ಪ್ರಿಯಾಂಕ ಉಪೇಂದ್ರ ಅಭಿನಯದ `ಉಗ್ರಾವತಾರ` ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದ ಸಂಭ್ರಮದಲ್ಲಿ ಚಿತ್ರ ತಂಡ
Posted date: 25 Mon, Nov 2024 06:48:24 PM
ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ `ಉಗ್ರಾವತಾರ` ಸಿನಿಮಾವು ಸೇರ್ಪಡೆಯಾಗಿದೆ. ಕನ್ನಡ ದಿನದಂದು ಬಿಡುಗಡೆಯಾಗಿ ಸತತ 25 ದಿನಗಳ ಕಾಲ ಪ್ರದರ್ಶನಗೊಂಡು ಮುನ್ನುಗುತ್ತಿದೆ. ಇದರನ್ವಯ ನಿರ್ಮಾಪಕ ಸತೀಶ್ ಮತ್ತು ನಿರ್ದೇಶಕ ಗುರುಮೂರ್ತಿ ಸಂತೋಷ ಸಂಭ್ರಮವನ್ನು ಏರ್ಪಡಿಸಿ, ಸಿನಿಮಾಕ್ಕೆ ದುಡಿದವರಿಗೆ ನೆನಪಿನ ಕಾಣಿಕೆ ನೀಡಿದರು.
 
ಮೇಡಂ ಡೆಡಿಕೇಶನ್, ಶ್ರಮ ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಅದರಿಂದಲೇ ಅವರಿಗೆ ಆಕ್ಷನ್‌ಕ್ವೀನ್ ಬಿರುದು ಬಂದಿದೆ. ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಓಡ್ತಾ ಇದೆ. ನಿಮ್ಮಗಳ ಪ್ರೋತ್ಸಾಹ ಹೀಗೆ ಇರಲಿ ಎಂಬುದು ನಿರ್ದೇಶಕರ ಸಂತಸದ ನುಡಿಯಾಗಿತ್ತು.
 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, ಇದು ನನ್ನ ಜೀವನದಲ್ಲಿ ಮೈಲಿಗಲ್ಲು ಎನ್ನಬಹುದು. ನಟನೆ ಹಾಗೂ ದೈಹಿಕವಾಗಿ ಹೊಸ ಅನುಭವ. ಇಂತಹ ಸಾಹಸಮಯ ಪಾತ್ರ ಸೂಟ್ ಆಗುವುದಿಲ್ಲವೆಂದು ಎಲ್ಲರೂ, ಅಲ್ಲದೆ ಉಪ್ಪಿ ಸಹ ಹೇಳಿದ್ದರು. ಆದರೆ ನಾನು ಮೊಂಡು ಸ್ವಭಾವದವಳು. ಆಗೋಲ್ಲ ಅಂದರೆ ಅದನ್ನು ಮಾಡಬೇಕೆಂದು ಬಯಸುತ್ತೇನೆ. ಇದನ್ನು ನಿರ್ದೇಶಕರು ತಿಳಿದುಕೊಂಡು, ಅದರಂತೆ ಕೆಲಸ ತೆಗೆದುಕೊಂಡಿದ್ದಾರೆ. ಇದರ ಕ್ರೆಡಿಟ್ ಸಂಪೂರ್ಣ ತಂಡಕ್ಕೆ ಸಲ್ಲಬೇಕು. ಮುಖ್ಯವಾಗಿ  ಮಾಧ್ಯಮದ ಸಹಕಾರ ಎಂದಿಗೂ ಮರೆಯಲಾಗದು. ಮಹಿಳಾ ಪ್ರಧಾನ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿದೆ. ಅಂತಹುದರಲ್ಲಿ ಉಗ್ರಾವತಾರ 25 ದಿನಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಎಲ್ಲ ರೀತಿಯ ಪ್ರತಿಭೆಗಳು ಬಂದಾಗ ಮಾತ್ರ ಚಿತ್ರರಂಗ ಬೆಳೆಯುತ್ತೆ. ಇದನ್ನು ಛಾಲೆಂಜ್ ಎಂದು ತೆಗೆದುಕೊಂಡಿದ್ದಕ್ಕೂ ಸಾರ್ಥಕವಾಗಿದೆ. ಮುಂದೆಯೂ ಒಳ್ಳೆ ಅಂಶಗಳು, ತೂಕದ ಸಂದೇಶ ಇರುವ ಚಿತ್ರಗಳಲ್ಲಿ ಅಭಿನಯಿಸಲು ಪ್ರಯತ್ನ ಪಡುತ್ತೇನೆ ಎಂದರು.
 
ನಿರ್ಮಾಪಕಿ ಅಕ್ಷತಾಸತೀಶ್, ಸಾಹಿತಿ ಕಿನ್ನಾಳ್‌ರಾಜ್, ಖಳನಟರುಗಳಾದ ಸೂರ್ಯಪ್ರವೀಣ್, ಅಭಿಲಾಷ್ ಉಳಿದಂತೆ ದರ್ಶನ್, ಅಂಕಿತಾಜಯರಾಮ್, ಜತ್ತಿ, ಚರಣ್, ಪೂಜಾ, ವಲ್ಲಿ, ಸಂಕಲನಕಾರ ಯುಡಿವಿ.ವೆಂಕಿ, ಸಾಹಸ ಸಂಯೋಜಕ ಮಾಸ್‌ಮಾದ-ಅಶೋಕ್, ಛಾಯಾಗ್ರಾಹಕ ನಂದಕಿಶೋರ್ ಮುಂತಾದವರು ಸುಂದರ ಸಮಯದಲ್ಲಿ ಹಾಜರಿದ್ದು ಖುಷಿಯನ್ನು ಹಂಚಿಕೊಂಡರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed