ಪ್ರಚಲಿತ ವಿದ್ಯಾಮಾನದಲ್ಲಿ ಭಕ್ತಿಪ್ರಧಾನ ಚಿತ್ರಗಳು ಬೆರಳಣಿಕೆಯಷ್ಟು ಇದೆ. ಆ ಸಾಲಿಗೆ ’ಸಿಂಹರೂಪಿಣಿ’ ಸಿನಿಮಾ ಸೇರ್ಪಡೆಯಾಗುತ್ತದೆ. ಪ್ರತಿಯೊಂದು ದೇವರಿಗೂ ಹಿನ್ನಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷೀ ರೂಪದಲ್ಲಿ ಮಾರಮ್ಮ ಯಾಕೆ ಆಗ್ತಾಳೆ ಒಂದು ಕಡೆಯಾದರೆ, ಮತ್ತೋಂದು ಭಾಗದಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಗೆ ದೇವಾನು ದೇವತೆಗಳು ಬರಲು ಕಾರಣವಿದೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು? ಅಲ್ಲಿನ ಜನರ ಸಂಸ್ಕ್ರತಿ, ಆಚಾರ ವಿಚಾರ ಇದೆಲ್ಲಾವನ್ನು ಹೇಳಲಾಗಿದೆ.
ದೇವಿಗೆ ಯಾತಕ್ಕಾಗಿ ಕೋಣ ಬಲಿ ಕೊಡುತ್ತಾರೆ. ಭಕ್ತಿ ಸಿನಿಮಾದಲ್ಲಿ ಪವಾಡ, ಮಹಿಮೆಗಳು ಇರುವುದು ಸಹಜ. ಅದರಂತೆ ಇದರಲ್ಲೂ ಎಲ್ಲವನ್ನು ಸಂದರ್ಭಕ್ಕೆ ತಕ್ಕಂತೆ ತೋರಿಸಲಾಗಿದೆ. ಎಲ್ಲಿಯೂ ಅಸಹಜ ಎನ್ನುವಂತ ದೃಶ್ಯಗಳು ಇರದೆ, ಪ್ರೇಕ್ಷಕರಿಗೆ ಮಾರಮ್ಮನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುವಂತ ಅಂಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಇದರ ಜತೆಗೆ ಪ್ರೀತಿ ಸನ್ನಿವೇಶಗಳು ಇದ್ದರೂ, ಇಬ್ಬರನ್ನು ದೇವಿಯ ಭಕ್ತರೆಂದು ಬಿಂಬಿಸಲಾಗಿದೆ. ಅಲ್ಲಿನ ಊರ ಗೌಡ ದೇವಿಯ ವಿರುದ್ದ ಸಂಚನ್ನು ರೂಪಿಸಲು ಹೋದಾಗ ಏನಾಗುತ್ತ್ತದೆ? ಇದರಿಂದ ಕ್ಲೈಮಾಕ್ಸ್‌ದಲ್ಲಿ ದೇವಿ ಏನು ಮಾಡುತ್ತಾಳೆ? ಇವೆಲ್ಲವೂ ಮಣಿ ಪೋಣಿಸಿದಂತೆ ಅಚ್ಚುಕಟ್ಟಾಗಿ ದೃಶ್ಯಗಳು ಬರುತ್ತದೆ. ’ಕೆಜಿಎಫ್’ ಖ್ಯಾತಿಯ ಕಿನ್ನಾಳ್‌ರಾಜ್ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಅವರ ಶ್ರಮ ಪ್ರತಿಯೊಂದು ಸೀನ್‌ದಲ್ಲಿ ಕಂಡುಬರುತ್ತದೆ. ಈ ಪೈಕಿ ಆಕಾಶ್‌ಪರ್ವ ಸಂಗೀತದ ಎರಡು ಹಾಡುಗಳು ಕೇಳಬಲ್. ಕಥೆ ಬರೆದು ನಿರ್ಮಾಣ ಮಾಡಿರುವ ಕೆ.ಎಂ.ನಂಜುಡೇಶ್ವರ, ಅಮ್ಮನ ಭಕ್ತನಾಗಿರುವುದರಿಂದ ದೇವಿಯ ಕುರಿತಂತೆ ಒಂದಷ್ಟು ತಿಳಿಯದ ವಿಷಯಗಳನ್ನು ಚಿತ್ರರೂಪದಲ್ಲಿ ತೋರಿಸಲು ಸಹಕಾರಿಯಾಗಿದ್ದಾರೆ.
ನಾಯಕಿಯಾಗಿ ಅಂಕಿತಾಗೌಡ ಚೆಂದ ಕಾಣಿಸುತ್ತಾರೆ. ಮಾರಮ್ಮ ದೇವಿಯಾಗಿ ಯಶಸ್ವಿನಿಸುಬ್ಬೆಗೌಡ, ಮೋಸಗಾರನಾಗಿ ಸುಮನ್, ದೇವಿಯ ಆರಾಧಕರಾಗಿ ಹರೀಶ್‌ರೈ, ವಿಜಯ್‌ಚೆಂಡೂರು, ತಬಲಾನಾಣಿ, ದಿವ್ಯಾಆಲೂರು, ಸಾಗರ್. ಗೌಡನಾಗಿ ದಿನೇಶ್‌ಮಂಗಳೂರು, ದೇವಿಯ ಪತಿಯಾಗಿ ಯಶ್‌ಶೆಟ್ಟಿ, ತಂದೆಯಾಗಿ ನೀನಾಸಂಅಶ್ವಥ್, ಬಾಲದೇವಿಯಾಗಿ ಖುಷಿಬಸ್ರೂರು, ಖಳನಾಗಿ ಆರವ್‌ಲೋಹಿತ್ ಸೇರಿದಂತೆ ನೂರ ಇಪ್ಪತ್ತ್ತನಾಲ್ಕು ಪೋಷಕ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿ, ಹಾಡಿನಲ್ಲಿ ಪ್ಯಾನ್ ಇಂಡಿಯಾ ಸಂಗೀತ ಸಂಯೋಜಕ ರವಿಬಸ್ರೂರು ಕಾಣಿಸಿಕೊಂಡಿದ್ದಾರೆ. ಎಲ್ಲರೂ ತಮಗೆ ನೀಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ಕಿರಣ್‌ಕುಮಾರ್ ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ. ಕೊನಗೆ ಭಾಗ-2 ಬರುತ್ತದೆ ಎಂಬ ಸುಳಿವುನೊಂದಿಗೆ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ. ಒಟ್ಟಾರೆ ದೇವರನ್ನು ನಂಬುವವರಿಗೆ ಪಕ್ಕಾ ಪೈಸಾ ವಸೂಲ್ ಸಿನಿಮಾವೆಂದು ಖಂಡಿತವಾಗಿ ಹೇಳಬಹುದು.