ಈ ವಾರ ತೆರೆಗೆ...... ?ಡೆಡ್ಲಿ - ೨?
Posted date: 11/August/2010

ಅಂದು ಡೆಡ್ಲಿ ಸೋಮ ಇಂದು ಡೆಡ್ಲಿ - ೨ ಅತ್ಯಂತ ಕುತುಹಲವನ್ನು ಇಟ್ಟು ಕೊಂಡಿರುವ ಚಿತ್ರ ಹಲವಾರು ದಾಖಲೆಗಳೊಂದಿಗೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸುಮಾರು ೧೩೨


ಸನ್ನಿವೇಶಗಳನ್ನು  ತುಂಬಿಕೊಟ್ಟಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.ಕೆ.ಕೆ. ಫಿಲಂಸ್ ಲಾಂಛನದಲ್ಲಿ ಎಂ. ಮಂಜುನಾಥ್ ಹಾಗೂ ಜಿ.ಎನ್. ಮೂರ್ತಿ ನಿರ್ಮಿಸಿರುವ ಚಿತ್ರ ’ಡೆಡ್ಲಿ-೨" ಆದಿತ್ಯ ನಾಯಕನಾಗಿರುವ ಈ ಚಿತ್ರಕ್ಕೆ ರವಿಶ್ರೀವತ್ಸ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕೇವಲ ಒಂದು ಹಾಡನ್ನು ಉಪಯೋಗಿಸಿಕೊಳ್ಳಲಾಗಿದೆ. ಇದೇ ತಂಡ ಈ ಹಿಂದೆ ನಿರ್ಮಿಸಿದ್ದ ’ಡೆಡ್ಲಿ ಸೋಮ’ ಅದ್ಭುತ ಯಶಸ್ಸನ್ನು ಕಂಡಿತ್ತು. ಆದರಿಂದ ಪ್ರೇರಿತರಾಗಿ ಆ ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತು ಹೋಗಿದ್ದ ಸೋಮ ಮತ್ತೆ ಹೇಗೆ ಎದ್ದು ಬರುತ್ತಾನೆ ಎಂಬುದೇ ಈ ಚಿತ್ರದ ಸಸ್ಪೆನ್ಸ್, ನಾಯಕ ಆದಿತ್ಯ ಅವರ ತಾಯಿಯಾಗಿ ಸುಹಾಸಿನಿ ಪ್ರಮುಖ ಪಾತ್ರ ನಿರ್ವಹಿಸಿದ್ದು ನಾಯಕಿ ಪಾತ್ರದಲ್ಲಿ ಮೇಘನಾ ಹಾಗೂ ದೇವರಾಜ್, ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ. ಮ್ಯಾಥ್ಯೂರಾಜನ್ ಛಾಯಾಗ್ರಹಣ, ಸುಷ್ಮಾವೀರ್ ಸಹ ನಿರ್ದೇಶನ, ಜೋನಿ ಹರ್ಷ ಸಂಕಲನ ಈ ಚಿತ್ರಕ್ಕಿದೆ.  


ಕೆ.ವಿ. ರಾಜು ಅವರ ಚಿತ್ರಕಥೆ ಸಹಾಯ, ಕೋಕಿಲ ಸಾಧು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ ಮಾಡಿದ್ದಾರೆ.Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed