ಕ್ರಿಕೆಟ್ ಬೆಟ್ಟಿಂಗ್ ಸುತ್ತ ಕ್ರಿಟಿಕಲ್ ಕೀರ್ತನೆಗಳು
Posted date: 01 Sun, May 2022 08:59:15 AM
ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ವಿಭಿನ್ನ ಜಾನರ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಗುರುತಿಸಿಕೊಂಡಿದ್ದ ಕುಮಾರ್ ಅವರೀಗ ಮತ್ತೊಂದು ಹಾಸ್ಯಮಯ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು ’ಕ್ರಿಟಿಕಲ್ ಕೀರ್ತನೆಗಳು’. ನಿರ್ದೇಶನದ ಜೊತೆಗೆ ಕೇಸರಿ ಫಿಲಂಕ್ಯಾಪ್ಚರ್ ಲಾಂಛನದಲ್ಲಿ ತಮ್ಮ ಸ್ನೇಹಿತರ ಜೊತೆಸೇರಿ ಈ ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ, ಈ ಚಿತ್ರವು ಇದೇ ತಿಂಗಳ ೧೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
   
ಕ್ರಿಕೆಟ್ ಬೆಟ್ಟಿಂಗ್‌ನ ಸುತ್ತ ಏನೇನೆಲ್ಲ ನಡೆಯುತ್ತದೆ ಎಂಬ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಅಲ್ಲದೆ ಈ ಚಿತ್ರಕ್ಕಾಗಿ ನವೀನ್ ಸಜ್ಜು ಹಾಡಿರುವ ಐಪಿಎಲ್ಲು ನಮ್ಮೆಲ್ಲರ ಬಾಳು, ಜೂಜಲ್ಲಿಬಿದ್ರೆ ಬಾಳೆಲ್ಲಗೋಳು ಎಂಬ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಈ ಚಿತ್ರಕ್ಕೆ  ಕಥೆ, ಚಿತ್ರಕಥೆ, ಸಂಭಾಷಣೆ ಬರೆದು  ನಿರ್ದೇಶನ  ಮಾಡಿರುವ ಕುಮಾರ್.ಎಲ್. ಅವರಿಗೆ ಇದು ಮೂರನೇ ಚಿತ್ರ. ಈ ಚಿತ್ರದ ಛಾಯಾಗ್ರಹಣವನ್ನು ಶಿವಸೇನ ಮತ್ತು ಶಿವಶಂಕರ್ ನಿರ್ವಹಿಸಿದ್ದಾರೆ. 
   
ಇನ್ನು ಈ ಚಿತ್ರಕ್ಕೆ ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  ಚಿತ್ರದಲ್ಲಿ  ಒಟ್ಟು  ಮೂರು ಹಾಡುಗಳಿದ್ದು, ಸಂಗೀತ ಸಂಯೋಜನೆಯನ್ನು  ವೀರ್ ಸಮರ್ಥ್ ಅವರು ಮಾಡಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರಕ್ಕೆ ನೈಜ ಘಟನೆಯೊಂದು ಪ್ರೇರಣೆ.  ಸಂಪೂರ್ಣ ಹಾಸ್ಯಮಯ ನಿರೂಪಣೆ ಹೊಂದಿದ ಈ ಚಿತ್ರದ  ಪ್ರಮುಖ  ತಾರಾಗಣದಲ್ಲಿ  ತಬಲಾನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗವಿಶ್ವ, ಅಪೂರ್ವ, ದೀಪಾಜಗದೀಶ್, ಅಪೂರ್ವ ಭಾರದ್ವಾಜ್, ಅರುಣ ಬಾಲ್‌ರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ,  ಗುರುರಾಜ ಹೊಸಕೋಟೆ, ಮಾ.ಮಹೇಂದ್ರ, ಮಾ.ಪುಟ್ಟರಾಜು, ಯಶ್ವಂತ್ ಶೆಟ್ಟಿ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed