`ತಾಜ್ಮಹಲ್` ಚೆಲುವ ಅಜಯ್ `ಮೆರವಣಿಗೆ`ಯ ಬೆಡಗಿ ಅಂದ್ರಿತಾ
Posted date: 19/January/2009

ಮಾನಸಚಿತ್ರ ಲಾಂಛನದಲ್ಲಿ ಹಿಂದೆ `ಮಹರ್ಷಿ` ಚಿತ್ರವನ್ನು ನಿರ್ಮಿಸಿದ್ದ ಡಿ.ಕೆ.ರಾಮಕೃಷ್ಣ ಕಳೆದವಾರ ರಾಜಾಜಿನಗರದ ಗಣಪತಿ ದೇಗುಲದಲ್ಲಿ ಹೆಸರಿಡದ ಚಿತ್ರವೊಂದನ್ನು ಆರಂಭಿಸಿದ್ದಾರೆ. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ಅಣಜಿನಾಗರಾಜ್ ಆರಂಭಫಲಕ ತೋರಿದರೆ ದೇವಸ್ಥಾನದ ಹಿರಿಯ ಸಿಬ್ಬಂದಿಯೊಬ್ಬರು ಕ್ಯಾಮೆರಾ ಚಾಲನೆ ಮಾಡಿದರು. `ತಾಜ್ಮಹಲ್` ಚೆಲುವ ಅಜಯ್ `ಮೆರವಣಿಗೆ`ಯ ಬೆಡಗಿ ಅಂದ್ರಿತಾ ರೇ ಈ ನೂತನ ಚಿತ್ರದ ನಾಯಕ- ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದಸಾಲಿನ ಯಶಸ್ವಿ ಚಿತ್ರಗಳಲೊಂದಾದ `ಮಸ್ತ್ ಮಜಾ ಮಾಡಿ` ಚಿತ್ರವನ್ನು ನಿರ್ದೇಶಿಸಿದ್ದ ಅನಂತರಾಜು ನಾಮಕರಣಗೊಳ್ಳದ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ಡಿ.ಕೆ.ರಾಮಕೃಷ್ಣ ಹಿಂದೆ ಕನ್ನಡದಲ್ಲಿ ೧೫ಚಿತ್ರಗಳನ್ನು ನಿರ್ಮಾಣಮಾಡಿ ಖ್ಯಾತರಾದವರು. ಸಿ.ರಾಜಶೇಖರ್ ಸಹನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಸಂಗೀತ ಸಂಯೋಜಿಸಲಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರಾಂನಾರಾಯಣ್ ಸಂಭಾಷಣೆ, ಅನಿಲ್.ಬಿ.ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಅಜಯ್, ಅಂದ್ರಿತಾ ರೇ, ಅವಿನಾಶ್, ಸಾಧುಕೋಕಿಲಾ, ತಾರಾ, ಲೋಹಿತ್ ಮುಂತಾದವರಿದ್ದಾರೆ. ಶುಭದಿನದಂದು ಮುಹೂರ್ತ ಕಂಡ ಈ ಚಿತ್ರಕ್ಕೆ ಫ಼ೆಬ್ರವರಿ ೫ರಿಂದ ನಿರಂತರ ಚಿತ್ರೀಕರಣ ನಡೆಯಲಿದೆ. ವಿವಿಧ ಗೀತರಚನೆಕಾರರು ರ಼ಚಿಸಿರುವ ಆರು ಸುಮಧುರ ಗೀತೆಗಳು ಚಿತ್ರದಲ್ಲಿ ಅಡಕವಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed