ನಟ,ನಿರ್ಮಾಪಕ ಅಲ್ಲದೆ ರಾಜಕಾರಣಿ ಗಣೇಶ್‌ರಾವ್ ಕೇಸರ್‌ಕರ್ .. ಅಸುರ ಕುಲತಿಲಕ `ತಾರಕೇಶ್ವರ` ನ ಅವತಾರದಲ್ಲಿ ಶುಕ್ರವಾರ ಅಂದರೆ ನ.14ರಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ
Posted date: 14 Thu, Nov 2024 11:15:44 PM
ಕನ್ನಡದಲ್ಲಿ ಇದೀಗ ಮೈಥಲಾಜಿಕಲ್ ಚಿತ್ರಗಳು ಹೆಚ್ಚಾಗಿ ಪ್ರೇಕ್ಷಕರನ್ನು ಸೆಳೆಯುತ್ತಿವೆ.   ಮತ್ತೊಂದು ಪುರಾಣದ ಕಥೆ ಹೇಳುವ ಚಿತ್ರ ಈ ಶುಕ್ರವಾರ ಅಂದರೆ ನ.14ರಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ, ಆ ಚಿತ್ರದ ಹೆಸರು "ತಾರಕೇಶ್ವರ".
 ಇದು ಪರಮೇಶ್ವರನ ಮತ್ತೊಂದು ಅವತಾರ ಕೂಡ. ತಾರಕಾಸುರ  ಒಬ್ಬ ರಾಕ್ಷಸನಾದರೂ ಅಪ್ಪಟ ಶಿವಭಕ್ತ, ಆತ ಪರಶಿವನ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿರುತ್ತಾನೆ. 
 
ನಟ, ನಿರ್ಮಾಪಕ ಅಲ್ಲದೆ ರಾಜಕಾರಣದಲ್ಲೂ  ಸಕ್ರಿಯರಾಗಿರುವ ಗಣೇಶ್‌ರಾವ್ ಕೇಸರ್‌ಕರ್ ಅವರು ತಮ್ಮದೇ ಆದ ಜಿ.ಆರ್. ಫಿಲಂಸ್ ಸಂಸ್ಥೆಯು ಮೂಲಕ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ, ಭಕ್ತಿಪ್ರಧಾನ ಕಥಾಹಂದರ ಒಳಗೊಂಡ ಈ  ಚಿತ್ರಕ್ಕೆ ಪುರುಷೋತ್ತಮ್ ಓಂಕಾರ್ ಅವರು  ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ, ಈ ಚಿತ್ರದಲ್ಲಿ ಗಣೇಶ್‌ರಾವ್ ಕೇಸರ್‌ಕರ್ ಅವರೇ ಅಸುರ ಕುಲತಿಲಕ `ತಾರಕೇಶ್ವರ` ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ, ಮೈಥಲಾಜಿಕಲ್ ಕಥಾಹಂದರ ಒಳಗೊಂಡ  ಈ ಚಿತ್ರದ  ಟ್ರೈಲರ್  ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುವ ಮೂಲಕ ಜನರಲ್ಲಿ  ಚಿತ್ರ ನೋಡುವ ಆಸಕ್ತಿಯನ್ನು ಹುಟ್ಟು ಹಾಕಿದೆ.  ಗಣೇಶ್‌ರಾವ್ ಕೇಸರಕರ್ ಅವರ ಅಭಿನಯದ 333ನೇ ಚಿತ್ರವೂ ಇದಾಗಿದ್ದು, ತಮ್ಮದೇ ಜಿಆರ್ ಫಿಲಂಸ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡುವ  ಜೊತೆಗೆ  ಅವರೇ  ನಾಯಕ ತಾರಕೇಶ್ವರನ ಪಾತ್ರದಲ್ಲೂ  ಸಹ ಕಾಣಿಸಿಕೊಂಡಿದ್ದಾರೆ. 
 
ಚಿತ್ರದ ಕುರಿತಂತೆ ಮಾತನಾಡಿದ ಗಣೇಶರಾವ್ ಕೇಸರಕರ್ ನಮ್ಮ ಬ್ಯಾನರ್‌ನಲ್ಲಿ ಮೊದಲಬಾರಿಗೆ ನಿರ್ಮಿಸಿದ  ಚಿತ್ರವಿದು. ಈಗಾಗಲೇ ಚಿತ್ರದ ಬಗ್ಗೆ ಎಲ್ಲಾ ಕಡೆ ಒಳ್ಳೇ ಟಾಕ್ ಬರುತ್ತಿದೆ, ಇತ್ತೀಚೆಗೆ ಪ್ರೇಕ್ಷಕರು ಪೌರಾಣಿಕ ಚಿತ್ರಗಳನ್ನು ಹೆಚ್ಚು  ಇಷ್ಟಪಡುತ್ತಿದ್ದಾರೆ, ಕನ್ನಡ ಜನತೆಗೆ ಒಂದೊಳ್ಳೆ ಸಿನಿಮಾ ಕೊಡಬೇಕೆಂದು ನಾನೀ ಚಿತ್ರವನ್ನು ನಿರ್ಮಿಸಿದ್ದೇನೆ, ಯಾವತ್ತೂ ನಾನು ಹಣಕ್ಕೆ ಪ್ರಾಮುಖ್ಯತೆ ಕೊಡುವವನಲ್ಲ, ಉತ್ತಮ ಪೌರಾಣಿಕ ಚಿತ್ರವೊಂದನ್ನು ಕನ್ನಡಿಗರು ಸ್ವೀಕರಿಸುತ್ತಾರೆಂಬ ನಂಬಿಕೆಯಿದೆ, ಇಡೀ ಚಿತ್ರತಂಡ ಸೇರಿ ಬಹಳ ಶ್ರದ್ದೆಯಿಂದ ಚಿತ್ರವನ್ನು ನಿರ್ಮಿಸಿದ್ದೇವೆ, ಪೌರಾಣಿಕ ಸಿನಿಮಾ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ  ಲೊಕೇಶನ್‌ಗಳಲ್ಲಿ ಮಾಡೋದು ತುಂಬಾ ಕಷ್ಟ, ಬಿಲ್ಡಿಂಗ್, ವಿದ್ಯುತ್‌ ಕಂಭ ಇದ್ಯಾವುದೂ ಇಲ್ಲದ ಲೊಕೇಶನ್ ಹುಡುಕೋದು ತುಂಬಾ  ಕಷ್ಟ.  ಸೆಟ್‌ನಲ್ಲೇ ಬಹುತೇಕ ಚಿತ್ರೀಕರಣ ನಡೆಸಬೇಕಿರುತ್ತದೆ, ಅದಕ್ಕೆ ಬಜೆಟ್ ಕೂಡ ಜಾಸ್ತಿ ಬೇಕು, ನಿರ್ಮಾಪಕರ  ಕಷ್ಟ ಏನೆಂದು ನನಗೀಗ ಅರ್ಥವಾಗಿದೆ ಎಂದು ಹೇಳಿದರು.  
 
ನಿರ್ದೇಶಕ ಪುರುಷೋತ್ತಮ್ ಓಂಕಾರ್ ಮಾತನಾಡುತ್ತ ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಗಣೇಶ್‌ರಾವ್ ಅವರಿಗೆ ತಾರಕೇಶ್ವರನ ಕುರಿತಂತೆ ಒನ್‌ಲೈನ್ ಕಥೆ ಹೇಳಿದ್ದೆ. ಶಿವಪುರಾಣದಲ್ಲಿ ತಾರಕಾಸುರ ಅಸುರನೇ ಆದರೂ, ತಂದೆಯನ್ನು  ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪಸ್ಸು ಮಾಡಿ ತನಗೆ ಯಾರಿಂದಲೂ ಸಾವು ಬರದಂತೆ ಬ್ರಹ್ಮನಿಂದ ವರವನ್ನು ಪಡೆದುಕೊಳ್ಳುತ್ತಾನೆ. ಮುಂದೆ ಆತ ಯಾವರೀತಿ ಹೋರಾಟ ಮಾಡುತ್ತಾನೆ ಎಂದು ಈ ಚಿತ್ರ ಹೇಳುತ್ತದೆ. ಸ್ಕಂದ ಪುರಾಣವನ್ನು ಆಧರಿಸಿ ತಾರಕಾಸುರ ಚಿತ್ರದ ಚಿತ್ರಕಥೆಯನ್ನು  ರಚಿಸಿದ್ದೇವೆ. ಇದು ನನ್ನ ನಿರ್ದೇಶನದ  33ನೇ ಚಿತ್ರ. ಸುಬ್ರಮಣ್ಯನ ಜನನ ಹೇಗಾಯ್ತು,  ದೇವತೆಗಳ ಮೇಲೆ ತಾರಕಾಸುರನ ಅಟ್ಟಹಾಸ, ಆತನ ಅಂತ್ಯ ಹೇಗಾಯಿತು ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಸುಬ್ರಮಣ್ಯನಾಗಿ ಟೆಕ್ವಾಡೋ ಗರ್ಲ್ ಖ್ಯಾತಿಯ ರುತು ಸ್ಪರ್ಷ ನಟಿಸಿದ್ದಾರೆ, ನಟಿ ರೂಪಾಲಿ ಅವರು ದೇವಿ  ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ, ಗಣೇಶ್‌ರಾವ್  ಕೇಸರಕರ್ ಅವರ ಪುತ್ರ ಪ್ರಜ್ವಲ್ ಕೇಸರಕರ್ ಅವರು  ಇಂದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು  ಸುತ್ತಮುತ್ತ ಚಿತ್ರದ  ಚಿತ್ರೀಕರಣ ನಡೆಸಲಾಗಿದೆ ಎಂದು  ಹೇಳಿದರು.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed