕೊಂಡ ಕಿಚ್ಚ ಸುದೀಪ್,  ಚಿತ್ರದ ಗಳಿಕೆ ಅಷ್ಟಾಗಿದೆ., ಇಷ್ಟಾಗಿದೆ ಎಂದು ನನ್ನನ್ನು ನಾನು ಹೊಗಳಿಕೊಳ್ಳುವ ಜಾಯಮಾನ ನನ್ನದಲ್ಲ, ಜೊತೆಗೆ ಇತರೆ ನಟರನ್ನು ತೆಗಳುವ ಮನಸ್ಥಿತಿಯೂ ನನ್ನದಲ್ಲ. ಚಿತ್ರ ಯಶಸ್ಸು ಕಂಡಿದೆ. ನಿರ್ಮಾಪಕ,. ನಿರ್ದೇಶಕ,ಕಲಾವಿದರ ಮುಖದಲ್ಲಿ ನಗು ಅರಳಿದೆ, ಇದಕ್ಕಿಂತ ಇನ್ನೇನು ಬೇಕು ಹೇಳಿ.

ತೆಲುಗಿನಲ್ಲಿ ಪ್ರಚಾರದ ಕೊರತೆಯಿಂದ ಚಿತ್ರ ಅಷ್ಟಕಷ್ಟೇ, ನಿರ್ದೇಶಕ ರಾಜಮೌಳಿ ಅವರು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಅದು ಇನ್ನಷ್ಟು ಖುಷಿಯ ಸಂಗತಿ. ತಮಿಳಿನಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು,ನಿರ್ದೇಶಕರು ಅಲ್ಲಿಯವರು ಆಗಿರುವುದರಿಂದ ಅವರ ಮುಖದಲ್ಲಿ ಖುಷಿ ಕಾಣುತ್ತಿದೆ. ನಟನಾಗಿ ನನಗೂ ಹೆಮ್ಮೆ ಇದೆ. ತಮಿಳಿನಲ್ಲಿ ಕಲಾವಿದರು ಚಿತ್ರ ನೋಡುತ್ತಿದ್ದಾರೆ ಎಂದರು.

ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ನನ್ನ ಸ್ನೇಹಿತರ ಬಳಗ ಇನ್ನಷ್ಟು ಹೆಚ್ಚಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬಳಸಲಾಗಿದ್ದು ಕಾಸ್ಟೂಮ್ ಎತ್ತಿ ಇಟ್ಟಿದ್ದೇನೆ. ಅದು ನೆನಪು, ಪ್ರತೀ ಸಿನಿಮಾದಲ್ಲಿ ಈ ರೀತಿ ಮಾಡುವ ಅಭ್ಯಾಸವಿದೆ ಎಂದರು.

ಮ್ಯಾಕ್ಸ್ ಸಿನಿಮಾವನ್ನು ಅಪ್ಪ ನೋಡಿ ಖುಷಿ ಪಟ್ಟಿದ್ದಾರೆ. ಕೆಲವೊಂದು ಸನ್ನಿವೇಶಗಳನ್ನು ಅಮ್ಮನ ನೆನಪಾಗಿ ನೋಡಲು ಆಗಲಿಲ್ಲ, ಹೀಗಾಗಿ ನಾನೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿನಿಮಾ ನೋಡಿಲ್ಲ.

ಚಿತ್ರದ ಮೂಲಕ ಮಗಳು ಸಾನ್ವಿಯನ್ನು ಗಾಯಕಿಯಾಗಿ ಪರಿಚಯ ಮಾಡಿದ್ದೇನೆ,ಅದರ ಸಂಪೂರ್ಣ ಶ್ರೇಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು. ಗಟ್ಟಿಯಾದ ಧ್ವನಿಬೇಕು ಮಗಳನ್ನು ಹಾಡಿಸಲಾ ನೀವು ಏನು ಅಂದುಕೊಳ್ಳಲ್ವಾ ಎಂದು ಪ್ರಶ್ನಿಸಿದರು. ನಿಮ್ಮಂಥಹ ತಂತ್ರಜ್ಞರ ಮೂಲಕ ಮಗಳು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಎಂದರೆ ನಾನ್ಯಾಕೆ ಬೇಡ ಎನ್ನಲಿ ಒಕೆ ಅಂದರೆ, ಹಾಡು ಚೆನ್ನಾಗಿ ಮೂಡಿ ಬಂದಿದೆ ಎಂದು ಸಂತಸ ಹಂಚಿಕೊಂಡರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed