ರಾಜಹಂಸನ ಕೆರೆಬೇಟೆ ಶುರು
Posted date: 16 Wed, Nov 2022 12:14:05 PM
ಕೆರೆಬೇಟೆ ಅಂದರೆ ಮಲೆನಾಡು ಭಾಗದಲ್ಲಿ ಬಹು ಜನಪ್ರಿಯ ಸಂಸ್ಕೃತಿ. ಈ ಹಿಂದೆ ರಾಜಹಂಸ ಎಂಬ ಅಪ್ಪಟ ಪ್ರೇಮಕಥೆಯೊಂದರ ಮೂಲಕ ತೆರೆಯಮೇಲೆ ಹೀರೋ ಆಗಿ ಗುರುತಿಸಿಕೊಂಡಿದ್ದ ನಟ ಗೌರಿಶಂಕರ್ ಈಗ ಮಲೆನಾಡಿನ ಪ್ರಮುಖ ಭಾಗವಾದ  ಕೆರೆಬೇಟೆ ಎನ್ನುವ ಸಂಸ್ಕೃತಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
 
ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ಅವರು ನಿರ್ಮಿಸುತ್ತಿರುವ ಆ ಚಿತ್ರದ ಹೆಸರು ಕೂಡ ಕೆರೆಬೇಟೆ. ಹಳ್ಳಿ ಸೊಗಡಿನಲ್ಲಿ ನಡೆಯುವ ನೈಜ ಪ್ರೇಮಕಥೆಯೊಂದನ್ನು ಹೇಳುವ ಪ್ರಯತ್ನ ಇರುವ ಕೆರೆಬೇಟೆ ಚಿತ್ರಕ್ಕೆ ಗುರುಶಿವ ಹಿತೈ಼ಷಿ ಅವರು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ೧೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಗುರುಶಿವ ಹಿತೈಶಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. 
 
ಇದೊಂದು ಲವ್ ಸ್ಟೋರಿಯಾದರೂ, ಕೆರೆಬೇಟೆ ಚಿತ್ರಕಥೆಯ ಒಂದು ಮುಖ್ಯ ಭಾಗವಾಗಿ ಮೂಡಿಬರಲಿದೆ. ಇತ್ತೀಚೆಗೆ ಸಾಗರದಲ್ಲಿ ಮುಹೂರ್ತ ನಡೆಸಲಾಗಿದ್ದು,  ಮೊದಲ ಹಂತದ ಚಿತ್ರೀಕರಣವನ್ನು ಇದೇ 10 ರಿಂದ ಆರಂಭಿಸಲಾಗಿದೆ, ಸಿಗಂದೂರು, ಕೋಗಾರ್ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರಮುಖ ಭಾಗಗಳಲ್ಲಿ ಚಿತ್ರೀಕರಣ  ನಡೆಸಲಾಗುವುದು.
 
ಜೋಕಾಲಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ಎಸ್‌ಆರ್‌ಜಿ. ಗೌರಿಶಂಕರ್ ರಾಜಹಂಸ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು, ಇನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಬಿಂದು ಶಿವರಾಮ್ ಅವರೂ ಹೊಸದಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕಥೆಯನ್ನು ಗುರುಶಿವ ಹಿತೈಷಿ ಹಾಗೂ ಗೌರಿಶಂಕರ್ ಸೇರಿ ಬರೆದಿದ್ದಾರೆ.
 
ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಹಾಗೂ ಗಗನ್ ಬಡೇರಿಯಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಜ್ಞಾನೇಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ, ಕಂಬಿರಾಜು ಅವರ  ನೃತ್ಯನಿರ್ದೇಶನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed