`ವಿಡುದಲೈ` ಚಿತ್ರಕ್ಕಾಗಿ ಕೊಡೈಕೆನಾಲ್‌ನಲ್ಲಿ ಭರ್ಜರಿ ಆಕ್ಷನ್ ಚಿತ್ರಗಳ ಚಿತ್ರೀಕರಣ
Posted date: 12 Mon, Sep 2022 08:57:12 AM
ಕಾಲಿವುಡ್ನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರವು ಎರಡು ಭಾಗಗಳಲ್ಲಿ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರಕ್ಕಾಗಿ ಕೊಡೈಕೆನಾಲ್ನಲ್ಲಿ ವಿಜಯ್ ಸೇತುಪತಿ, ಸೂರಿ ಮತ್ತು ನೂರಾರು ಫೈಟರ್ಗಳ ಅಭಿನಯದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಆರ್‌ಎಸ್ ಇನ್ಫೋಟೈನ್‌ಮೆಂಟ್ನಡಿ ಎಲ್ಡ್ರೆಡ್ ಕುಮಾರ್ ಅವರು ‘ವಿಡುದಲೈ’ ಚಿತ್ರವನ್ನು ನಿರ್ಮಿಸುತ್ತಿದ್ದು, ರೆಡ್ ಜೈಂಟ್ ಮೂವೀಸ್ನ  ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. 

ಅದ್ಧೂರಿ ನಿರ್ಮಾಣಕ್ಕಾಗಿ ಸಾಕಷ್ಟು ಸುದ್ದಿಯಾಗಿರುವ ಈ ಚಿತ್ರಕ್ಕಾಗಿ ಇತ್ತೀಚೆಗೆ ಪೀಟರ್ ಹೇಯ್ನ್ಸ್ಸ್ ಅವರ ನೇತೃತ್ವದಲ್ಲಿ ಮೈನವಿರೇಳಿಸುವಂತಹ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯಗಳಿಗಾಗಿಯೇ ಬಲ್ಗೇರಿಯಾದಿಂದ ಫೈಟರ್ಗಳನ್ನು ಕರೆಸಲಾಗಿರುವುದು ವಿಶೇಷ. ಕೊಡೈಕೆನಾಲ್‌ನ ಪೂಂಬರೈನ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ಈ ಸನ್ನಿವೇಶಗಳು ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ.

‘ವಿಡುದಲೈ’ ಚಿತ್ರವು ಈಗಾಗಲೇ ತನ್ನ ಅದ್ಭುತ ತಾರಾಗಣ, ತಾಂತ್ರಿಕ ವರ್ಗ, ಮೇಕಿಂಗ್ ಮತ್ತು ಫಸ್ಟ್ಲುಕ್ ಪೋಸ್ಟರ್ಗಳಿಂದ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಆಡಿಯೋ, ಟ್ರೈಲರ್ ಮತ್ತು ಚಿತ್ರ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ.

‘ವಿಡುದಲೈ’ ಚಿತ್ರದ ತಾರಾಬಳಗದಲ್ಲಿ ವಿಜಯ್ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಚೇತನ್ ಮತ್ತು ಅನೇಕ ಪ್ರಮುಖ ನಟರು ನಟಿಸಿದ್ದು,  ಇಸೈಜ್ಞಾನಿ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ. ವೇಲ್ರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಟ್ರಿಮಾರನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed