ದೀಪಾವಳಿಗೆ ಮನು ರವಿಚಂದ್ರನ್ ಅಭಿನಯದ `ಮುಗಿಲ್ ಪೇಟೆ`ತೆರೆಗೆ
Posted date: 30 Thu, Sep 2021 12:22:08 PM
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನು ನಾಯಕನಾಗಿ ನಟಿಸಿರುವ "ಮುಗಿಲ್ ಪೇಟೆ" ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಚಿತ್ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. 
 "ಮುಗಿಲ್ ಪೇಟೆ " ಅದ್ದೂರಿಯಾಗಿ ಮೂಡಿಬಂದಿದ್ದು, ಸಿನಿರಸಿಕರಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಲಿದೆ.

ಈ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

 ಮನು ಅವರಿಗೆ ನಾಯಕಿಯಾಗಿ  ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು "ಮುಗಿಲ್ ಪೇಟೆ" ಯಲ್ಲಿ ಅಭಿನಯಿಸಿದ್ದಾರೆ.

 ಭರತ್ ಎಸ್ ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. 
ಈ ಹಿಂದೆ "ಅಡಚಣೆಗಾಗಿ ಕ್ಷಮಿಸಿ" ಚಿತ್ರ ನಿರ್ದೇಶಿಸಿದ್ದ ಭರತ್ ಅವರಿಗೆ ಇದು ಎರಡನೇ ಚಿತ್ರ.

ಆರು‌ ಸುಮಧುರ ಹಾಡುಗಳಿರುವ ಈ‌ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ "ಮುಗಿಲ್ ಪೇಟೆ" ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.‌
 ಅರ್ಜುನ್ ಕಿಟ್ಟು ಸಂಕಲನ,
 ಡಾ||ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನ,  ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed