ನಟಿ ಹರ್ಷಿಕಾ ಪೂಣಚ್ಚ ಹಾಗು ನಟ ಭುವನ್ ಪೊನ್ನಣ್ಣ ಮಂಡ್ಯ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಬಾಲಕಿಯ ಮನೆಗೆ ಭೇಟಿ
Posted date: 19 Wed, Oct 2022 05:48:34 PM
ನಟಿ  ಹರ್ಷಿಕಾ ಪೂಣಚ್ಚ ಹಾಗು ನಟ  ಭುವನ್ ಪೊನ್ನಣ್ಣ   ಮಂಡ್ಯ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತ್ವನ ಹೇಳಿದರು.
 
ಅಲ್ಲಿ ತಂದೆ ತಾಯಿಯ ಆಕ್ರಂದನ ಕರಳು ಕಿವುಚುವ ಹಾಗಿತ್ತು. ನಾವು ಕರ್ನಾಟಕ ಸರ್ಕಾರದಲ್ಲಿ ಮಾಡುವ ಮನವಿ ಇಷ್ಟೆ, ಈ ಕೃತ್ಯ ಎಸಗಿದ ಆ ಕ್ರೂರಿಗೆ ತಕ್ಕ ಕಠಿಣ ಶಿಕ್ಷೆ ಕೊಡುವುದರ ಜೊತೆ ಈ ತರಹದ ಕೃತ್ಯಗಳು ಇನ್ನು ಮುಂದೆ ಎಂದೂ ನಡೆಯದಿರದ ರೀತಿಯಲ್ಲಿ ಕಾನೂನು ಜಾರಿ ಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ , ಭಾರತದಲ್ಲಿ ಈ ತರಹದ ಕ್ರೂರ ಗಟನೆಗಳು ಇನ್ನೆಂದಿಗೂ ನಡೆಯದ ಹಾಗೆ ಈ ಕ್ರೂರಿಗಳಲ್ಲಿ ಬಯ ಹುಟ್ಟಿಸುವ ಹಾಗೆ ಕಾನೂನು ಮಾಡಬೇಕು. ನಮ್ಮ ತಂಗಿಯರು ಸುರಕ್ಷಿತವಾಗಿ ಇರುವ ವರೆಗೂ ಹೋರಾಟ ಜಿಲ್ಲೆ ಜಿಲ್ಲೆಯಲ್ಲೂ ನಡೆಯಲಿ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed