ಹಾಲಿವುಡ್ ಬಹುನಿರೀಕ್ಷಿತ ಸಿನಿಮಾ `ವೆನಮ್: ದಿ ಲಾಸ್ಟ್ ಡ್ಯಾನ್ಸ್` ರಿಲೀಸ್..
Posted date: 25 Fri, Oct 2024 09:21:54 PM
ಹಾಲಿವುಡ್ ಸಿನಿಮಾಗಳನ್ನು ನೋಡುವವರಿಗೆ ವೆನಮ್ ಫ್ರಾಂಚೈಸ್ ಬಗ್ಗೆ ಗೊತ್ತೇ ಇರುತ್ತದೆ. ಈ ಚಿತ್ರದ ಎರಡು ಭಾಗಗಳು ಈಗಾಗಲೇ ಸೂಪರ್ ಹಿಟ್ ಕಂಡಿವೆ. ಇದೀಗ ವೆನಮ್: ದಿ ಲಾಸ್ಟ್ ಡ್ಯಾನ್ಸ್ ಸಿನಿಮಾದ ಕೊನೆಯ ಫ್ರಾಂಚೈಸ್ ಇಂದು ತೆರೆಗೆ ಬಂದಿದೆ. ಈ ಹಿಂದಿನ ಎರಡು ಚಿತ್ರಗಳ ಯಶಸ್ಸಿನ ನಂತರ, ಎಡ್ಡಿ ಬ್ರಾಕ್ ಮತ್ತು ವೆನಮ್ ಕಥೆಯು ಅಂತಿಮವಾಗಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.
 
ವೆನಮ್  ದಿ ಲಾಸ್ಟ್ ಡ್ಯಾನ್ಸ್ ಸಿನಿಮಾದ ಪ್ರೀಮಿಯರ್‌ನ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಗಡ ಟಿಕೆಟ್ ಬುಕ್ಕಿಂಗ್ ನಲ್ಲಿಯೂ ದಾಖಲೆ ಬರೆದಿದ್ದ ಈ ಚಿತ್ರವೀಗ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದೆ. ಪ್ರಬಲ ತಾರಾಗಣ, ಆಕರ್ಷಕ ಪಾತ್ರಗಳು ಮತ್ತು ರೋಮಾಂಚಕ ಕಥಾಹಂದರದೊಂದಿಗೆ, ವೆನಮ್: ದಿ ಲಾಸ್ಟ್ ಡ್ಯಾನ್ಸ್ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವಂತೆ ಮಾಡಿದೆ. 

ವೆನಮ್ : ದಿ ಲಾಸ್ಟ್ ಡ್ಯಾನ್ಸ್ನಲ್ಲಿ, ಟಾಮ್ ಹಾರ್ಡಿ ವೆನಮ್ ಪಾತ್ರದಲ್ಲಿ ಜೀವಿಸಿದ್ದಾರೆ. ಚಿತ್ರದಲ್ಲಿ ಚಿವೆಟೆಲ್ ಎಜಿಯೋಫೋರ್, ಜುನೋ ಟೆಂಪಲ್, ರೈಸ್ ಇಫಾನ್ಸ್, ಪೆಗ್ಗಿ ಲು, ಅಲನ್ನಾ ಉಬಾಚ್ ಮತ್ತು ಸ್ಟೀಫನ್ ಗ್ರಹಾಂ ಮುಂತಾದವರು ಅಭಿನಯಿಸಿದ್ದಾರೆ. ಹಾರ್ಡಿ ಮತ್ತು ಮಾರ್ಸೆಲ್ ಅವರ ಕಥೆಯನ್ನು ಆಧರಿಸಿ ಕೆಲ್ಲಿ ಮಾರ್ಸೆಲ್ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರವನ್ನು ಅವಿ ಅರಾದ್, ಮ್ಯಾಟ್ ಟೋಲ್ಮಾಚ್, ಆಮಿ ಪಾಸ್ಕಲ್, ಕೆಲ್ಲಿ ಮಾರ್ಸೆಲ್, ಟಾಮ್ ಹಾರ್ಡಿ ಮತ್ತು ಹಚ್ ಪಾರ್ಕರ್ ನಿರ್ಮಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed