ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಅವರಿಂದ ಚಾಲನೆ ನೂರು ದಿನಗಳ ಕಾಲ ನಡೆಯಲಿದೆ ಭರ್ಜರಿ ಶಾಪಿಂಗ್ ಫೆಸ್ಟಿವಲ್
Posted date: 20 Sun, Oct 2024 07:26:19 PM
ಬೆಂಗಳೂರು ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ನೂರು‌ದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್ ಉದ್ಘಾಟನೆಯನ್ನು ಖ್ಯಾತ ನಟಿ ಶ್ರಿಯಾ ಶರಣ್ ನೆರವೇರಿಸಿದರು. ಮಂತ್ರಿ ಮಾಲ್ ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಹಾಗೂ ರಿಟೈಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.       
ನನಗೆ ಬೆಂಗಳೂರು ಬಹಳ ಇಷ್ಟ. ಇಲ್ಲಿನ ಪರಿಸರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ನಾನು ಅಭಿಮಾನಿ. ಇಂದು ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಆಯೋಜಿಸಲಾಗಿರುವ ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಉದ್ಘಾಟಿಸುತ್ತಿರುವುದ ಬಹಳ ಸಂತೋಷವಾಗಿದೆ. ಶಾಪಿಂಗ್ ಮಾಡುವುದು ನನಗೂ ಬಹಳ ಇಷ್ಟ. ಮುಂಚೆ ನನಗಾಗಿ ಶಾಪಿಂಗ್ ಮಾಡುತ್ತಿದ್ದೆ. ಈಗ ಮಕ್ಕಳಿಗಾಗಿ ಹೆಚ್ಚು ಶಾಪಿಂಗ್ ಮಾಡುತ್ತೇನೆ. ಮಂತ್ರಿ ಮಾಲ್ ನಲ್ಲಿ ಆಯೋಜಿಸಲಾಗಿರುವ ಈ ಶಾಪಿಂಗ್ ಫೆಸ್ಟಿವಲ್ ನಲ್ಲಿ ನೀವೆಲ್ಲಾ ಕುಟುಂಬ ಸಮೇತ ಪಾಲ್ಗೊಂಡು ಭರ್ಜರಿ ಶಾಪಿಂಗ್ ಮಾಡಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿ. ಸಾಕಷ್ಟು ರಿಯಾಯಿತಿ ಸಹ ಈ ಸಮಯದಲ್ಲಿದೆ ಎಂದರು ನಟಿ ಶ್ರಿಯಾ ಶರಣ್.                         
 
ನಮ್ಮ ಮಂತ್ರಿ ಮಾಲ್ ನ ಶಾಪಿಂಗ್ ಫೆಸ್ಟಿವಲ್ ಉದ್ಘಾಟನೆ ಮಾಡಿದ ಶ್ರಿಯಾ ಶರಣ್ ಅವರಿಗೆ ಧನ್ಯವಾದ. ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಇಂದಿನಿಂದ ಆರಂಭವಾಗಿದ್ದು, ಜನವರಿ 26ರ ವರೆಗೂ ನಡೆಯಲಿದೆ. ಈ ಸಮಯದಲ್ಲಿ ದೀಪಾವಳಿ, ಕ್ರಿಸಮಸ್ ಹಾಗೂ ಸಂಕ್ರಾಂತಿ ಹಬ್ಬಗಳು ಬರುತ್ತದೆ‌. ಎಲ್ಲಾ ಹಬ್ಬಗಳಿಗೂ ತಾವು ಕುಟುಂಬ ಸಮೇತ ಬಂದು ನಮ್ಮ ಮಾಲ್ ನಲ್ಲಿ ಶಾಪಿಂಗ್ ಮಾಡಿ‌. ಎಲ್ಲದರ  ಮೇಲೂ ಸಾಕಷ್ಟು ರಿಯಾಯಿತಿ ಜೊತೆಗೆ  ಅನೇಕ ಬಹುಮಾನಗಳು ಇದೆ‌. ಮೊದಲ ಬಹುಮಾನ ಕಾರ್ ಆಗಿರುತ್ತದೆ‌. ಈ  ಸಂದರ್ಭದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ ಎಂದು ಕಾಮಾಕ್ಷಿ ಮಂತ್ರಿ ತಿಳಿಸಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed