ಸ್ಯಾಂಡಲ್‌ವುಡ್‌ನ PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ
Posted date: 28 Sat, Dec 2024 09:10:47 AM
ಸ್ಯಾಂಡಲ್‌ವುಡ್‌ನ ಗೋಲ್ಡನ್‌ ಸ್ಟಾರ್‌ ಗಣೇಶ್ ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಈ  ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡು, ಒಟಿಟಿಯಲ್ಲಿಯೂ ಕಮಾಲ್‌ ಮಾಡುತ್ತಿದೆ. ಹೀಗಿರುವಾಗಲೇ ಇದೇ ಗಣೇಶ್‌ ಅಭಿಮಾನಿಗಳಿಗೆ ಈಗ ಹೊಸದೊಂದು ಸರ್ಪ್ರೈಸ್‌ ಸುದ್ದಿ ಹೊರಬಿದ್ದಿದೆ. 

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ #PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್‌ ನಟಿಸಲಿದ್ದಾರೆ. ಈ ಮೂಲಕ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಕನ್ನಡದಲ್ಲಿಯೂ ದೊಡ್ಡ ದೊಡ್ಡ ಸಿನಿಮಾಗಳು ಮೂಡಿಬರಲಿವೆ. 
ಕಾರ್ತಿಕೇಯ 2, ವೆಂಕಿ ಮಾಮಾ, ಓ ಬೇಬಿ, ಧಮಾಕಾ ಮತ್ತು ನ್ಯೂ-ಸೆನ್ಸ್‌ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ತೆಲುಗು ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದೆ. ಇದೀಗ #PMF49 ಮೂಲಕ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಗಣೇಶ್ ಅವರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅದ್ಧೂರಿ ಸಿನಿಮಾ ನಿರ್ಮಾಣದ ಪ್ಲಾನ್‌ ನಡೆಯುತ್ತಿದೆ. 

ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಒಳ್ಳೆಯ ಕಥೆ ಮತ್ತು ಅತ್ಯಾಧುನಿಕ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಈ ಮೂಲಕ ಕನ್ನಡದ ಚಿತ್ರರಂಗದ ಸಾಮರ್ಥ್ಯವನ್ನು ಮಗದಷ್ಟು ಹಿರಿದಾಗಿಸುವ ಧ್ಯೇಯ ಈ ಸಿನಿಮಾ ತಂಡದ್ದು. 

ಖ್ಯಾತ ನೃತ್ಯ ನಿರ್ದೇಶಕ ಧನಂಜಯ್‌ ಈ ಸಿನಿಮಾ ಮೂಲಕ ದೊಡ್ಡ ಪ್ರಾಜೆಕ್ಟ್‌ವೊಂದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಟಿಜಿ ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಅದ್ಧೂರಿಯಾಗಿಯೇ ಸಿನಿಮಾ ಸೆಟ್ಟೇರಲಿದೆ. ಇನ್ನುಳಿದಂತೆ ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ನೀಡಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed