೫ ಈಡಿಯಟ್ಸ್ ಗೆ ಜೂನ್ ೧೫ ರಿಂದ ಅಂತಿಮ ಹಂತ
Posted date: 2/June/2010

 ಶ್ವೇತ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಕೇಶ್ ಮೂರ್ತಿ ನಿರ್ಮಿಸುತ್ತಿರುವ ಹಾಸ್ಯ ಚಿತ್ರ ೫ ಈಡಿಯಟ್ಸ್ ಮಾಸ್ಟರ್ ಆನಂದ್ ನಿರ್ದೇಶನದ ಪ್ರಥಮ ಚಿತ್ರ ಅಲ್ಲದೆ ಕಥೆ-ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ಆನಂದ್, ಕಿರುತೆರೆಯಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ. ನನ್ಮಕ್ಕಳು ಎಂಬ ಹಾಸ್ಯಧಾರಾವಾಹಿಯನ್ನು ನಿರ್ದೆಶಿಸಿದ್ದಾರೆ. ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಶ್ರೀಮಂತ ಹುಡುಗಿಯೊಬ್ಬಳನ್ನು ಅಪಹರಿಸುವ ಐವರು ಮೂರ್ಖರಾಗಿ ಮಾ|| ಆನಂದ್, ವಾಸು, ಪೆಟ್ರೋಲ್ ಪ್ರಸನ್ನ, ನವೀನ್ ಕೃಷ್ಣ ಹಾಗೂ ನಮ್ರತಾ ಅಭಿನಯಿಸಿದ್ದು, ಹರ್ಷಿತಾ ಪೂರ್ಣಚ್ಚ, ನವ್ಯಶ್ರೀ, ತಾವರೆ, ಕರಿಬಸವಯ್ಯ, ಚಿದಾನಂದ, ಬ್ಯಾಂಕ್ ಜನಾರ್ಧನ್, ಹೀಗೆ ಹಾಸ್ಯ ಮುಖಗಳ ದಂಡೇ ಈ ಚಿತ್ರದ ತಾರಾಗಳಗದಲ್ಲಿದೆ. ಈಗಾಗಲೇ , ಬೆಂಗಳೂರು ಸುತ್ತಮುತ್ತ ೪ ಹಾಡು ಹಾಗೂ ೯೦% ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬರುವ ಜೂನ್ ೧೫ ರಿಂದ ಉಳಿದ ಮಾತಿನ ಭಾಗದ ಚಿತ್ರೀಕರಣ ಹಾಗೂ ಬಾಕಿ ಉಳಿದ ಒಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸಲಿದ್ದಾರೆ. ರೇಣು ಅವರ ಛಾಯಾಗ್ರಹಣ, ದೇವ್ ಸಂಗೀತ, ಚಲಂ ರಾಧಾಬಾಯಿ ಸಂಭಾಷಣೆ, ವಿ. ಮನೋಹರ್, ಕೆ. ಕಲ್ಯಾಣ್‌ರ ಸಾಹಿತ್ಯ ರಚನೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed