``ಓ``. ಟ್ರೈಲರ್ ಬಿಡುಗಡೆ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡು
Posted date: 06 Thu, Oct 2022 09:51:07 AM
ಲವ್ ಮಾಕ್ಟೇಲ್  ಚಿತದ ನಂತರ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸಿರುವ ವಿಭಿನ್ನ ಪ್ರೇಮಕಥಾಹಂದರ ಇರುವ ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ  ಚಿತ್ರ ಓ. ಮಹೇಶ್ 
ಸಿ.ಅಮ್ಮಲ್ಲಿದೊಡ್ಡಿ ಅವರ ಚಿತ್ರಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ವಿಜಯದಶಮಿಯ ಶುಭ ಸಂದರ್ಭದಲ್ಲಿ ನೆರವೇರಿತು. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 
 
ಕೋವಿಡ್‌ಗೂ ಮುನ್ನವೇ ಪ್ರಾರಂಭವಾಗಿದ್ದ ಈ ಚಿತ್ರ ಎಲ್ಲಾ ಅಡೆತಡೆಗಳನ್ನು ದಾಟಿ ಈಗ 
ಬಿಡುಗಡೆಯ ಹಂತ ತಲುಪಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು 
ಮಾಡಿದ ಚಿತ್ರ. ಒಂದು ಕುಟುಂಬದಲ್ಲಿ ಅಕ್ಕತಂಗಿಯ ಮೇಲೆ ನಡೆಯುವ ಕಥೆಯಿದು. ಓ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಅಲ್ಲದೆ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ನ.೧೧ಕ್ಕೆ  ಬಿಡುಗಡೆಯಾಗುತ್ತಿದೆ. ನನ್ನ ಜೊತೆ ಕೆಲಸ ಮಾಡಿರುವ ರಿತೇಶ್, ಚೇತನ್ ಮೂಲಕ ನಿರ್ಮಾಪಕ ಕಿರಣ್ ಅವರು ಪರಿಚಯವಾದರು ಎಂದು ವಿವರಿಸಿದರು, 
ನಂತರ ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ ನನಗೆ ಚಿಕ್ಕವನಿದ್ದಾಗಲೇ ನನಗೆ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಸೆನ್ಸಾರ್ ಮಂಡಳಿಯವರು 
ಸಿನಿಮಾ ನೋಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ನಮ್ಮ ಸಿನಿಮಾದಲ್ಲಿ ಪುನೀತ್ 
ರಾಜ್‌ಕುಮಾರ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆ ಎಂದೂ 
ಪುನೀತ್ ಅವರು ಹೇಳಿದ್ದರು.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಚಿತ್ರವನ್ನು ಜನರಿಗೆ ಹೇಗೆಲ್ಲಾ ತಲುಪಿಸಬೇಕೆಂದು ಸಾಕಷ್ಟು 
ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.
     ನಾಯಕಿ ಮಿಲನಾ ನಾಗರಾಜ್ ಮಾತನಾಡಿ 
ಹಬ್ಬದ ಶುಭ ದಿನದಂದು ನಮ್ಮ ಚಿತ್ರದ ಟ್ರೆöÊಲರ್ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಬೇರೆಥರದ ಶಾಟ್ ಇಡಬೇಕು 
ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ನಂತರ ಅಮೃತ ಅಯ್ಯಂಗಾರ್ ಮಾತನಾಡಿ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು  ಎಲ್ಲ ಥರದ ಎಮೋಷನ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ಆಕ್ಟ್  ಮಾಡುವಾಗ ತುಂಬಾ ಭಯವಾಗಿತ್ತು. ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾನೆ. ಅವನ ಜೊತೆಗೇ ನನಗೆ ಹೆಚ್ಚು ಸೀನ್‌ಗಳಿವೆ ಎಂದರು. ನಾಯಕ ಸಿದ್ದು ಮೂಲಿಮನಿ ಮಾತನಾಡಿ ನಾನು ಅಭಿನಯಿಸಿದ ಮೊದಲ ಚಿತ್ರವಿದು. ಆಗ ನಾನು ಬೇರೊಂದು ಸಿನಿಮಾಗೆ ಆಡಿಷನ್ ಕೊಟ್ಟಿದ್ದೆ, ಸ್ನೇಹಿತ ಮಹೇಶ್ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಹೀರೋ 
ಅಂದಿದ್ದರು. ಹೇಳಿದ ಹಾಗೇ ಕರೆದು ಹೀರೋ ಮಾಡಿದ್ದಾರೆ ಎಂದು ಹೇಳಿಕೊಂಡರು. 
ನಾಯಕಿಯರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟಿ ಸಂಗೀತಾ ಮಾತನಾಡಿ ನಿರ್ಮಾಪಕ ಕಿರಣ್ ನನಗೆ ಫ್ಯಾಮಿಲಿ ಫ್ರೆಂಡ್. ಅವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿದೆ. ಇನ್ನೂ ಒಳ್ಳೊಳ್ಳೇ ಚಿತ್ರಗಳನ್ನು ಮಾಡುವಂತಾಗಲಿ, ನಾನೀ ಚಿತ್ರದಲ್ಲಿ ಮಾ.ಆಲಾಪ್, ಅಮೃತಾ ಹಾಗೂ 
ಮಿಲನಾರ ತಾಯಿಯಾಗಿ ನಟಿಸಿದ್ದೇನೆ ಎಂದು ಹೇಳಿದರು. ಚಿತ್ರಕ್ಕೆ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ ಸತೀಶ್ ಬಾಬು ಅವರ ಹಿನ್ನೆಲೆ 
ಸಂಗೀತ ಈ ಚಿತ್ರಕ್ಕಿದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed