ಮೂಕಜೀವ,ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು...ರೇಟಿಂಗ್ : 3/5 ***
Posted date: 26 Sat, Oct 2024 12:12:13 PM
ಚಿತ್ರ : ಮೂಕಜೀವ
ನಿರ್ದೇಶನ : ಶ್ರೀನಾಥ್ ವಸಿಷ್ಠ
ನಿರ್ಮಾಣ: ವೆಂಕಟೇಶ್. ಎಂ
ಸಂಗೀತ : ವಿ. ಮನೋಹರ್
ಛಾಯಾಗ್ರಹಣ : ಪವನ್ ಕುಮಾರ್
ತಾರಾಗಣ : ಶ್ರೀ ಹರ್ಷ, ಕಾರ್ತಿಕ್ ಮಹೇಶ್ , ಶ್ರೀನಾಥ್ ವಸಿಷ್ಠ,  ಅಪೂರ್ವ ಶ್ರೀ, ಮೇಘಶ್ರೀ, ರಮೇಶ್ ಪಂಡಿತ್, ಗಿರೀಶ್ ವೈದ್ಯನಾಥನ್ , ವೆಂಕಟಾಚಲ ಇತರರು...

ಪ್ರೋತ್ಸಾಹ, ಬೆಂಬಲ‌ ಇದ್ದರೆ ವಿಕಲಚೇತನರೂ ದೊಡ್ಡ ಸಾಧನೆ ಮಾಡಿ ತೋರಿಸಬಲ್ಲರು ಎಂಬುದನ್ನು ವಾಕ್, ಶ್ರವಣ ದೋಷವುಳ್ಳ ಶ್ರೀಹರ್ಷ ಎಂಬ ಯುವಕ ಗುರಿ ಸಾಧಿಸಿದ ಕಥೆಯ ಮೂಲಕ ನಿರ್ದೇಶಕ‌  ಶ್ರೀನಾಥ್ ವಸಿಷ್ಠ ತಮ್ಮ ಮೂಕಜೀವ ಚಿತ್ರದಲ್ಲಿ  ಹೇಳಿದ್ದಾರೆ.
 
ವಿಶೇಷ ಚೇತನರ  ಬಗ್ಗೆ ಅಸಡ್ಡೆ , ಅಪಹಾಸ್ಯ ಮಾಡದೆ ಅವರಿಗೆ  ಪ್ರೋತ್ಸಾಹ ಬೆಂಬಲ ನೀಡಿದರೆ  ಖಂಡಿತ  ಯಶಸ್ಸಿನ ಗುರಿಯನ್ನು ತಲುಪಬಲ್ಲರು ಎಂದು ಈ ಚಿತ್ರದಲ್ಲಿ ಹೇಳಿದ್ದಾರೆ. 
 
ಕರಿಗಟ್ಟದ ಸಾಕವ್ವ (ಅಪೂರ್ವ) ಕೂಲಿ ನಾಲಿ ಮಾಡಿಕೊಂಡು ತನ್ನಿಬ್ಬರು ಮಕ್ಕಳನ್ನು ಸಾಕುತ್ತಿರುತ್ತಾಳೆ. ಮಗ ಶ್ರೀಕಂಠ ( ಶ್ರೀಹರ್ಷ ) ಓರ್ವಅಂಗವಿಕಲ, ಕಿವಿ ಕೇಳಲ್ಲ, ಮಾತಾಡಲೂ ಬರಲ್ಲ, ಮಗಳು ಕಮಲಿ (ಮೇಘಶ್ರೀ) ವಯಸ್ಸಿಗೆ ಬಂದ ಯುವತಿ. ಸಾಕವ್ವ  ಆಡು, ಕುರಿ ಮೇಯಿಸಿಕೊಂಡು ಇಬ್ಬರ ಹೊಟ್ಟೆ ತುಂಬಿಸ್ತಿರ್ತಾಳೆ.  ಶ್ರೀಕಂಠನದು  ನೇರ ಹಾಗೂ ಪ್ರಾಮಾಣಿಕತೆ ವ್ಯಕ್ತಿತ್ವ. ಅದೇ ಕಾರಣಕ್ಕೆ ಆತ ಇಲ್ಲಸಲ್ಲದ ಆರೋಪಗಳನ್ನು ಆಗಾಗ ಎದುರಿಸಬೇಕಾಗುತ್ತದೆ. ಗ್ರಾಮದ ಪಟೇಲ (ರಮೇಶ್ ಪಂಡಿತ್) ಹಾಗೂ ಪೂಜಾರಿ, ಊರ ಜನರ ಕಾಟದಿಂದ ಆ ಮುಗ್ದ ಹುಡುಗ ಊರನ್ನೇ ಬಿಡಬೇಕಾಗುತ್ತದೆ. ಈ ನಡುವೆ ಕಮಲಿ, ಕಾರ್ತಿಕ್ (ಕಾರ್ತಿಕ್ ಮಹೇಶ್)ಎಂಬ ಯುವಕನನ್ನು ಲವ್ ಮಾಡಿ ಮನೆಬಿಟ್ಟು ಹೋಗುತ್ತಾಳೆ. ದಿನ ಕಳೆದಂತೆ ಗಾಯದ ಮೇಲೆ ಬರೆ ಎಳೆದಂತೆ, ಬರೀ ನೋವನ್ನೇ ಅನುಭವಿಸುವ ಸಾಕಮ್ಮ ಸಾಯುವ ಸ್ಥಿತಿ ತಲುಪುತ್ತಾಳೆ.  ಇತ್ತ ಅಕ್ಕನ ಮನೆ ಸೇರಲೆಂದು  ಬೆಂಗಳೂರಿಗೆ ಬರುವ ಶ್ರೀಕಂಠ, ನಗರದ ಜನರ ವರ್ತನೆ ಮತ್ತು ಅಮಾಯಕತೆಯಿಂದ ಅನಾಥ ಭಾವ ಅನುಭವಿಸುತ್ತಾನೆ, ಸ್ವಂತ ಭಾವನೇ ಆತನನ್ನು ದೂರ ಮಾಡುವ ಸಂಚು ಹೂಡಿದಾಗ, ಹೃದಯವಂತ ಪೊಲೀಸ್ ಅಧಿಕಾರಿಯೊಬ್ಬರ ಸಹಕಾರದಿಂದ  ಗುರಿಯನ್ನು ಮುಟ್ಟುತ್ತಾನೆ.
 
ಜೆ.ಎಂ.ಪ್ಲಹಾದ್ ಅವರ ಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆಮೇಲೆ ಮೂಡಿಸಲು ನಿರ್ದೇಶಕ ಶ್ರೀನಾಥ್ ವಸಿಷ್ಠ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸೂಕ್ಷ್ಮ ವಿಚಾರವೊಂದನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಿಸಿದ್ದಾರೆ.
 
ವಿಶೇಷ ಚೇತನರಿಗೆ ಆ ದೇವರೇ ಒಂದು ವಿಶೇಷ ಶಕ್ತಿ ನೀಡಿರುತ್ತಾನೆಂದು ಈ ಚಿತ್ರದ ಮೂಲಕ ಹೇಳಿದ್ದಾರೆ, ತಾಯಿ ಮಗನ ಪ್ರೀತಿ, ಅಕ್ಕ, ತಮ್ಮನ ನಡುವಿನ ಒಡನಾಟವನ್ನು ಈ ಚಿತ್ರದಲ್ಲಿ ಸುಂದರವಾಗಿ  ತೆರೆದಿಟ್ಟಿದ್ದಾರೆ. ಎ.ವಿ.ಎಂ ಎಂಟರ್ ಟೈನರ್ಸ್  ಮೂಲಕ ಎಂ.ವೆಂಕಟೇಶ್ ಕನ್ನಡ ಜನತೆಗೆ ಉತ್ತಮ ಚಿತ್ರವೊಂದನ್ನು ನೀಡಿದ್ದಾರೆ. ಸಂಗೀತದ ಜತೆ ಛಾಯಾಗ್ರಹಣ  ಚಿತ್ರಕಥೆಗೆ ಪೂರಕವಾಗಿದೆ. ಶ್ರೀಹರ್ಷ ವೆಂಕಟೇಶ್ ಮೂಕ, ಕಿವುಡನ ಪಾತ್ರಕ್ಕೆ  ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ತಾಯಿಯ ಪಾತ್ರವನ್ನು ಅಪೂರ್ವ ಅದ್ಬುತವಾಗಿ ನಿಭಾಯಿಸಿದ್ದಾರೆ. ಅಕ್ಕನಾಗಿ ಮೇಘಶ್ರೀ ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಭಾವನಾಗಿ ಕಾರ್ತಿಕ್ ಮಹೇಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಟೇಲನಾಗಿ ರಮೇಶ್ ಪಂಡಿತ್ , ಪೂಜಾರಿಯಾಗಿ  ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
 
ವೀಕೆಂಡ್ ನಲ್ಲಿ ಕುಟುಂಬ ಸಮೇತ  ನೋಡಬಹುದಾದ ಚಿತ್ರವಿದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed