ನಾ ನಿನ್ನ ಬಿಡಲಾರೆ ... ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರೋ ಪವರ್ ಹಿಟ್ ಸಿನಿಮಾ. ಇದೀಗ ಅದೇ ಹೆಸರಲ್ಲಿ, ಹೊಸ ರೀತಿಯ ಕಥಾವಸ್ತು ಹೊಂದಿರೋ ,ಹೊಸ ತಂಡದ ಹೊಸ ಬಗೆಯ ಸಿನಿಮಾ ಈ ವಾರ ತೆರೆಗೆ ಬರ್ತಿದೆ..
ಟೀಸರ್ ಗೆ ಅಧ್ಯಕ್ಷ ಶರಣ್ ಬೆಂಬಲ
ನಾ ನಿನ್ನ ಬಿಡಲಾರೆ.. ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್.
ಈಗಾಗ್ಲೇ ಟೀಸರ್ ನಿಂದ ಕುತೂಹಲ ಮೂಡಿಸಿತ್ತು.. ಅಧ್ಯಕ್ಷ ಶರಣ್ ಬಿಡುಗಡೆ ಮಾಡಿದ್ದ ನಾ ನಿನ್ನ ಬಿಡಲಾರೆ ಟೀಸರ್ ಉದ್ಯಮದಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿತ್ತು.. ವಿಷ್ಯ ಹಾಗೂ ಮೇಕಿಂಗ್ ನಿಂದ ನಿರೀಕ್ಷೆ ಮೂಡಿಸಿತ್ತು...
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರೋ ನಾ ನಿನ್ನ ಬಿಡಲಾರೆ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ.
ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು,ಕೆ.ಸ್.ಶ್ರೀಧರ್,ಮಹಂತೇಶ್,ಶ್ರೀನಿವಾಸ್ ಪ್ರಭು,ಹರಿಣಿ,ಲಕ್ಷ್ಮೀ ಸಿದ್ದಯ್ಯ,ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ..
ಟ್ರೈಲರ್ ಪ್ರಶಂಸಿದ ಟ್ರೆಂಡಿಂಗ್ ಡೈರೆಕ್ಟರ್ಸ್
ಹೊಸ ನಿರ್ದೇಶಕ, ಹೊಸ ನಿರ್ಮಾಪಕಿ, ಹೊಸ ನಾಯಕಿ ಹೀಗೆ ಬಹುತೇಕ ಹೊಸಬರೇ ಕೂಡಿ ಹಳೇ ತಂತ್ರಜ್ಞರ ಜೊತೆಗೆ ಮಾಡಿರೋ ಈ ಸಿನಿಮಾದ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನ ನಂಬಿಕೆಯನ್ನ ಡಬಲ್ ಮಾಡಿತ್ತು.
ಈ ಕಂಟೆಂಟ್ ಉದ್ಯಮದ ಟ್ರೆಂಡಿಂಗ್ ನಿರ್ದೇಶಕರುಗಳಾದ ಕಾಟೇರ ತರುಣ್ ಸುಧೀರ್, ಜೇಮ್ಸ್ ಚೇತನ್ ಕುಮಾರ್, ಸಿಂಪಲ್ ಸುನಿ ಪ್ರಶಂಸಿದ್ರು..
ಎಲ್ಲಾ ಆ್ಯಂಗಲ್ ನಿಂದ್ಲೂ ಪ್ರಾಮಿಸಿಂಗ್ ಆಗಿ ಕಂಡಿರೋ ನಾ ನಿನ್ನ ಬಿಡಲಾರೆ ಚಿತ್ರವನ್ನ ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದು, ಅತ್ತುತ್ತಮ ಥಿಯೇಟರ್ ಸೆಟಪ್ಪಿನೊಂದಿಗೆ ಚಿತ್ರ ಈ ವಾರ ಅಂದ್ರೆ ನವೆಂಬರ್ 29ರಂದು ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.