``ಗಣೇಶ ದಿ ಪವರ್``ಜಂಕಾರ್ ಮ್ಯೂಸಿಕ್ ಬಿಡುಗಡೆ ಮಾಡಿದೆ ವಿನಾಯಕ ಚೌತಿಗೆ ವಿಶಿಷ್ಟ ವಿಡಿಯೋ ಹಾಡು
Posted date: 30 Tue, Aug 2022 12:53:29 PM
ಹಲವು ವರ್ಷಗಳಿಂದ ಸಂಗೀತ  ಕ್ಷೇತ್ರಕ್ಕೆ ತನ್ನದೇ‌ ಆದ ಕೊಡುಗೆ ನೀಡುತ್ತಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈ ಬಾರಿ ವಿನಾಯಕ ಚೌತಿಗೆ "ಗಣೇಶ ದಿ ಪವರ್" ಎಂಬ ವಿಶಿಷ್ಟ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದೆ‌.

ಇದು ಮಾಮೂಲಿ ತರಹದ  ಭಕ್ತಿಗೀತೆಗಳ ಹಾಗಿಲ್ಲ. ಈಗಿನ ಯುವಪೀಳಿಗೆಗೆ ಹಿಡಿಸುವ ಹಾಗೆ ಈ ಹಾಡು ಇದೆ. ಟ್ರಾನ್ಸ್ ಮ್ಯೂಸಿಕ್ ಶೈಲಿಯಲ್ಲಿ ವಿನಾಯಕನ ಕುರಿತ ಈ ಸುಮಧುರ ವಿಡಿಯೋ ಹಾಡು ಮೂಡಿಬಂದಿದೆ. ನೂರಾರು ಗಣಪತಿ ಮೂರ್ತಿಗಳ ಸನ್ನಿಧಿಯಲ್ಲಿ ಈ ಹಾಡು ಚಿತ್ರೀಕರಣವಾಗಿದೆ. 

ಜೆಮ್ ಶಿವು ಬರೆದಿರುವ "ನೀನೇ ನಮ್ಮ ಜಗವು.. ನೀನೇ ನಮ್ಮ ಬಲವು" ಎಂಬ ಅದ್ಭುತ ಗೀತೆಯನ್ನು  ಭರತ್.ಬಿ.ಜೆ ಹಾಗೂ ಇಂಚರ ರಾವ್ ಇಂಪಾಗಿ ಹಾಡುವುದರ ಜೊತೆಗೆ, ಅಭಿನಯವನ್ನೂ ಮಾಡಿದ್ದಾರೆ. ಭರತ್ ಬಿ.ಜೆ ಅವರೆ ಸಂಗೀತ ಸಂಯೋಜಿಸಿದ್ದಾರೆ.

ಈಗಿನ ಯುವಪೀಳಿಗೆ ಭಕ್ತಿಗೀತೆಗಳನ್ನು ಕೇಳುವ ಶೈಲಿ ಕೂಡ ಬದಲಾಗಿದೆ. ಹಾಡನ್ನು ಕೇಳಿದ ತಕ್ಷಣ ಅವರ ಮನಸ್ಸಿಗೆ ಹತ್ತಿರವಾಗುವ ಹಾಗೆ ಇರಬೇಕು. ಅಂತಹ ಗೀತೆಯನ್ನು ಈಗಿನವರು ಬಯಸುತ್ತಾರೆ. ಯುವಜನತೆಯ ಅಭಿರುಚಿಯನ್ನು ಮನಗೊಂಡು ಈ ಬಾರಿ ಗಣೇಶನ ಹಬ್ಬಕ್ಕೆ ಈ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ ಜಂಕಾರ್ ಮ್ಯೂಸಿಕ್ ಸಂಸ್ಥೆಯ ಭರತ್ ಜೈನ್.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed