ಪ್ಯಾನ್‌ ಇಂಡಿಯನ್‌ ಸ್ಟಾರ್‌ ಪ್ರಭಾಸ್‌ಗೆ ಹ್ಯಾಪಿ ಬರ್ತ್‌ಡೇ ಅಕ್ಟೋಬರ್ 23rd - ಬಿಗ್‌ ಬಜೆಟ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ
Posted date: 23 Wed, Oct 2024 08:25:08 AM
ಟಾಲಿವುಡ್‌ ನಟ ಪ್ರಭಾಸ್‌ಗೆ ಇದೀಗ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಪ್ಯಾನ್‌ ಇಂಡಿಯಾ ಸ್ಟಾರ್‌ಡಮ್‌ಗೆ ಮತ್ತೊಂದು ಮೆರುಗು ನೀಡಿದರು ಈ ತೆಲುಗು ನಟ. ಸೌತ್‌ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಖ್ಯಾತಿ ಗಿಟ್ಟಿಸಿಕೊಂಡು, ದೇಶವ್ಯಾಪಿ ಹೆಸರು ಮಾಡಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ನಟ ಪ್ರಭಾಸ್‌ ಅವರ ಸಿನಿಮಾಗಳು ಮಾಡಿದ ಮೋಡಿಯೂ ಸಣ್ಣದೇನಲ್ಲ. ಹಲವು ದಾಖಲೆಗಳನ್ನೂ ಸೃಷ್ಟಿಸಿದ್ದಾರೆ. ಇದೀಗ ಇದೇ ಬರ್ತ್‌ಡೇ ಬಾಯ್‌ ಅವರ ಈ ಸಕ್ಸಸ್‌ ಜರ್ನಿ ಹೇಗಿತ್ತು ಇಲ್ಲಿದೆ ನೋಡಿ. 

ಬಾಕ್ಸ್ ಆಫೀಸ್ ದಾಖಲೆ
ಪ್ರಭಾಸ್ ಅವರ ಸಿನಿಮಾಗಳು ತಮ್ಮ ಸಿನಿಮಾಗಳ ದಾಖಲೆಯನ್ನೇ ದಿನದಿಂದ ದಿನಕ್ಕೆ ಮುರಿದು ಮುನ್ನಡೆಯುತ್ತಿವೆ. ಬಾಹುಬಲಿ: ದಿ ಬಿಗಿನಿಂಗ್ ಮೊದಲ ದಿನ ₹ 75 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿತು. ಇದರ ನಂತರ ಬಾಹುಬಲಿ: ದಿ ಕನ್‌ಕ್ಲೂಷನ್, ಬಾಕ್ಸ್ ಆಫೀಸ್‌ನಲ್ಲಿ ಬೆರಗುಗೊಳಿಸುವ ಮೂಲಕ ಮೊದಲ ದಿನ ₹200 ಕೋಟಿ ಗಳಿಸಿತು. ಸಾಹೋ ಮೊದಲ ದಿನ ₹130 ಕೋಟಿ ಗಳಿಸಿದರೆ, ಸಲಾರ್ ₹ 178 ಕೋಟಿ ಕಲೆಕ್ಷನ್‌ ಮಾಡಿತು. ಕಲ್ಕಿ 2898 AD ₹180 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್‌ ಆಯಿತು. 

ಕಲ್ಕಿಯಿಂದ ಮುಂದುವರಿದ ಯಶಸ್ಸು
ಇತ್ತೀಚೆಗೆ ಬಿಡುಗಡೆಯಾದ ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 AD ಸಿನಿಮಾ, ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾ. ವಿಶ್ವಾದ್ಯಂತ ₹ 1100 ಕೋಟಿಗಳನ್ನು ಗಳಿಸಿ, ಜಾಗತಿಕ ಸಿನಿಮೀಯ ಐಕಾನ್ ಆಗಿ ಪ್ರಭಾಸ್ ಸ್ಥಾನವನ್ನು ಭದ್ರಪಡಿಸಿದೆ. ಈ ಚಿತ್ರವು ಮೊದಲ ವಾರಾಂತ್ಯದಲ್ಲಿ ₹500 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ, ಹೊಸ ದಾಖಲೆ ಬರೆಯಿತು. 

ಜಾಗತಿಕ ಮಟ್ಟದಲ್ಲಿಯೂ ಮಿಂಚು..
ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪ್ರಭಾಸ್‌ ಸಿನಿಮಾಗಳಿಗೆ ಬೇಡಿಕೆ ಇವೆ. ಬಾಹುಬಲಿ 2: ದಿ ಕನ್‌ಕ್ಲೂಷನ್ ಸಿನಿಮಾ ವಿದೇಶದಲ್ಲಿ ₹396.5 ಕೋಟಿ ಕಲೆಕ್ಷನ್ ಮಾಡಿದ್ದರೆ, ಕಲ್ಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ₹275.4 ಕೋಟಿ ಗಳಿಸಿದೆ. ಸಲಾರ್: ಭಾಗ 1 -ಸೀಸ್‌ ಫೈರ್‌  ₹137.8 ಕೋಟಿ ಕಲೆಕ್ಷನ್‌ ಮಾಡಿದೆ. ಅದೇ ರೀತಿ ಸಾಹೋ  ಸಿನಿಮಾ ₹78.5 ಕೋಟಿಗಳನ್ನು ಗಳಿಸಿತು. ಈ ಮೂಲಕ ಗಡಿ ಮೀರಿ ಮುಂದಡಿ ಇರಿಸಿದ್ದಾರೆ ಪ್ರಭಾಸ್‌. 

ಪ್ರಭಾಸ್‌ ಮುಂಬರುವ ಸಿನಿಮಾಗಳು
ಸಲಾರ್ 2: ಶೌರ್ಯಂಗ ಪರ್ವಂ" ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಲಿರುವ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed