`ಹೊಂದಿಸಿ ಬರೆಯಿರಿ` ಸಿನಿಮಾಗೆ ರಮ್ಯಾ ಸಾಥ್...`ಓ ಕವನ` ಹಾಡು ರಿಲೀಸ್ ಮಾಡಲಿದ್ದಾರೆ ಮೋಹಕ ತಾರೆ
Posted date: 26 Mon, Sep 2022 08:31:47 AM
ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದಲ್ಲಿ ತಯಾರಾಗಿರುವ ಹೊಂದಿಸಿ ಬರೆಯಿರಿ ಸಿನಿಮಾ ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಕಥೆ, ಪಾತ್ರವರ್ಗದ ಬಗ್ಗೆ ಪ್ರೇಕ್ಷಕ ಕುತೂಹಲಗೊಂಡಿದ್ದಾನೆ. ಫಸ್ಟ್ ಲುಕ್ ನಿಂದ ಹಿಡಿದು ಇಲ್ಲಿವರೆಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಆವರಿಸಿರುವ ಹೊಂದಿಸಿ ಬರೆಯಿರಿ ಸಿನಿಮಾಗೆ ಈಗ ಮೋಹಕ ತಾರೆ ರಮ್ಯಾ ಸಾಥ್ ಕೊಡ್ತಿದ್ದಾರೆ. 

ಇದೇ 28ರಂದು ಚಿತ್ರದ ಓ ಕವನ ಎಂಬ ವಿಡಿಯೋ ಸಾಂಗ್ ನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ಸಂಡೇ ಸಿನಿಮಾಸ್ ಯೂಟ್ಯೂಬ್ ನಲ್ಲಿ ಬೆಳಗ್ಗೆ 11.31ಕ್ಕೆ ಹಾಡು ಅನಾವರಣವಾಗಲಿದೆ. 

ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಕಲರ್ ಫುಲ್ ತಾರಾಬಗಳವಿದೆ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್‌ ಪುರಾಣಿಕ್‌, ಪ್ರವೀಣ್‌ ಡಿ ರಾವ್‌, ಧರ್ಮೇಂದ್ರ ಅರಸ್‌, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು   ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದ್ದು, ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ. 

ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.  ಟಗರು  ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, "ಸಂಡೇ ಸಿನಿಮಾಸ್ "ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed