ಇದು ಯಾರು ಬರೆದ ಕಥೆಯೋ - ಇದು ಕಸ್ತೂರಿ ವಾಹಿನಿಯ ಹೊಸ ರಿಯಾಲಿಟಿ ಶೋ. ಬದುಕಿನ ವಾಸ್ತವದ ಬೇರೆ ಬೇರೆ ಮುಖಗಳನ್ನು ಮಾನವೀಯ ನೆಲೆಯಲ್ಲಿ ತೋರಿಸುವ ಪ್ರಯತ್ನ ಇದಾಗಿದೆ. ಕನ್ನಡದ ಖ್ಯಾತ ನಟಿ ಶ್ರೀಮತಿ ತಾರಾರವರು ಈ ಶೋ ನಡೆಸಿಕೊಡಲಿದ್ದು, ಸಮಸ್ಯೆಗಳ ಒಳಸುಳಿಗಳನ್ನು ಸೂಕ್ಷ್ಮವಾಗಿ ಎಳೆಎಳೆಯಾಗಿ ತೆರೆದಿಡಲಿದ್ದಾರೆ.
ಪ್ರತಿ ಸಂಚಿಕೆಯಲ್ಲೂ ಒಂದೊಂದು ಕಥೆಯನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತಿ ಮನುಷ್ಯನ ಬದುಕಿನಲ್ಲೂ ಕಷ್ಟ-ಸುಖ, ನೋವು-ನಲಿವುಗಳು ಹಾಸುಹೊಕ್ಕಾಗಿರುತ್ತವೆ. ವಿಶಿಷ್ಟ ಹಾಗೂ ಅಷ್ಟೇ ಮಹತ್ವದ ತಿರುವುಗಳಿರುತ್ತವೆ. ಜೀವನದಲ್ಲಿ ತೊಂದರೆಗಳು ಹಲವಿರುತ್ತವೆ. ಈ ತೊಂದರೆಗಳು ಜೀವನದ ಯಾವುದೋ ಘಟ್ಟದಲ್ಲಿ ಆರಂಭವಾಗಿ ಬೃಹದಾಕಾರವಾಗಿ ಬೆಳೆದಿರಬಹುದು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲಗುತ್ತಿರಬಹುದು. ಯಾವುದೋ ವಿಷ ಘಳಿಗೆಯಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿರುತ್ತದೆ. ಸಣ್ಣ ವೈಮನಸ್ಯ ಹೆತ್ತವರು-ಮಕ್ಕಳನ್ನು ದೂರ ಮಾಡಿರುತ್ತದೆ. ಅಸಮಾಧಾನದ ಕಿಡಿಗೆ ಸ್ವಾಭಿಮಾನದ ಮುಸುಕು ಕವಿದು ಗಂಡ ಹೆಂಡತಿಯ ಸಂಬಂಧಕ್ಕೆ ಅಡ್ಡಿಯಾಗಿರುತ್ತದೆ. ಇನ್ನೂ ಕೆಲವರು ಜೀವನಕ್ಕೆ ಶಾಪವಾಗಿ ಅಂಟಿಕೊಂಡ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ಮೆರೆದು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಹಲವರು ಎಳೆಯ ಪ್ರಾಯದಲ್ಲಿ ಕಡುಕಷ್ಟ ಅನುಭವಿಸಿ ಇಂದು ಯಶಸ್ಸಿನ ಉತ್ತುಂಗಕ್ಕೇರಿರುತ್ತಾರೆ. ಏನೂ ತಪ್ಪು ಮಾಡದೆ ಜೈಲು ಸೇರಿ ಅಪಮಾನ ಅನುಭವಿಸಿರುತ್ತಾರೆ. ಅವರ ಕುಟುಂಬದವರು ಬೀದಿ ಪಾಲಾಗಿರುತ್ತಾರೆ. ಅಥವಾ ಜೈಲಿನಿಂದ ಬಿಡುಗಡೆಯಾಗಿ ಸಾಮಾಜಿಕ ಅವಮಾನ ಎದುರಿಸಿ ಸ್ವಾಭಿಮಾನದಿಂದ ಬದುಕುತ್ತಿರುತ್ತಾರೆ... ಹೀಗೆ ಹಲವು ಕಾರಣಗಳಿಂದ ಸಮಸ್ಯೆಗೆ ಸಿಲುಕಿರುವವರನ್ನು ವೇದಿಕೆಗೆ ಕರೆತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶಿಷ್ಟ ಕಾರ್ಯಕ್ರಮ ಇದು.
ಈ wAUÀ¼À 31 jAzÀ ಪ್ರಸಾರಗೊಳ್ಳಲಿರುವ ಈ ರಿಯಾಲಿಟಿ ಶೋ ಸೋಮವಾರದಿಂದ ಶುಕ್ರವಾರದವರೆಗೆ gÁwæ 9:00 UÀAmÉUÉ ಪ್ರೈಂ ಟೈಂನಲ್ಲಿgÁgï ಪ್ರಸಾರಗೊಳ್ಳಲಿದೆ.
ತಾರಾ ಉವಾಚ:-
* ಇದು ಹೆಚ್ಚಿನದಾಗಿ ಯಾವುದೇ ಸಂಸಾರದ ವ್ಯಯಕ್ತಿಕ ಸಮಸ್ಯೆಯ ಬಗ್ಗೆ ಹೆಚ್ಚಿನ ಮಹತ್ವ ತೋರುತ್ತಿಲ್ಲ, ಬದಲಿಗೆ ಯಾವುದೇ ವ್ಯಕ್ತಿಯ ಆರೋಗ್ಯದ ಸಮಸ್ಯೆ, ಸಾಮಾಜಿಕ ಸಮಸ್ಯೆ, ಮತ್ತು ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ.
* ಇಲ್ಲಿನ ಸಮಸ್ಯೆಗಳಿಗೆ ನಾವೇ ತೀರ್ಮಾನ ಕೊಡುವುದಕ್ಕಿಂತ ಹೆಚ್ಚಿನದಾಗಿ ಆಯಾ ಕ್ಷೇತ್ರದ ತಜ್ಞರಿಂದ ಮಾರ್ಗದರ್ಶನ ಮತ್ತು ಪ್ರತಿಫಲ ಸಿಗುವಂತೆ ಮಾಡಲಾಗುತ್ತಿದೆ.
* ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡಿರಬಹುದು. ಆದರೆ ಈಗಿನ ಸಮಾಜಕ್ಕೆ ಯಾವುದು ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ ಈಗಿನ ಮಾಧ್ಯಮಗಳು ಸರಿಯಾದ ತಿಳುವಳಿಕೆಗಳನ್ನು ನೀಡುತ್ತಾ ಬರುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ನೋಡಿಯಾದರೂ ನಮ್ಮ ಕೆಲ ಯುವಜನರಾದರೂ ಸರಿಯಾದ ಮಾರ್ಗದಲ್ಲಿ ನಡೆಯುವಂತಾದರೆ ಅದೇ ಈ ಕಾರ್ಯಕ್ರಮಕ್ಕೆ ಸಲ್ಲುವ ನಿಜವಾದ ಉಡುಗೊರೆ.