ಶ್ರೀಮತಿ ಭಾರತಿ ಬಾಲಿ ನಿರ್ಮಾಣದ,ನವೀನ್ ಜಿ ಎಸ್ ನಿರ್ದೇಶನದ ``ನಾ ನಿನ್ನ ಬಿಡಲಾರೆ ಟ್ರೈಲರ್ ಲಾಂಚ್``
Posted date: 17 Sun, Nov 2024 08:40:21 AM
ಶ್ರೀಮತಿ ಭಾರತಿ ಬಾಲಿ ನಿರ್ಮಾಣದ,ನವೀನ್ ಜಿ ಎಸ್ ನಿರ್ದೇಶನದ ನಾ ನಿನ್ನ ಬಿಡಲಾರೆ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರ ಬಹಳ ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ.

ಅಂಬಾಲಿ ಭಾರತಿ,ಪಂಚಿ, ಕೆ ಎಸ್ ಶ್ರಿಧರ್,ಶ್ರೀನಿವಾಸ್ ಪ್ರಭು,ಮದನ್ ಹರಿಣಿ,ಮಹಾಂತೇಶ್ ಸೇರಿ ಸಾಕಷ್ಟು ಪ್ರತಿಭಾವಂತ ಕಲಾವಿದರ ದಂಡು ಇದರಲ್ಲಿ ಇದ್ದು, ಟ್ರೈಲರ್ ನಲ್ಲಿ ನಿರ್ದೇಶಕರು ಬಿಟ್ಟ ಕೆಲವು ತುಣುಕುಗಳನ್ನು ನೋಡಿದಾಗ ದೇವರು,ದೈವತ್ವ,
ಮತ್ತು ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳು ತುಂಬಾ ಇವೆ ಎಂಬುದು ಎಲ್ಲರ ಗಮನಕ್ಕೆ ಬರುತ್ತಿದೆ.ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಸ್ಯಾಂಡಲ್ವುಡ್ನನ ಸ್ಟಾರ್ ನಿರ್ದೇಶಕರ ಸಾಥ್ ಈ ಚಿತ್ರಕ್ಕೆ ಸಿಕ್ಕಿದ್ದು,ಟ್ರೈಲರ್ ಲಾಂಚ್ ಮಾಡಿಕೊಟ್ಟ ಭರ್ಜರಿ ಚೇತನ್ ಕುಮಾರ್,ಸಂಪೂರ್ಣ ಚಿತ್ರ ತಂಡದ ಎಲ್ಲ ಸದಸ್ಯರ ಹೆಸರನ್ನು ನೆನಪಿಸಿ ಎಲ್ಲರ ಕ್ರಿಯೇಟಿವ್ ಕೆಲಸಕ್ಕೆ ಶಹಬ್ಬಾಸ್ ಹೇಳಿದ್ದು ವಿಶೇಷವಾಗಿತ್ತು ಜೊತೆಗೆ ಚಿತ್ರಕ್ಕಾಗಿ ಅಂಬಾಲಿ ಭಾರತಿ ಮಾಡಿರುವ ಸಾಹಸ ದೃಶ್ಯಗಳ ಬಗ್ಗೆ ಹೊಗಳಿದ ಚೇತನ್, ಈ ಮೂಲಕ
ಕನ್ನಡಕ್ಕೆ ಮತ್ತೊಬ್ಬ Action ಲೇಡಿ ಹೀರೋಯಿನ್ ಸಿಕ್ಕಂತೆ ಎಂಬ ಭರವಸೆಯ ಮಾತು ಹೇಳಿದರು.

ಮತ್ತೊಬ್ಬ ಸ್ಟಾರ್ ನಿರ್ದೇಶಕ  ತರುಣ್ ಸುಧೀರ್ ವಿಡಿಯೋ ಬೈಟ್ ಮೂಲಕ ಇಡೀ ಚಿತ್ರ ತಂಡಕ್ಕೆ ಶುಭ ಹಾರೈಸಿ,
1979 ರಲ್ಲಿ ಬಂದಂತಹ ಲಕ್ಷ್ಮಿ ಅಮ್ಮ ಮತ್ತು ಅನಂತನಾಗ್ ಸರ್ ರವರ, ಸೂಪರ್ ಹಿಟ್ ಚಿತ್ರದ ಅದೇ ಶೀರ್ಷಿಕೆಯಲ್ಲಿ ಬರುತ್ತಿರುವ ಹೊಸಬರ ನಾ ನಿನ್ನ ಬಿಡಲಾರೆ ಚಿತ್ರವು, ದೊಡ್ಡ ಯಶಸ್ಸು ಕಾಣಲಿ ಹಾಗೂ ಚಿತ್ರದಲ್ಲಿ ನಾಯಕಿ ಪಾತ್ರವನ್ನು ಮಾಡಿದಂತಹ ಅಂಬಾಲಿ ಭಾರತಿ ತೆಗೆದುಕೊಂಡ ಸಾಹಸ ರಿಸ್ಕ್ ಅದ್ಭುತ, ಚಿತ್ರವು ಖಂಡಿತವಾಗಿ ಯಶಸ್ವಿಯಾಗಲಿ,
ಎಂಬ ಮಾತುಗಳನ್ನು ಕೇಳಿದ   ನಾ ನಿನ್ನ ಬಿಡಲಾರೆ ಚಿತ್ರ ತಂಡಕ್ಕೆ ದೊಡ್ಡ ಎನರ್ಜಿ ಸಿಕ್ಕಂತಾಯಿತು.

ಜೂಲಿ ಲಕ್ಷ್ಮಿ ಮತ್ತು ಅನಂತ್ ನಾಗ್ ರವರ ಕಾಂಬಿನೇಷನ್ನಲ್ಲಿ 1979ರಲ್ಲಿ ಬಂದಂತಹ ನಾ ನಿನ್ನ ಬಿಡಲಾರೆ ಚಿತ್ರದ ಪ್ರಮುಖ ಹೈಲೈಟ್ ಎಂದರೆ ಅದು ಮಂತ್ರಾಲಯದ ಮಹಾಪ್ರಭುಗಳು ಶ್ರೀ ರಾಘವೇಂದ್ರ ಸ್ವಾಮಿಗಳು ಅದರಂತೆಯೇ,
ಹೊಸಬರ ನಾ ನಿನ್ನ ಬಿಡಲಾರೆ ಚಿತ್ರದ ಪ್ರಮುಖ ಹೈಲೆಟ್ ಕೂಡ ರಾಘವೇಂದ್ರ ಸ್ವಾಮಿಗಳೇ ಆಗಿದ್ದಾರೆ.

ನವಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ನಾ ನಿನ್ನ ಬಿಡಲಾರೆ ಚಿತ್ರಕ್ಕೆ ಅದ್ಭುತವಾದಂತಹ ಯಶಸ್ಸು ದೊರೆಯುತ್ತದೆ ಚಿತ್ರವನ್ನ ಎಲ್ಲಾ ಅಭಿಮಾನಿಗಳು ಕಣ್ಣು ತುಂಬಿಕೊಳ್ಳುತ್ತಾರೆ ಎಂಬ ಭರವಸೆ ಇಡೀ ಚಿತ್ರ ತಂಡಕ್ಕಿದೆ,
ಅಭಿಮಾನಿ ದೇವರುಗಳು,ಒಳ್ಳೆಯ ಕನ್ನಡ ಚಿತ್ರಗಳನ್ನು ಯಾವತ್ತೂ ಕೈ ಬಿಟ್ಟಿಲ್ಲ ಅನ್ನೋ ಮಾತು ಸತ್ಯವಾಗಲಿ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed