ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಭೀಮ ಸಲಗ ವಿಜಯ್
Posted date: 28 Mon, Oct 2024 09:39:22 AM
ಪ್ರಸನ್ನ ಥಿಯೇಟರಿನಲ್ಲಿ ಹೌಸ್ ಫುಲ್ ಆಗಿದ್ದ ಪ್ರೇಕ್ಷಕರೆದುರಿಗೆ  ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ನ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಲೋಕಾರ್ಪಣೆ ಮಾಡಿದ್ರು... ಹೊಸ ನಿರ್ದೇಶಕ, ಹೊಸ ನಾಯಕ. ಹೊಸ ನಿರ್ಮಾಣ ಸಂಸ್ಥೆಯ ಈ ಅದ್ಧೂರಿ ಚಿತ್ರದ ಕಂಟೆಂಟ್ ನೋಡಿ, ತುಂಬು ಹೃದಯದಿಂದ ಸಲಗ ವಿಜಯ್ ಕುಮಾರ್ ಈ ಚಿತ್ರತಂಡದ ಬೆನ್ನಿಗೆ ನಿಂತು ಈ ಕೆಲಸ ಮಾಡಿದ್ದಾರೆ. 
 
ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ತುಂಬಾ ಪ್ರಾಮಿಸಿಂಗ್ ಆಗಿದೆ...  ಕರ್ಣನ್ ಅನ್ನೋ ನವ ನಿರ್ದೇಶಕ ಈ ಚಿತ್ರಕ್ಕೆ ಕಥೆ ಚಿತ್ರಕತೆ  ಜೊತೆಗೆ  ನಿರ್ದೇಶನ ಮಾಡಿದ್ದಾರೆ.. ರಾಕೇಶ್ ದಳವಾಯಿ ಅನ್ನೋ ನವ ನಾಯಕ ನಟ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸೋದಕ್ಕೆ ಸಜ್ಜಾಗಿದ್ದು, ನಾಯಕಿಯಾಗಿ ಸುಚರಿತಾ ಅನ್ನೋ ಹೊಸ ಮುಖ ಪರಿಚಯವಾಗ್ತಿದೆ. ಇವ್ರ ಜೊತೆಗೆ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್ , ಕೆ.ಎ ಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ  ಸೇರಿ ಪ್ರತಿಭಾನ್ವಿತಾ ತಾರಾ ಬಳಗವಿದೆ.  ವೈಟ್ ಲೋಟಸ್ ಎಂಟರ್ಟೈನ್ಮೆಂಟ್  ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.  ತಾಂತ್ರಕವಾಗಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿರೋ ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. 
ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಡೆಯೋ  ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ನಾಲ್ಕಾರೂ ಆಯಾಮಾಗಳಲ್ಲಿ ಕಾಣ್ತಿದೆ. ಅಷ್ಟೇ ಭರವಸೆಯಾಗಿ ಕಾಣ್ತಿರೋ ಈ ಚಿತ್ರದ ಇದೇ ಡಿಸೆಂಬರ್ಗೆ ಪ್ರೇಕ್ಷಕರೆದುರಿಗೆ ಬರ್ತಿದೆ. 

ಧೀರ ಭಗತ್ ರಾಯ್ ಬಗ್ಗೆ  ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಮನದಾಳದ ಮಾತು  ಈ ತರಹದ ಕಾರ್ಯಕ್ರಮಗಳಿಗೆ ಬರೋದು ನನಗೆ ತುಂಬಾ ಇಷ್ಟ.. ಧೀರ ಭಗತ್ ರಾಯ್ ಸಮಾನತೆಗೆ ಒತ್ತು ಕೊಡುವ ಚಿತ್ರ ಮತ್ತು ತಂಡದ ಜೊತೆಗೆ ನಾ ಇರ್ತೀನಿ ಯಾಕಂದ್ರೆ ಸಮಾನತೆ ಅನ್ನೋದು ನನಗೆ ಬಹಳ ಹೆಮ್ಮೆ ತರುವಂತ ವಿಚಾರ ಅದರಲ್ಲೂ ಹೋರಾಟಗಾರರು ಹೋರಾಟಗಾರರು ಕಥೆ ಅಂದ್ರೆ ನನಗೆ ಪ್ರೀತಿ...
 
ಹೋರಾಟದ ಕಥೆಗಳಲ್ಲಿ ಕಿಚ್ಚು ಇರುತ್ತೆ ನ್ಯಾಯ ನೀತಿ ಇರುತ್ತೆ ಅದಕ್ಕೆ ಈ ಚಿತ್ರ ಜೊತೆಗೆ ನಾ ನಿಂತಿದ್ದೀನಿ..
ಹೊಸ ತಂಡ ಹೊಸಬರು ಮಾಡುವಂತಹ ಕಥೆಗಳು ವಿಭಿನ್ನವಾಗಿರುತ್ತವೆ  ನಾವು ಸಿನಿಮಾ ಮಾಡುವಾಗಲೇ ತುಂಬಾ ಕಷ್ಟ ಇತ್ತು,,ಆದರೆ ಈಗ ಇನ್ನೂ ಕಷ್ಟ ಜಾಸ್ತಿ ಇದೆ ಒಂದು ಚಿತ್ರ ಮಾಡೋದು ಅಂದ್ರೆ ಏಳೆಂಟು ಜನ್ಮ ಎತ್ತಿದ ಹಾಗೆ.
 
ಧೀರ ಭಗತ್ ರಾಯ್ ಸತ್ಯ ನ್ಯಾಯ ನೀತಿ ಹೋರಾಟ ಇವೆಲ್ಲವುಗಳನ್ನ ಒಳಗೊಂಡ ಚಿತ್ರ ಇದು ಅನ್ನೋದು ನನ್ನ ಭಾವನೆ, ಈ ಕುರಿತು ಚಿತ್ರತಂಡ ನನ್ನೊಟ್ಟಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ ನನಗೆ ತುಂಬಾ ಖುಷಿಯಾಗಿದೆ.
 
ಪೊಲೀಸು ಕೋರ್ಟು ನ್ಯಾಯ ಅನ್ನೋದನ್ನ ನಾವು ನಂಬಬೇಕು ಸತ್ಯಕ್ಕೆ ಜಯ ಸಿಗ್ತಾ ಇದೆ, ನಾನು ಕೂಡ ಪೊಲೀಸರನ್ನು ಕಾನೂನನ್ನ ಕೋರ್ಟ್ ಅನ್ನ ನ್ಯಾಯವನ್ನ ನಂಬ್ತಿನಿ ಹಾಗೂ ಅದನ್ನ ಬೆಂಬಲಿಸ್ತೀನಿ.
 
ಪೊಲೀಸ್ ವ್ಯವಸ್ಥೆ ಕೋರ್ಟು ನ್ಯಾಯ ಅನ್ನೋದು ಇಲ್ಲದೆ ಹೋಗಿದ್ರೆ ಭಾರತದ ಪರಿಸ್ಥಿತಿ ನಮ್ಮ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು...
ಧೀರ ಭಗತ್ ರಾಯ್ ಟ್ರೈಲರ್ ಲಾಂಚ್ ಮಾಡಿ ಟ್ರೈಲರ್ ನೋಡಿದಾಗ ನನಗೆ ತುಂಬಾ ಹೆಮ್ಮೆ ಅನಿಸ್ತಿದೆ ಇಂತಹ ಸಿನಿಮಾಗಳು ಗೆಲ್ಲಬೇಕು ನ್ಯಾಯ ನೀತಿ ಸತ್ಯ ಯಾವತ್ತೂ ಜನರಿಗೆ ಸಿಗುವಂತಾಗಬೇಕು.
 
ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಒಳ್ಳೆಯ ನಾಯಕ ನಾಯಕಿ ನಿರ್ದೇಶಕರು ಹಾಗೂ ಒಂದು ಒಳ್ಳೆಯ ತಂಡ ಸಿಕ್ಕಂತಾಗಿದೆ ಅನ್ನೋ ಭರವಸೆ ನನಗಿದೆ.
 
ನೀವೆಲ್ಲರೂ ನಾವೆಲ್ಲರೂ ಕಥೆಯನ್ನ ಆರಾಧಿಸೋಣ ಕಥೆ ಗೆದ್ದರೆ ನಾವು ಗೆಲ್ತಿವಿ ನಮ್ಮನ್ನು ನಾವು ಆರಾಧಿಸಿಕೊಳ್ಳುವುದು ಬೇಡ ಇದು ನನ್ನ ಸಲಹೆ.
 
ಭೀಮದಲ್ಲಿ ನಾನು ಕೂಡ ಒಂದು ಪಾತ್ರವಾಗಿದ್ದೆ ಅಷ್ಟೇ ಆದರೆ ಚಿತ್ರಕ್ಕೆ ತಿದ್ದು ಕಥೆಯಿಂದ ಹೀಗಾಗಿ ನಾವೆಲ್ಲರೂ ಕಥೆಯನ್ನು ಆರಾಧಿಸೋಣ.
ಒಳ್ಳೆಯ ಕಲಾವಿದರು ಒಳ್ಳೆಯ ತಂತ್ರಜ್ಞರು ಸಹೃದಯಿ ನಿರ್ಮಾಪಕರು ನೀವೆಲ್ಲ ಸೇರಿ ಮಾಡಿದ ಈ ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು...
ಜೈಭೀಮ್

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed