`ನಂದ` ಈ ವಾರ ತೆರೆಗೆ
Posted date: 19/January/2009

ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಶಿವರಾಜಕುಮಾರ್ ಅಭಿನಯದ `ನಂದ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಮಾಹಿನ್ ಚಿತ್ರದ ಕತೆಗಾರರೂ ಕೂಡ. ಮಾಹಿನ್ ಅವರ ಜೀವನದಲ್ಲಿ ನಡೆದ ನೈಜಕತೆಗೆ ನಿರ್ದೇಶಕ ಅನಂತರಾಜು ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಶ್ವಿನಿ ಆಡೀಯೋ ಮೂಲಕ ಹಾಡಾಗಿ ಬಂದಿರುವ `ನಂದ`ನಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ವದೇಶದಲ್ಲಲ್ಲದೆ ವಿದೇಶದಲ್ಲೂ ಚಿತ್ರೀಕರಣವಾಗಿರುವ  ಈ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕನ ಪಾತ್ರ ನಿರ್ವಹಿಸಿದರೆ `ಕಾದಲ್` ಖ್ಯಾತಿಯ ಸಂಧ್ಯಾ ಹಾಗೂ ಮೈತ್ರೇಯಿ `ನಂದ`ನ ನಾಯಕಿಯರಾಗಿದ್ದಾರೆ. ನಿರ್ಮಾಪಕ ಮಾಹಿನ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ   

      ರಮೇಶ್‌ಬಾಬು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತವಿದೆ, ಎಸ್.ಮನೋಹರ್ ಸಂಕಲನ, ಮಾಹಿನ್ ಕತೆ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ರಾಮು, ಗಂಡಸಿ ನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed