"ಆಪರೇಶನ್ ಅಲಮೇಲ್ಲಮ್ಮ", " ಕವಲುದಾರಿ" ಮೂಲಕ ಕನ್ನಡಿಗರ ಮನ ಸೆಳೆದಿರುವ ನಟ ರಿಷಿ, ಈಗ ಕನ್ನಡ ಹಾಗೂ ತೆಲುಗು ಎರಡು ಬಾಷೆಗಳಲ್ಲೂ ಬೇಡಿಕೆ ನಟ. ಪ್ರಸ್ತುತ ರಿಷಿ ನಾಯಕನಾಗಿ ನಟಿಸಿರುವ "ರುದ್ರ ಗರುಡ ಪುರಾಣ" ಚಿತ್ರದ "ಹುಕ್ಕಾ ಹೇಳಿ ಸುಕ್ಕಾ ಹೊಡಿ. ಶೋಕಿ ಮಾಡು ಜೀವನಾನ" ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿನ ಮುಖಾಂತರ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ವಿಡಂಬನೆ ಮಾಡಿರುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ ಹಾಡಿನಲ್ಲಿ ಬರುವ. "ಫ್ರೀ ರೈಸ್ ಕೊಟ್ಟಿಲ್ವಾ ಫ್ರೀ ಬಸ್ಸು ಬಿಟ್ಟಿಲ್ವಾ. ಕೊಟ್ಟು ತಗೋಳೋ ಆಟ ಗೊತ್ತಿಲ್ವಾ" ಎಂಬ ಸಾಲುಗಳು ಓಟಿಗಾಗಿ ರಾಜಕೀಯ ನಾಯಕರ ಮೋಸದಾಟವನ್ನು ಪದಗಳ ಮೂಲಕ ಚೆನ್ನಾಗಿ ಮಂಜು ಮಾಂಡವ್ಯ ಬರೆದಿದ್ದಾರೆ. ಕೆಪಿ ಸಂಗೀತ ನೀಡಿದ್ದಾರೆ. ಅಶ್ವಿನಿ ಆರ್ಟ್ಸ್ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಜನವರಿ 24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಗುತ್ತಿದೆ.
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ "ಡಿಯರ್ ವಿಕ್ರಮ್" ಚಿತ್ರವನ್ನು ನಿರ್ದೇಶಿಸಿದ್ದ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಈ ಚಿತ್ರಕ್ಕಿದೆ.
ರಿಷಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ಅಭಿನಯಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ರಿದ್ವಿ, ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ಪ್ರಭಾಕರ್ ಬೋರೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.