ನವೆಂಬರ್ 25 ರಿಂದ ರಾಜ್ಯಾದ್ಯಂತ ``ತ್ರಿಬಲ್ ರೈಡಿಂಗ್`` ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
Posted date: 21 Mon, Nov 2022 09:01:24 AM
ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ  ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ನಾಯಕ ಗಣೇಶ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತಾದ ತಮ್ಮ ಅನುಭವವನ್ನು ಈ ಸುಂದರ ಸಮಾರಂಭದಲ್ಲಿ ಹಂಚಿಕೊಂಡರು.

ನಾನು ಈ ರೀತಿಯ ಪಾತ್ರ ಇದುವರೆಗೂ ಮಾಡಿಲ್ಲ. ಇದೇ ಮೊದಲು ಎನ್ನಬಹುದು. ಚಿತ್ರದಲ್ಲಿ ಬರುವ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಹಿಡಿಸಲಿದೆ. ಕ್ಲೈಮ್ಯಾಕ್ಸ್ ಅಂತೂ ಅದ್ಭುತ. ಈಗಾಗಲೇ ಚಿತ್ರ ನೋಡಿರುವ ಗೆಳೆಯರು, ನನಗೆ ಫೋನ್ ಮಾಡಿ ನೀವು ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಕಾಣುತ್ತಿದ್ದೀರ ಎಂದರು. ಆ ಕ್ರೆಡಿಟ್ ಛಾಯಾಗ್ರಾಹಕ ಜೈ ಆನಂದ್ ಅವರಿಗೆ ಸಲ್ಲಬೇಕು. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಅಮೋಘವಾಗಿ ನಟಿಸಿದ್ದಾರೆ.  ಉತ್ತಮ ಚಿತ್ರ ನಿರ್ದೇಶಿಸಿರುವ ಮಹೇಶ್ ಗೌಡ ಹಾಗೂ ನಿರ್ಮಿಸಿರುವ ರಾಮ್ ಗೋಪಾಲ್ ಅವರಿಗೆ ಧನ್ಯವಾದ ಎಂದರು ನಾಯಕ ಗಣೇಶ್.

ಈ ಚಿತ್ರದ ಕಥೆ ಒಪ್ಪಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ರಾಮ್ ಗೋಪಾಲ್ ಅವರಿಗೆ ಹಾಗೂ ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇದೇ ಇಪ್ಪತ್ತೈದರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ. 

ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಆ ದಿನದಿಂದ ಹಿಡಿದು ಇಲ್ಲಿಯವರೆಗೂ ನಮ್ಮ ಇಡೀ ತಂಡ ನೀಡಿರುವ ಸಹಕಾರಕ್ಕೆ ನಾನು ಆಬಾರಿ. ನಮ್ಮ  ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ರಾಮ್ ಗೋಪಾಲ್ ವೈ ಎಂ. 

ನಾಯಕಿಯರಾದ ಅದಿತಿ ಪ್ರಭುದೇವ, ಮೇಘ ಶೆಟ್ಟಿ, ರಚನಾ ಇಂದರ್, ಚಿತ್ರದಲ್ಲಿ ಅಭಿನಯಿಸಿರುವ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಸಂಗೀತ ನಿರ್ದೇಶಕ ಸಾಯಿಕಾರ್ತಿಕ್ ಹಾಗೂ ಛಾಯಾಗ್ರಾಹಕ ಜೈ ಆನಂದ್ "ತ್ರಿಬಲ್ ರೈಡಿಂಗ್" ಜರ್ನಿ ಬಗ್ಗೆ ವಿವರಿಸಿದರು. ಸಮಾರಂಭದ ಆರಂಭದಲ್ಲಿ ನಾಯಕ ಗಣೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಈಗಾಗಲೇ ಜನಪ್ರಿಯವಾಗಿರುವ ಚಿತ್ರದ "ಯಟ್ಟ ಯಟ್ಟ" ಹಾಡಿಗೆ ಇಡೀ ತಂಡ ಹೆಜ್ಜೆ ಹಾಕುವುದರ ಮೂಲಕ ಸಮಾರಂಭದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed