``ತಾಯ್ತ`` ಕಟ್ಟಲು ಸಿದ್ದರಾದ ಲಯಕೋಕಿಲ
Posted date: 29 Thu, Jul 2021 12:29:24 PM
ತಮ್ಮ ನಟನೆಯಿಂದ ಮನೆಮಾತಾಗಿರುವ ಲಯಕೋಕಿಲ, ಸಂಗೀತ ನಿರ್ದೇಶಕರಾಗೂ ಹೆಸರಾದವರು. ಈಗ ಲಯಕೋಕಿಲ ನಿರ್ದೇಶಕರಾಗುತ್ತಿದ್ದಾರೆ.
ತಮ್ಮ ಮೊದಲ‌ ಚಿತ್ರಕ್ಕೆ ``ತಾಯ್ತ`` ಎಂದು ಹೆಸರಿಟ್ಟಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ರಾಮನಗರದ ದರ್ಗಾವೊಂದರಲ್ಲಿ ಸರಳವಾಗಿ ಆರಂಭವಾಯಿತು.
ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನ ಕಾರ್ಯ ಆರಂಭಿಸಿದರು.
ಮೊದಲ ದಿನದ ಚಿತ್ರೀಕರಣವನ್ನು ರಾಮನಗರದ ಆಸುಪಾಸಿನಲ್ಲಿ ನಿರ್ದೇಶಕರು ನಡೆಸಿದ್ದಾರೆ ‌.
ಆಗಸ್ಟ್ 5 ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ.
ಈ ಚಿತ್ರವನ್ನು ಡಾ||ಶಾಹಿದ್ ಅವರು ನಿರ್ಮಿಸುತ್ತಿದ್ದಾರೆ. ಕಥೆಯನ್ನು ಶಾಹಿದ್ ಅವರೆ ಬರೆದಿದ್ದಾರೆ. 
ಲಯಕೋಕಿಲ ಅವರೆ ಸಂಗೀತ ನೀಡುತ್ತಿರುವ ಈ ಚಿತ್ರದ ಹಾಡುಗಳನ್ನು  ರಾಮನಾರಾಯಣ್ ಬರೆದಿದ್ದಾರೆ.
ಆನಂದ್ ಛಾಯಾಗ್ರಹಣ ಹಾಗೂ ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ರಿಹಾನ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ರಿಹಾನ್ ಅವರಿಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಛ ಅಭಿನಯಿಸುತ್ತಿದ್ದಾರೆ.
 ನಾಯಕನ ತಾಯಿಯ ಪಾತ್ರದಲ್ಲಿ ಸುಮಾಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ. 
ಲಯಕೋಕಿಲ, ಡಾ||ಶಾಹಿದ್, ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
``ತಾಯ್ತ`` ಎಲ್ಲಾ ತರಹದ ಮಾಮೂಲಿ ಕಥೆಯಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎನ್ನುತ್ತಾರೆ ಲಯಕೋಕಿಲ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed