`ಮೇರಿ` ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ - ಫೆಬ್ರವರಿ 24 ಅಲ್ಲ ಮಾರ್ಚ್ 10ಕ್ಕೆ
Posted date: 23 Thu, Feb 2023 03:56:48 PM
`ಆನ` ಸಿನಿಮಾ ಮೂಲಕ ಪರಿಚಿತರಾಗಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ `ಮೇರಿ`. ಥ್ರಿಲ್ಲರ್ ಹಾಗೂ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಕುತೂಹಲ ಭರಿತ ಟ್ರೇಲರ್ ಬಿಡುಗಡೆಯಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ಗೆ ಸಿನಿ ಪ್ರೇಕ್ಷಕರು ನೀಡಿರುವ ಅದ್ಭುತ ಪ್ರತಿಕ್ರಿಯೆ ಕಂಡು ಥ್ರಿಲ್ ಆಗಿರುವ ಚಿತ್ರತಂಡ ಫೆಬ್ರವರಿ 24ರ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. 

ಫೆಬ್ರವರಿ 24ರಂದು `ಮೇರಿ`ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡು ಅದರಂತೆ ಸಿನಿಮಾ ಪ್ರಚಾರ ಕಾರ್ಯವನ್ನು ಕೈಗೊಂಡಿತ್ತು. ಆದ್ರೆ ಟ್ರೇಲರ್ ಬಿಡುಗಡೆಯಾದ ಮೇಲೆ ಸಿನಿಮಾ ಬಗ್ಗೆ ಕೇಳಿ ಬರ್ತಿರುವ ಪ್ರತಿಕ್ರಿಯೆ ಚಿತ್ರತಂಡವನ್ನು ಥ್ರಿಲ್ ಆಗಿಸಿದೆ. ಟ್ರೇಲರ್ ತುಣುಕು ಸಿನಿ ರಸಿಕರನ್ನು ಸಖತ್ ಇಂಪ್ರೆಸ್ ಮಾಡಿದೆ. ಕಂಟೆಂಟ್ ಹಾಗೂ ಕ್ವಾಲಿಟಿ ಕಂಡು ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಹೊರ ಹಾಕಿದ್ದಾರೆ. ಇದ್ರಿಂದ ಸಿನಿಮಾ ತಂಡ ಸಂತಸಗೊಂಡಿದ್ದು, ಮತ್ತಷ್ಟು ಪ್ರಚಾರವನ್ನು ಮಾಡುವುದರ ಮೂಲಕ ಇನ್ನಷ್ಟು ಸಿನಿಮಾಸಕ್ತರನ್ನು ತಲುಪಲು ಯೋಜನೆ ಹಾಕಿಕೊಂಡಿದೆ. ಆದ್ರಿಂದ ಸಿನಿಮಾ ಬಿಡುಗಡೆಯನ್ನು ಫೆಬ್ರವರಿ 24ರ ಬದಲಾಗಿ ಮಾರ್ಚ್ 10ರಂದು ಮಾಡುತ್ತಿದೆ. 

ಥ್ರಿಲ್ಲರ್ ಹಾಗೂ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ `ಮೇರಿ`. ಚಿಕ್ಕಮಗಳೂರು ಜಿಲ್ಲೆಯ ಕಾಡು ಮಧ್ಯದಲ್ಲಿರುವ ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ನೇಮಕವಾದ ಎಸ್ಐ ಮುಂದೆ ಹುಡುಗಿಯೊಬ್ಬಳು ತನ್ನ ಮೇಲೆ ರೇಪ್ ಆಗಿದೆ ಎಂದು ಹೇಳಿದಾಗ ಆ ದಿನ ಏನೇನು ಘಟನೆ ನಡೆಯುತ್ತೆ ಎನ್ನೋದು ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ವಿಕ್ಕಿ, ತೇಜಸ್ವಿನಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಮಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. 

ಡಿಕೆಎಸ್ ಸ್ಟುಡಿಯೋಸ್ ಬ್ಯಾನರ್ ನಡಿ ರನ್ವಿತ್ ಶಿವಕುಮಾರ್, ಹರೀಶ್ ಜಿ.ಬಿ `ಮೇರಿ` ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ನಿರ್ದೇಶನ, ನಾಗೇಂದ್ರ ಉಜ್ಜನಿ ಸಂಕಲನ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed