``ಯಾಕೆ``ಹೊಸ ಚಿತ್ರದ ಶೀರ್ಷಿಕೆ ಅನಾವರಣ: ದ್ವಿಭಾಷೆಯಲ್ಲಿ ಚಿತ್ರ ನವಂಬರ್ ನಲ್ಲಿ ಆರಂಭ
Posted date: 18 Fri, Oct 2024 01:47:46 PM
ಇತ್ತೀಚಿಗೆ  ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ  ಚಿತ್ರಗಳು  ಸೆಟ್ಟೇರಿತ್ತಿವೆ. ಇದೀಗ ಅದರ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಎರಡು ಭಾಷೆಯಲ್ಲಿ ಬೇರೆ ಬೇರೆ  ಶೀರ್ಷಿಕೆಯಲ್ಲಿ ಚಿತ್ರ ಮೂಡಿ ಬರಲಿದೆ.
 
ಕನ್ನಡದಲ್ಲಿ ,"ಯಾಕೆ" ಎನ್ನುವ ಶೀರ್ಷಿಕೆ ಇಟ್ಟಿದ್ದು ತೆಲುಗಿನಲ್ಲಿ "ಸಿಂಹಾಸನಂ" ಎಂದು ಹೆಸರು ಇಡಲಾಗಿದೆ. ಎರಡು ಭಾಷೆಯಲ್ಲಿ ಸೀತಾ ಹರ್ಷವರ್ಧನ್ ಚಿತ್ರ ನಿರ್ಮಾಣ ಮಾಡುತ್ತಿದ್ದು ಪ್ರೇಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.
 
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಎರಡು ಚಿತ್ರಗಳ ಶೀರ್ಷಿಕೆ ಅನಾವರಣ ಮತ್ತು ಸಿರಿ ಸಿನಿಮಾಸ್ ಹೊಸ ನಿರ್ಮಾಣ ಸಂಸ್ಥೆಯ ಉದ್ಘಾಟನಾ ಸಮಾರಂಭ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು.
 
ನಟರಾದ ಒರಟ ಪ್ರಶಾಂತ್ ಶ್ರೀನಗರ ಕಿಟ್ಟಿ , ನಿರ್ಮಾಪಕ ಟಿಪಿ ಸಿದ್ದರಾಜ್, ಕಲಾವಿದೆ ಅಂಬುಜಾ ಸೇರಿದಂತೆ ಹಲವು ಕಂಡಿರುವ ಆಗಮಿಸಿ ಶೀರ್ಷಿಕೆ ಅನಾವರಣ ಮಾಡಿ ತಂಡಕ್ಕೆ ಶುಭ ಹಾರೈಸಿದರು.
 
ನಿರ್ಮಾಪಕಿ ಸೀತಾ ಹರ್ಷವರ್ಧನ್ ಮಾತನಾಡಿ ಕನ್ನಡದ ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ನಟಿಸಿದ್ದೇನೆ ಜೊತೆಗೆ ತೆಲುಗು ದಾರವಾಹಿಗಳಲ್ಲೂ ನಟಿಸಿದ್ದೇನೆ ಈ ನಡುವೆ ನಿರ್ದೇಶಕ ಪ್ರೇಮ್ ಅವರು ಹೇಳಿದ ಕಥೆ ಇಷ್ಟವಾಯಿತು ಹೀಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಮುಂದಿನ ವರ್ಷ ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
 
ನಮ್ಮ ಪ್ರಯತ್ನಕ್ಕೆ ಅಮೆಜಾನ್ ಮತ್ತು ಹೈದರಾಬಾದಿನ ಖುಷಿ ಸಿನಿಮಾ ಸಂಸ್ಥೆ ಜೊತೆಗೂಡಿದೆ ಇದರಿಂದಾಗಿ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಿದೆ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು.
 
ನಿರ್ದೇಶಕ ಪ್ರೇಮ್ ಮಾತನಾಡಿ ಕನ್ನಡದಲ್ಲಿ ಮೊದಲ ಚಿತ್ರ ಒಳ್ಳೆಯ ಕಂಟೆಂಟ್ ಇದೆ ನವಂಬರ್ ಮಧ್ಯಭಾಗದಿಂದ ಚಿತ್ರಿಕರಣ ಆರಂಭ ಮಾಡುತ್ತೇವೆ ಎಲ್ಲರಿಗೂ ಇಷ್ಟವಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
 
ಇದೇ ಸಂದರ್ಭದಲ್ಲಿ ಖುಷಿ ಸಿನಿಮಾ ಸಂಸ್ಥೆಯ ಪಾಲುದಾರರು ಚಿತ್ರದ ಬಗ್ಗೆ ಮಾಹಿತಿ ನೀಡಿ ಹೊಸ ವರ್ಷ ಕಂಟೆಂಟ್ ಗಳು ಬಂದರೆ ಅವುಗಳನ್ನು ಚಿತ್ರ ನಿರ್ಮಾಣ ಮಾಡಲು ಸಂಸ್ಥೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed