ಕಂಟೈನರ್ ಸಾಗಾಣಿಕೆಯ ಕಷ್ಟ ನಷ್ಟಗಳು
Posted date: 25 Wed, Sep 2024 04:25:46 PM
ಗರುಡಾಕ್ಷ ನಿರ್ಮಾಣ ಮಾಡಿದ್ದ ಎಸ್.ನರಸಿಂಹಮೂರ್ತಿ ಗ್ಯಾಪ್ ತರುವಾಯ ಕಂಟೈನರ್ ಸಿನಿಮಾಕ್ಕೆ ಬಂಡವಾಳ ಹೂಡುವ ಜತೆಗೆ ರಚನೆ,ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ, ಕ್ಲೀನ್ ಯು ಪ್ರಮಾಣಪತ್ರ ನೀಡಿ ಶುಭ ಹಾರೈಸಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
 
ನಿರ್ದೇಶಕರು ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿರುವುದರಿಂದ ವೈದ್ಯಕೀಯ ವಿಷಯಕ್ಕೆ ಸಂಬಂದಪಟ್ಟಂತೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಹೆಕ್ಕಿಕೊಂಡು, ಸಣ್ಣ ಹಾಗೂ ಧ್ವನಿ ಇಲ್ಲದ ಕಾರ್ಮಿಕನಿಗೂ ಬೆಲೆ ಇರುತ್ತದೆ ಎಂಬುದನ್ನು ಸಂದೇಶದಲ್ಲಿ ಹೇಳಿದ್ದಾರೆ. ಕ್ಯಾನ್ಸರ್ ಸುಡುವ ಬೃಹದಕಾರದ ಯಂತ್ರವನ್ನು ಉಪಯೋಗಿಸಿದ ತರುವಾಯ ಮರಳಿ ಸ್ಪೈನ್‌ಗೆ ಹಿಂದುರಿಗಿಸ ಬೇಕಾಗಿರುತ್ತದೆ. ಈ ಸಮಯದಲ್ಲಿ ಹಡಗಿನಲ್ಲಿ ಕಂಟೈನರ್ ಸಾಗಿಸುವಾಗ ಅಚಾತುರ್ಯದಿಂದ ಅದರ ಒಳಗಡೆ ಕಾರ್ಮಿಕನೊಬ್ಬ ಬಂದಿಯಾಗುತ್ತಾನೆ. ಒಂದು ದಿನದಲ್ಲಿ ನಡೆಯುವ ಘಟನೆಯಲ್ಲಿ ಆತ ಹೊರಗೆ ಬರುತ್ತಾನಾ? ಅಲ್ಲೆ ನರಳುತ್ತಾನಾ? ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ.
 
ಕಾರ್ಮಿಕನಾಗಿ ದತ್ತಾತ್ರೇಯ ಪೂಜಾರಿ ನಾಯಕ. ಪುಣ್ಯಗೌಡ ನಾಯಕಿ. ಉಳಿದಂತೆ ಮಂಜುನಾಥ್.ಜಿ, ರಂಗನಾಥ್, ಮಂಜು.ಬಿ.ಕೆ ಉದಯಕುಮಾರ್ ಮುಂತಾದವರು ನಟಿಸಿದ್ದಾರೆ. ಸಂಗೀತ ಅಲಂಕಾರ್, ಛಾಯಾಗ್ರಹಣ ಶ್ರೀನಿವಾಸ್, ಸಂಕಲನ ಭಾರ್ಗವ ಅವರದಾಗಿದೆ. ಬೆಂಗಳೂರು, ಮಂಗಳೂರು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಸರಾ ನಂತರ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ. 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed