`ಓ ಮೈ ಲವ್`ಗೆ ಮಿಲಿಯನ್ ಖುಷಿ
Posted date: 15 Wed, Jun 2022 08:13:23 AM
ಸ್ಮೈಲ್ ಶ್ರೀನು ನಿರ್ದೇಶನದ `ಓ ಮೈ ಲವ್` ಚಿತ್ರದ ಕ್ರೇಜ್  ದಿನದಿಂದ ದಿನಕ್ಕೆ  ಹೆಚ್ಚುತ್ತಲೇ ಇದೆ. ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಪ್ರಮುಖ ಪಾತ್ರಗಳಲ್ಲಿ  ನಟಿಸಿರುವ ಈ ಸಿನಿಮಾ ಆರಂಭವಾದಾಗಿನಿಂದ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ  ಗ್ಲಿಂಪ್ಸ್ ಹಾಗೂ ಹಾಡುಗಳು ಸಖತ್ ಹಿಟ್ ಆಗಿರುವುದು ಚಿತ್ರದ ಗೆಲುವಿನ ಮುನ್ಸೂಚನೆಯಾಗಿದೆ.

ರಿಯಲ್ ಸ್ಟಾರ್‌ ಉಪೇಂದ್ರ ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಿದ್ದರು. ಅದರ ಬೆನ್ನಲ್ಲೇ ರಿಲೀಸಾಗಿದ್ದ ಟೀಸರ್ ವೀಕ್ಷಿಸಿದ ತೆಲುಗು ಚಿತ್ರರಂಗದ ಸಿನಿಮಾಬ್ರಹ್ಮ ಕೆ.ರಾಘವೇಂದ್ರರಾವ್ `ಓ ಮೈ ಲವ್` ಕುರಿತು ಮೆಚ್ಚುಗೆಯ ಮಾತನಾಡುವುದರ ಜತೆಗೆ ನಿರ್ದೇಶಕ ಸ್ಮೈಲ್ ಶ್ರೀನು ಮೇಕಿಂಗ್ ಹಾಗೂ ಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಬೆನ್ನು ತಟ್ಟಿದ್ದರು. ಇದಾದ ಬಳಿಕ ಮಾಜಿ ಪೊಲೀಸ್ ಆಯುಕ್ತರಾದ,  ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ `ನಿನ್ನ ಡ್ಯಾಡಿ ನಂಗೆ...` ಹಾಡು ರಿಲೀಸ್ ಮಾಡಿ ಚಿತ್ರತಂಡವನ್ನು ಹಾರೈಸಿದ್ದರು.
ಅದೇ`ನಿನ್ನ ಡ್ಯಾಡಿ ನಂಗೆ ಯಾವಾಗಿಂದ ಮಾವ ಆಗೋದು...` ಹಾಡು ಇದೀಗ ಮಿಲಿಯನ್`ಗೂ ಅಧಿಕ ಹಿಟ್ಸ್ ದಾಖಲಿಸಿ ಟ್ರೆಂಡಿಂಗ್`ನಲ್ಲಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್`ನಲ್ಲಿ ಹಾಡು ಬಿಡುಗಡೆಯಾಗಿದೆ.

ಸದ್ಯ ಸ್ಯಾಂಡಲ್`ವುಡ್`ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾಗಳ ಪೈಕಿ `ಓ ಮೈ ಲವ್` ಮುಂಚೂಣಿಯಲ್ಲಿದೆ. ಕೆ.ಜಿ.ಎಫ್ ಹಾಗೂ 777 ಚಾರ್ಲಿ ಸಿನಿಮಾಗಳ ಬಳಿಕ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿಯಾಗಲಿದೆ ಎಂಬ ಭರವಸೆ ಮೂಡಿಸಿದೆ. ಕೆ.ಜಿ.ಎಫ್ ಮಾಸ್ ಫೀಲ್ ಕೊಡುವ ಸಿನಿಮಾವಾದರೆ, ಚಾರ್ಲಿ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಶಕ್ತವಾಗಿದೆ. `ಓ ಮೈ ಲವ್`ಎರಡೂ ಬಗೆಯ ಪ್ರೇಕ್ಷಕರನ್ನು ಬರಸೆಳೆದುಕೊಳ್ಳಲಿದೆ ಎಂದು ಈಗಾಗಲೇ ಸಿನಿಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಸಿನಿಮಾಕ್ಕೆ ಕಥೆ ಬರೆದು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ನಿರ್ಮಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಡೈರೆಕ್ಷನ್ ಮಾಡಿದ್ದಾರೆ ಸ್ಮೈಲ್ ಶ್ರೀನು. ಚಿತ್ರದ ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ. ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಬಹುದೊಡ್ಡ  ತಾರಾಗಣವೇ ಈ ಚಿತ್ರದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed