`ಬಾಂಡ್ ರವಿ` ಚಿತ್ರದ ಮೊದಲ ಸಾಂಗ್ ರಿಲೀಸ್ - ಜೈಲಿನಲ್ಲಿ ಬಾಂಡ್ ರವಿ ಜೋಶ್ ಸಾಂಗ್
Posted date: 21 Mon, Nov 2022 09:50:13 AM
ಸ್ಯಾಂಡಲ್ ವುಡ್ ಅಂಗಳದ ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಚಿತ್ರ ಬಾಂಡ್ ರವಿ. ಟೀಸರ್ ಮೂಲಕ ಎಲ್ಲರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಚಿತ್ರದ ಮೇಲೆ ಸಿನಿರಸಿಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕೆಲಸ ಮುಗಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ಚಿತ್ರತಂಡ ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡಿದೆ. 

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅರಳಿರುವ `ಮಜಾ ಮಜಾ ಮಾಡು ಬಾ`ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದು, ಮನೋಮೂರ್ತಿ ಸಂಗೀತ ಹಾಡಿಗಿದೆ. ಜೋಶ್ ಜೊತೆಗೆ ಒಂದೊಳ್ಳೆ ಮೋರಲ್ ಇರುವ ಸಾಂಗ್ ಇದಾಗಿದೆ. ಜೈಲಿನಲ್ಲಿ ನಡೆಯುವ ಸಾಂಗ್ ಇದಾಗಿದ್ದು ಜೈಲಿನಲ್ಲಿರುವ ಅಪರಾಧಿಗಳಿಗೆ ಧೈರ್ಯ ತುಂಬುವ ಈ ಸಾಂಗ್ ಗೆ ಸಖತ್ ಜೋಶ್ ನಲ್ಲಿ ಎಲ್ಲರೊಂದಿಗೆ ನಾಯಕ ಪ್ರಮೋದ್ ಹೆಜ್ಜೆ ಹಾಕಿದ್ದಾರೆ.  

`ಗೀತಾ ಬ್ಯಾಂಗಲ್ ಸ್ಟೋರ್`ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ`, `ಪ್ರೀಮಿಯರ್ ಪದ್ಮಿನಿ` ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. `ಬಾಂಡ್ ರವಿ`ಮೂಲಕ ಮಾಸ್ ಅವತಾರದಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.   

`ಬಾಂಡ್ ರವಿ`ಆಕ್ಷನ್ ಲವ್ ಸ್ಟೋರಿ ಸಿನಿಮಾ. ಯುವ ಪ್ರತಿಭೆ ಪ್ರಜ್ವಲ್ ಎಸ್.ಪಿ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.  ನರಸಿಂಹಮೂರ್ತಿ.ವಿ  ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ. 
 
ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ಗೋವಿಂದೇ ಗೌಡ.‌ ಹಂಸ, ಮಿಮಿಕ್ರಿ ಗೋಪಿ, ಪವನ್, ಕಾಮಿಡಿ ಕಿಲಾಡಿ ಸಂತೋಷ್, ರವಿಪ್ರಕಾಶ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್ ರಾಜ್ ಸಂಭಾಷಣೆ, ಬಿ. ಧನಂಜಯ ನೃತ್ಯ ನಿರ್ದೇಶನ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.
2022ರ ಮಾಲಿವುಡ್ ಅಂಗಳದ  ಬಿಗ್ ಬ್ಲಾಕ್ ಬ್ಲಸ್ಟರ್ ಸಿನಿಮಾ ಜಯ ‘ಜಯ ಜಯ ಜಯ ಹೇ’- ಚೀರ್ಸ್ ಎಂಟಟೈನ್ಮೆಂಟ್ ಗೆ ಸತತ ಎರಡನೇ ಸಿನಿಮಾ ಗೆದ್ದ ಸಂಭ್ರಮ.

ಬಾಸಿಲ್ ಜೋಸೆಫ್, ದರ್ಶನ ರಾಜೇಂದ್ರನ್ ನಟನೆಯ `ಜಯ ಜಯ ಜಯ ಜಯ ಹೇ` ಸಿನಿಮಾ ಮಾಲಿವುಡ್ ಅಂಗಳದಲ್ಲಿ ಅತಿದೊಡ್ಡ ಗೆಲುವನ್ನು ತನ್ನದಾಗಿಸಿಕೊಂಡಿದೆ. ಎಲ್ಲೆಡೆ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದ್ದು, ಈ ವರ್ಷದ ಮಾಲಿವುಡ್ ಅಂಗಳದ ಮೆಗಾ ಫ್ಯಾಮಿಲಿ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ ಈ ಚಿತ್ರ.

ಅಕ್ಟೋಬರ್ 28ರಂದು ಈ ಸಿನಿಮಾ ಕೇರಳದಾದ್ಯಂತ ತೆರೆಕಂಡಿತ್ತು. ಬಿಡುಗಡೆಯಾದ ದಿನದಿಂದಲೇ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಬಹು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇಲ್ಲಿವರೆಗೆ ಬರೋಬ್ಬರಿ 35 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮಲಯಾಳಂ ಚಿತ್ರರಂಗದ ಈ ವರ್ಷದ ಬಿಗ್ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ. 

ಈ ಚಿತ್ರವನ್ನು ಚೀರ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಲಕ್ಷ್ಮೀ ವಾರಿಯರ್, ಗಣೇಶ್ ಮೆನನ್ ನಿರ್ಮಾಣ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಸೂಪರ್…
 

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed