ಶಾಖಾಹಾರಿ ಸಿನೆಮಾವನ್ನು ಅಮೆಜಾನ್ ಪ್ರೈಮ್ ನಿಂದ ತೆಗೆಯಬಾರದೆಂದು ಮಧ್ಯಂತರ ಆದೇಶ ನೀಡಿದೆ ಶಿವಮೊಗ್ಗ ಕಮರ್ಷಿಯಲ್ ಕೋರ್ಟ್
Posted date: 01 Tue, Oct 2024 09:16:29 AM
ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ ಸಿನಿಮಾದಲ್ಲಿ ರಸಿಕ ರಸಿಕಾ  ಹಾಡನ್ನು ಬಳಸಿ ಕಾಪಿರೈಟ್ ಉಲ್ಲಂಘಿಸಲಾಗಿದೆ ಎಂದು ಸಾರೆಗಾಮ ಇಂಡಿಯಾ ಲಿಮಿಟೆಡ್ ಸಂಸ್ಥೆ ಆರೋಪಿಸಿ ಅಮೆಜಾನ್ ಪ್ರೈಮ್ ಗೆ ದೂರು ನೀಡಿತ್ತು ಹಾಗೂ ಕೀಳಂಬಿ ಮೀಡಿಯಾ ಲ್ಯಾಬ್ ನಿಂದ ಹಣದ ಬೇಡಿಕೆ ಇಟ್ಟಿತ್ತು. 
 
ಇದನ್ನು ಪ್ರಶ್ನಿಸಿ ಕೀಳಂಬಿ ಮೀಡಿಯಾ ಲ್ಯಾಬ್ ಶಿವಮೊಗ್ಗ ಕಮರ್ಷಿಯಲ್ ಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಇಂದು ಘನ ನ್ಯಾಯಾಲಯವು ಕೀಳಂಬಿ ಮೀಡಿಯಾ ಲ್ಯಾಬ್ ಪರ ವಕೀಲರ ವಾದವನ್ನು ಆಲಿಸಿ, ಸಾರೆಗಾಮ ಇಂಡಿಯಾ ಸಂಸ್ಥೆ ಶಾಖಾಹಾರಿ ಸಿನೆಮಾದಲ್ಲಿ ಯಾವುದೇ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ಯಾವುದೇ ಹೇಳಿಕೆ ನೀಡಬಾರದು ಎಂದು ಹಾಗೂ ಅಮೆಜಾನ್ ಪ್ರೈಮ್ ರವರು ತಮ್ಮ ಒಟಿಟಿ ಪ್ಲಾಟ್ ಫಾರಂ ನಿಂದ ಶಾಖಾಹಾರಿ ಸಿನೆಮಾವನ್ನು ತೆಗೆಯಬಾರದೆಂದು ಮಧ್ಯಂತರ ಆದೇಶ ನೀಡಿದೆ.

ಕೀಳಂಬಿ ಮೀಡಿಯಾ ಲ್ಯಾಬ್ ಪರ ವಕೀಲರಾದ ಬೆಂಗಳೂರಿನ ರವಿಶಂಕರ್ ಭಟ್ ವಾದಿಸಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed