ಡೆಡ್ಲಿಕಿಲ್ಲರ್ ಟೀಸರ್ ಜಗ್ಗೇಶ್ ಬಿಡುಗಡೆ
Posted date: 09 Wed, Nov 2022 10:50:07 PM
ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನ ಮಾಡಿರೋ ಚಿತ್ರ ಡೆಡ್ಲಿ  ಕಿಲ್ಲರ್. ಐದು ಜನ ವಿಲನ್‌ಗಳು ಹಾಗೂ ಮಹಿಳೆಯೊಬ್ಬಳ ಸುತ್ತ ಹೆಣೆಯಲಾದ ಹಾರರ್, ಥ್ರಿಲ್ಲರ್  ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ  ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನವರಸನಾಯಕ ಜಗ್ಗೇಶ್ 
ಅವರು ಚಿತ್ರದ ಟೀಸರ್ ರಿಲೀಸ್‌ಮಾಡಿ ಮಾತನಾಡುತ್ತ ಬದುಕಿನಲ್ಲಿ ನಮಗೆ ತುಂಬಾ ಜನ ಸ್ನೇಹಿತರು ಸಿಗುತ್ತಾರೆ. ಆದರೆ ನಾವು ಬಿದ್ದಾಗ ನಮ್ಮ ಜೊತೆ ಇರ‍್ತಾರಲ್ಲ ಅವರೇ ನಿಜವಾದ ಸ್ನೇಹಿತರು. ಥ್ರಿಲ್ಲರ್‌ಮಂಜು, ನಾನು ಆರಂಭದಿಂದಲೂ ಸ್ನೇಹಿತರು. ಆ ದಿನಗಳಲ್ಲಿ ನಾನೂ ತುಂಬಾ ನಿರಾಸೆ, ಸಂಕಟಗಳನ್ನು ಅನುಭವಿಸಿದ್ದೇವೆ, ಈ ಚಿತ್ರದ ನಾಯಕ ಅಭಯ್ ಅನಂತನಾಗ್ ಥರ ಕಾಣ್ತಾನೆ.  ನೀನು ಇಲ್ಲೇ ಸಾಧನೆ ಮಾಡಬೇಕೆಂದರೆ, ಈಸಬೇಕು ಇದ್ದು ಜೈಸಬೇಕು ಎಂದು ಹಿತನುಡಿ ಹೇಳಿ ಹಾರೈಸಿದರು. 
 
ಉತ್ತರ ಕರ್ನಾಟಕದ ಪ್ರತಿಭೆ ಅಭಯ್‌ವೀರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಿವೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಥ್ರಿಲ್ಲರ್ ಮಂಜು, ೫ ಜನ ವಿಲನ್‌ಗಳು ಜೊತೆಗೊಬ್ಬ ಹುಡುಗಿಯನ್ನು ಪೊಲೀಸರು ಆಂದ್ರದಲ್ಲಿ ಅರೆಸ್ಟ್ ಮಾಡಿ ಕರ್ನಾಟಕಕ್ಕೆ ಕರೆತರುವಾಗ ಮಾರ್ಗಮದ್ಯೆ ಅವರು ಕಾಡಿನಲ್ಲಿ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ಕಾಡಿನಲ್ಲೇ ಇರುವ ಮನೆಯೊಂದರಲ್ಲಿ ಆಶ್ರಯ ಪಡೆಯುವ ಜೊತೆಗೆ ಆ ಮನೆಯಲ್ಲೇ ಎಲ್ಲರೂ ಲಾಕ್ ಆಗಿಬಿಡುತ್ತಾರೆ, ಅಲ್ಲಿ ಅವರಿಗೆ ಮತ್ತಷ್ಟು ವಿಚಿತ್ರ ಅನುಭವಗಳಾಗುತ್ತವೆ. ಅಲ್ಲಿಂದ ಮುಂದೆ ಅವರು ಪೋಲೀಸರಿಗೆ ಸಿಗ್ತಾರಾ, ಇಲ್ವಾ ಅನ್ನೋದೇ ಕುತೂಹಲ, ಚಿತ್ರದ ಬಹುತೇಕ ಕಥೆಯನ್ನು ಕಾಡು ಹಾಗೂ ಮನೆಯೊಂದರಲ್ಲಿ ಶೂಟ್ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ  ಎಂದು ಹೇಳಿದರು, ನಂತರ ನಾಯಕ ಅಭಯವೀರ್ ಮಾತನಾಡಿ 2 ವರ್ಷದ ಹಿಂದೆಯೇ ನಿದೇಶಕರು ನನಗೀ ಲೈನ್ ಹೇಳಿದ್ದರು. ಅಲ್ಲದೆ ಕಥೆಗೆ ನೀನೇ ಸೂಟ್ ಆಗ್ತೀಯ ಅಂತನೂ ಹೇಳಿದ್ದರು. ಪ್ರಶಾಂತ್ ಅವರಿಗೆ ಈ ಬಗ್ಗೆ ತಿಳಿಸಿದಾಗ ಅವರೂ ಬಂಡವಾಳ ಹಾಕಲು ಒಪ್ಪಿದರು.
 
ಒಂದೇ ಶೆಡ್ಯೂಲ್‌ನಲ್ಲಿ 25 ದಿನ ಟಾಕೀ ಪೋರ್ಷನ್ ಮತ್ತು ಉಳಿದಂತೆ ಆಕ್ಷನ್ ಸೀನ್‌ಗಳನ್ನು ಶೂಟ್ ಮಾಡಿದ್ದೇವೆ. ನಿರ್ಮಾಪಕರು ಸಿನಿಮಾ ಬಗ್ಗೆ ಒಳ್ಳೇ ಅಭಿರುಚಿ ಇಟ್ಟುಕೊಂಡಿದ್ದಾರೆ. ಛಾಯಾಗ್ರಾಹಕ ಮಲ್ಲಿಕಾರ್ಜುನ್ ಅವರು ನಮ್ಮನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ವಿನು ಮನಸು ಅದ್ಭುತ ಮ್ಯೂಸಿಕ್ ಮಾಡಿದ್ದಾರೆ. ಚಿತ್ರದಲ್ಲಿ 6 ಫೈಟ್‌ಗಳಿದ್ದು, ಕಾಡುಜನರ ಜೊತೆ, ಗೆರಿಲ್ಲಾ ಫೈಟ್, 
ಮಳೆಯಲ್ಲಿ ಸೇರಿ ಎಲ್ಲಾ ಸಾಹಸಗಳು ವಿಭಿನ್ನವಾಗಿವೆ ಚಿತ್ರದಲ್ಲಿ ಡೆಡ್ಲಿ ಕಿಲ್ಲರ್ ನಾನೇ, ಆತ ಹೇಗೆ, ಏಕೆ ಡೆಡ್ಲಿಕಿಲ್ಲರ್ ಆದ ಅನ್ನೋದೇ ಚಿತ್ರದ ಕಥೆ ಎಂದು ವಿವರಿಸಿದರು.
 
ಚಿತ್ರದ ನಿರ್ಮಾಪಕ ಪ್ರಶಾಂತ್ ಆರ್. ಮಾತನಾಡುತ್ತ ಕೀರ್ತಿ ಸಿಲ್ವರ್‌ ಸ್ಕ್ರೀನ್ ಮೂಲಕ ಈ ಚಿತ್ರ ಮಾಡಿದ್ದೇವೆ, ಅಭಯ್ ನನ್ನ  ಸ್ನೇಹಿತರು. ಅವರು ಹೇಳಿದ ಸ್ಟೋರಿಲೈನ್ ನನಗೆ ಇಷ್ಟವಾಯಿತು. ಪ್ರತಿ ಹಂತದಲ್ಲೂ ಥ್ರಿಲ್ಲಂಗ್ ಇದೆ. ನನ್ನಜೊತೆ ಸಹೋದರ ಹಾಗೂ ಮತ್ತೊಬ್ಬ ನಿರ್ಮಾಪಕರೂ ಇದ್ದಾರೆ ಎಂದು ಹೇಳಿದರು. 
 
ನಾಯಕಿ ನಿವೀಕ್ಷಾ ಮಾತನಾಡಿ ಥ್ರಿಲ್ಲರ್ ಮಂಜು ಅವರಜೊತೆ ಕೆಲಸ ಮಾಡಿದ್ದೇ ಖುಷಿಯ ವಿಚಾರ, ಅವರು ತುಂಬಾ ಸ್ಪೀಡ್, ಚಿತ್ರದಲ್ಲಿ ನಾನು ಗಂಡನನ್ನು ತುಂಬಾ ಇಷ್ಟಪಡುವ ಮಹಿಳೆಯ ಪಾತ್ರ ಮಾಡಿದ್ದೇನೆ. ನಮ್ಮ ಮನೆ ಕಾಡಿನಲ್ಲಿರುತ್ತದೆ. ಅಲ್ಲಿ ಏನು ನಡೆಯಿತು ಅಂತ ಚಿತ್ರದಲ್ಲಿ ಹೇಳಿದ್ದಾರೆ ಎಂದು ಹೇಳಿಕೊಂಡರು. ಛಾಯಾಗ್ರಾಹಕ ಮಲ್ಲಿಕಾರ್ಜುನ್ ಮಾತನಾಡಿ ಇದು ನನ್ನ 
ಮೂರನೇ ಚಿತ್ರ. ನಿರ್ಮಾಪಕರು ಒಬ್ಬ ಸಿಂಪಲ್ ಮನುಷ್ಯ, ಕೇಳಿದ್ದೆಲ್ಲವನ್ನೂ ಒದಗಿಸಿಕೊಟ್ಟಿದ್ದಾರೆ ಎಂದರು.
 
ಈ ಚಿತ್ರದ ಮೇನ್‌ಪಿಲ್ಲರ್ ಎಂದರೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಲೋಕೇಂದ್ರಸೂರ್ಯ. ಚಿತ್ರದ ವರ್ಕ್ ಅಲ್ಲದೆ ಡೈಲಾಗ್‌ಗಳನ್ನೂ ಬರೆದಿದ್ದೇನೆ. ಜೊತೆಗೆ ಈಗಲ್ ಎನ್ನುವ ಪುಟ್ಟ ಪಾತ್ರ ಸಹ ಮಾಡಿದ್ದೇನೆ ಎಂದವರು 
ಹೇಳಿಕೊಂಡರು.
 
ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ ಚಿತ್ರದಲ್ಲಿ 3 ಹಾಡುಗಳಿದ್ದು, 2 ಲವ್‌ಸಾಂಗ್ ಮತ್ತು ಒಂದು ಹಾರರ್ ಸಾಂಗ್ ಮಾಡಿದ್ದೇನೆ, ವಿಶೇಷವಾಗಿ ದೆವ್ವದ ಕೈಲಿ ಇಂಗ್ಲೀಷ್ ಹಾಡನ್ನ ಹಾಡಿಸಿದ್ದೇವೆ ಎಂದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed