ವೇದಿಕಾ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ``FEAR``ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಸ್ಟಾರ್ ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ*
Posted date: 16 Mon, Sep 2024 10:25:43 AM
FEAR ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದತ್ತಾತ್ರೇಯ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಎಆರ್ ಅಭಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಜಾತಾ ರೆಡ್ಡಿ ಸಹ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ನಿರ್ದೇಶಕ ಡಾ. ಹರಿತಾ ಗೋಗಿನೇನಿ ಫಿಯರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಅರವಿಂದ್ ಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಕನ್ನಡ , ತೆಲುಗು, ತಮಿಳು ,ಮಲಯಾಳಂ,ಹಿಂದಿ ಭಾಷೆಯಲ್ಲಿ FEAR ಚಿತ್ರ ಬಿಡುಗಡೆಗೆ ಸಜ್ಜಾಗಿದೆ 
ಶ್ವೇತಾ ಶೆಟ್ಟಿಯವರು ಡಬ್ಬಿಂಗ್ ಹೊಣೆ ಯನ್ನು ನಿಭಾಯಿಸಿದ್ದಾರೆ 
 "FEAR" ಬಿಡುಗಡೆಗೂ ಮುನ್ನವೇ ವಿವಿಧ ಅಂತಾರಾಷ್ಟ್ರೀಯ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ಸೃಷ್ಟಿಸಿದೆ.

ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಇಂದು "ಭಯ" ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕತ್ತಲ ಕೋಣೆಯಲ್ಲಿ ನಾಯಕಿ ಭಯಭೀತರಾಗಿ ಕಾಣುತ್ತಿರುವ ಸ್ಟಿಲ್‌ನೊಂದಿಗೆ ಡಿಸೈನ್ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸುತ್ತಿದೆ. ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ "FEAR" ಚಿತ್ರ ಶೀಘ್ರದಲ್ಲೇ ಥಿಯೇಟರ್ ರಿಲೀಸ್‌ಗೆ ಸಿದ್ಧವಾಗುತ್ತಿದೆ.


ತಾರಾಗಣ - ವೇದಿಕಾ, ಅರವಿಂದ್ ಕೃಷ್ಣ, ಜೆಪಿ (ಜಯಪ್ರಕಾಶ್ ), ಪವಿತ್ರ ಲೋಕೇಶ್, ಅನೀಶ್ ಕುರುವಿಲ್ಲ, ಸಯಾಜಿ ಶಿಂಧೆ, ಸತ್ಯ ಕೃಷ್ಣ, ಸಾಹಿತಿ ದಾಸರಿ, ಶಾನಿ ಮುಂತಾದವರು.

ತಾಂತ್ರಿಕ ತಂಡ

ಸಂಗೀತ - ಅನುಪ್ ರೂಬೆನ್ಸ್,
ಛಾಯಾಗ್ರಹಣ - ಐ ಆಂಡ್ರ್ಯೂ
ಸಾಹಿತ್ಯ - ಕೃಷ್ಣಕಾಂತ್
ನೃತ್ಯ ಸಂಯೋಜನೆ - ವಿಶಾಲ್
ಕನ್ನಡ ಡೈಲಾಗ್ಸ್ - ಶ್ವೇತಾ ಶೆಟ್ಟಿ 
ಡಿಜಿಟಲ್ ಮೀಡಿಯಾ - ಹೌಸ್ ಫುಲ್, ಮಾಯಾಬಜಾರ್
ನಿರ್ಮಾಪಕ - ಎಆರ್ ಅಭಿ
ಸಹ ನಿರ್ಮಾಪಕಿ - ಸುಜಾತಾ ರೆಡ್ಡಿ
ಬರಹ, ಸಂಕಲನ, ನಿರ್ದೇಶನ - ಡಾ. ಹರಿತಾ ಗೋಗಿನೇನಿ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed