ಕೆಟಿವಿಎ ಸದಸ್ಯರುಗಳಿಗೆ ``ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್``
Posted date: 11 Fri, Nov 2022 07:04:13 PM
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಳೆದ ವರ್ಷ ನವಂಬರ್ ತಿಂಗಳಲ್ಲಿ "ಅಪ್ಪು ಅಮರ"  ಕಾರ್ಯಕ್ರಮದ ಮೂಲಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಗೌರವ  ಸಲ್ಲಿಸಿದ್ದು ನಿಮಗೆಲ್ಲ ತಿಳಿದಿರುವ ವಿಷಯ. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಕಾವೇರಿ ಆಸ್ಪತ್ರೆಯು, ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ಸಹಯೋಗದಲ್ಲಿ ಕೆಟಿವಿಎ ಸದಸ್ಯರುಗಳಿಗೆ "ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್" ವಿತರಿಸುವ ಭರವಸೆ ನೀಡಿತ್ತು. ಅದರಂತೆ ದಿನಾಂಕ 13 11 2022 ರ ಭಾನುವಾರ ಸಂಜೆ ಐದು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ "ಅಪ್ಪು ಅಮರ ಹೆಲ್ತ್ ಪ್ರಿವೀಲೇಜ್ ಕಾರ್ಡ್" ವಿತರಿಸಲಿದೆ. ಈ ಕಾರ್ಡ್ ಪಡೆದ ಸದಸ್ಯರುಗಳಲ್ಲಿ ಅವಶ್ಯಕತೆ ಇರುವ ಹಾಗೂ ಆರ್ಥಿಕವಾಗಿ ದುರ್ಬಲರಾದ  ಸದಸ್ಯರುಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲು ಕಾವೇರಿ ಆಸ್ಪತ್ರೆ ಮತ್ತು ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ನಿರ್ಧರಿಸಿದೆ. ಇದಲ್ಲದೆ ಈ ಹೆಲ್ತ್ ಕಾರ್ಡ್ ಅಡಿಯಲ್ಲಿ ಎಲ್ಲಾ ಸ್ಪೆಷಾಲಿಟಿ ಸವಲತ್ತುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದು. ಈ  ಸವಲತ್ತನ್ನು ಸುಮಾರು 5000 ಸದಸ್ಯರು ಮತ್ತು ಅವರ ಕುಟುಂಬದವರು ಪಡೆಯಲಿದ್ದಾರೆ.

ಈ ಕಾರ್ಯಕ್ರಮಕ್ಕೆ ತಾವು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮತ್ತು ತಮ್ಮ ಮಾದ್ಯಮದ ಮೂಲಕ ಎಲ್ಲರಿಗೂ ಮೇಲ್ಕಂಡ ವಿಷಯವನ್ನು ತಲುಪಿಸಬೇಕೆಂದು ಕೇಳಿಕೊಳ್ಳುತ್ತೇವೆ.

ಕಾರ್ಯಕ್ರಮ ನಡೆಯುವ ಸ್ಥಳ 
ಸಾಯಿಸಂಗಮ ಡಯಾಗ್ನಾಸ್ಟಿಕ್ ಮತ್ತು ಹೆಲ್ತ್ ಕೇರ್, #106D, ಹೊಸ ನಂಬರ್ 19, 29 ನೇ ಎ ಅಡ್ಡರಸ್ತೆ, 7 ನೇ ಬ್ಲಾಕ್, ಜಯನಗರ, ಯಡಿಯೂರು, ಬೆಂಗಳೂರು - 560070

ದಿನಾಂಕ : 13 - 11 - 2022 ಭಾನುವಾರ, ಸಂಜೆ 5  ಗಂಟೆಗೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed