ಓ ಮೈ ಲವ್ ಚಿತ್ರದ ಗ್ಲಿಂಪ್ಸ್ ಬಿಡುಗಡೆ
Posted date: 17 Tue, May 2022 01:08:05 PM
ಕಲರ್`ಫುಲ್ ಲವ್ ಸೀನ್ಸ್ ನೋಡುಗರ ಗಮನ ಸೆಳೆಯುತ್ತಿದೆ. ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ಅವರು `ಓ ಮೈ ಲವ್` ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
 
ಜೂನ್ 24ಕ್ಕೆ  `ಓ ಮೈ ಲವ್` ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಹಲವಾರು ವಿತರಕರು ಸಿನಿಮಾ ರಿಲೀಸ್ ಮಾಡಲು ಮಾತುಕತೆ ನಡೆಸಿರುವುದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸದ್ಯದಲ್ಲೇ ವಿತರಕರನ್ನು ಅಂತಿಮಗೊಳಿಸಿ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.

ಜಿ.ರಾಮಾಂಜಿನಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಎಲ್ಲಾ ಹಾಡುಗಳನ್ನು ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದರೆ, ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ.
 
ತೆಲುಗು ಖಳನಟ ದೇವ್ ಗಿಲ್, ಎಸ್.ನಾರಾಯಣ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಸದ್ಯದಲ್ಲೇ ಟ್ರೇಲರ್ ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಪ್ರೀತಿ ಪ್ರೇಮದ ಜೊತೆಗೆ ತಂದೆ ಮಗನ ಸಂಬಂಧದ ಕಥಾನಕ ಹೊಂದಿರುವ  ಆ್ಯಕ್ಷನ್ ಲವ್ ಎಂಟರ್ ಟೈನರ್  ಸಿನಿಮಾ ಓ ಮೈ ಲವ್`. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ  ಜೋಡಿಯಾಗಿ ನಟಿಸಿರುವ ಈ  ಚಿತ್ರ ಪ್ರಾರಂಭದಿಂದಲೂ ಸಖತ್ ಸೌಂಡು ಮಾಡುತ್ತಲೇ ಬಂದಿದೆ. ಈಗಾಗಲೇ ರಿಲೀಸಾಗಿರುವ ಚಿತ್ರದ  ಡ್ಯುಯೆಟ್  ಹಾಡು ವೈರಲ್ ಆಗಿದೆ.
 
ಈಗ ಈ ಚಿತ್ರದ  ಗ್ಲಿಂಪ್ಸ್ ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್`ನಲ್ಲಿ  ಬಿಡುಗಡೆಯಾಗಿದೆ. 
 
ಬಳ್ಳಾರಿ ದರ್ಬಾರ್` ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನವಿರುವ `ಓ ಮೈ ಲವ್`ಚಿತ್ರದ  ಗ್ಲಿಂಪ್ಸ್ ಎಲ್ಲೆಡೆ ವೈರಲ್ ಆಗಿದ್ದು  ಲಕ್ಷಾಂತರ ಹಿಟ್ಸ್ ದಾಖಲಿಸಿ ಟ್ರೆಂಡಿಂಗ್`ನಲ್ಲಿದೆ.
 
ಗ್ಲಿಂಪ್ಸ್ ನೋಡಿದವರು ಸ್ಮೈಲ್ ಶ್ರೀನು ಸ್ಟೈಲಿಶ್ ಮೇಕಿಂಗ್`ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಬರ್`ದಸ್ತ್ ಆ್ಯಕ್ಷನ್ ಸೀಕ್ವೆನ್ಸ್, ಕಲರ್`ಫುಲ್ ಲವ್ ಸೀನ್ಸ್ ನೋಡುಗರ ಗಮನ ಸೆಳೆಯುತ್ತಿದೆ. ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ಅವರು `ಓ ಮೈ ಲವ್` ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
 
ಜೂನ್ 24ಕ್ಕೆ  `ಓ ಮೈ ಲವ್`ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಹಲವಾರು ವಿತರಕರು ಸಿನಿಮಾ ರಿಲೀಸ್ ಮಾಡಲು ಮಾತುಕತೆ ನಡೆಸಿರುವುದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸದ್ಯದಲ್ಲೇ ವಿತರಕರನ್ನು ಅಂತಿಮಗೊಳಿಸಿ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.
 
ಜಿ.ರಾಮಾಂಜಿನಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಎಲ್ಲಾ ಹಾಡುಗಳನ್ನು ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದರೆ, ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ.
 
ತೆಲುಗು ಖಳನಟ ದೇವ್ ಗಿಲ್, ಎಸ್.ನಾರಾಯಣ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಸದ್ಯದಲ್ಲೇ ಟ್ರೇಲರ್ ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed