``ದೃಶ್ಯ 2`` ಡಿಸೆಂಬರ್ 10 ರಂದು ತೆರೆಗೆ ನಾಳೆ ಮೊದಲ ಭಾಗ ಮರು ಬಿಡುಗಡೆ
Posted date: 04 Sat, Dec 2021 11:48:17 PM
2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ "ದೃಶ್ಯ".
ಈಗ ಇದೇ ಚಿತ್ರದ ಮುಂದುವರೆದ ಭಾಗ " ದೃಶ್ಯ 2" ಎಂಬ ಹೆಸರಿನಿಂದ ನಿರ್ಮಾಣವಾಗಿದ್ದು, Zee ಸ್ಟುಡಿಯೋಸ್ ಮೂಲಕ ಇದೇ ಡಿಸೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ
ನಾಳೆ ಒಂದು ದಿನದ ಮಟ್ಟಿಗೆ(5.12.21 ಭಾನುವಾರ) ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ  "ದೃಶ್ಯ" ಚಿತ್ರದ ಮೊದಲ ಭಾಗ ಬಿಡುಗಡೆಯಾಗುತ್ತಿದೆ. 

"ದೃಶ್ಯ 2" ಇದೇ ತಿಂಗಳ ಹತ್ತರಂದು ತೆರೆಗೆ ಬರುತ್ತಿದ್ದು, ಮೊದಲ ಭಾಗವನ್ನು ನೋಡಿರದ ಪ್ರೇಕ್ಷಕರಿಗೆ ಹಾಗೂ ಏಳು ವರ್ಷದ ಹಿಂದೆ ನೋಡಿ ಮತ್ತೊಮ್ಮೆ ನೋಡ ಬಯಸುವವರ ಸಲುವಾಗಿ ನಾಳೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

E4 Entertainment ಸಂಸ್ಥೆ "ದೃಶ್ಯ" ಮೊದಲ ಹಾಗೂ ಎರಡನೇ ಭಾಗ ನಿರ್ಮಾಣ ಮಾಡಿದ್ದಾರೆ. ಪಿ.ವಾಸು ಅವರು ನಿರ್ದೇಶಿಸಿರುವ ಈ ಎರಡು ಭಾಗಗಳ ಪ್ರಮುಖ ಭೂಮಿಕೆಯಲ್ಲಿ ರವಿಚಂದ್ರ ವಿ ಹಾಗೂ ನವ್ಯ ನಾಯರ್ ನಟಿಸಿದ್ದಾರೆ. ಮೊದಲ ಭಾಗದ ಚಿತ್ರತಂಡದ ಬಹುತೇಕ ಸದಸ್ಯರು ಎರಡನೇ ಭಾಗದಲೂ ಮುಂದುವರೆದಿದ್ದಾರೆ. "ದೃಶ್ಯ 2" ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ನಟ ಅನಂತನಾಗ್ ಅಭಿನಯಿಸಿದ್ದಾರೆ.

ನಾಳೆ "ದೃಶ್ಯ" ಚಿತ್ರದ ಮೊದಲ ಭಾಗ ಈ ಕೆಳಕಂಡ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬುಕ್ ಮೈ ಶೋನಲ್ಲಿ ಟಿಕೇಟ್ ಬುಕಿಂಗ್ ಆರಂಭವಾಗಿದೆ.

Drishya 1 (Kannada) on Sunday, 5 Dec 2021 
 
PVR MSR Elements Regalia Bangalore – 11.55 am
 
PVR Orion Bangalore – 3.30 pm
 
Cinepolis ETA Mall Bangalore – 6.30 pm
 
Inox Malleshwaram Bangalore – 9.45 pm
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed