೩೦೦ ದಾಟಿದ ಎಸ್.ಎಸ್.ಎಲ್.ಸಿ. ನನ್ಮಕ್ಳು
Posted date: 21/September/2009

ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿ, ಕಿರುತೆರೆ ನಟನಾಗಿ ಹಂತಹಂತವಾಗಿ ಬೆಳೆದಿದ್ದ ಮಾ|| ಆನಂದ್ ಈಗ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಅವರ ನಿರ್ದೇಶನದ ಸಂಪೂರ್ಣ ಹಾಸ್ಯ ಧಾರಾವಾಹಿ ಎಸ್.ಎಸ್.ಎಲ್.ಸಿ. ನನ್ಮಕ್ಳು ಇದೇ ೨೫ರಿಂದು ಸುವರ್ಣ ವಾಹಿನಿಯಲ್ಲಿ ೩೦೦ನೇ ಕಂತು ಪ್ರಸಾರವಾಗುತ್ತಿದೆ. ದಿನಕ್ಕೊಂದು ಹಾಸ್ಯ ಕಥೆಗಳನ್ನು ಬರೆದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಆನಂದ್ ಯಶಸ್ವಿಯಾಗಿದ್ದಾರೆ.  ನಿರ್ಮಾಪಕರ ಪ್ರೋತ್ಸಾಹ, ಆಸಕ್ತಿ ಹಾಗೂ ತಂಡದ ಮೇಲಿನ ಪ್ರೀತಿ ಈ ಯಶಸ್ಸಿಗೆ ಮೂಲ ಕಾರಣ ಎಂದು ನಿರ್ದೇಶಕ ಆನಂದ್ ಹೇಳಿದರೆ, ನಮ್ಮ ಸಂಸ್ಥೆಯ ಪ್ರಪ್ರಥಮ ನಿರ್ಮಾಣದ ಈ ಹಾಸ್ಯ ಧಾರಾವಾಹಿ ೩೦೦ ಕಂಡು ದಾಟಿ ಇಷ್ಟೊಂದು ಜನಪ್ರಿಯವಾಗಿರುವುದಕ್ಕೆ ಇಡೀ ತಂಡದ ಪ್ರತಿಯೊಬ್ಬರ ಪರಿಶ್ರಮವೇ ಕಾರಣ ಎಂದು ನಿರ್ಮಾಪಕರಾದ ಶ್ರೀನಿವಾಸಮೂರ್ತಿ ಹಾಗೂ ವಿಜಯಭಾಸ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಭೂಮಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿ. ಶ್ರೀನಿವಾಸಮೂರ್ತಿ ಹಾಗೂ ವಿಜಯಭಾಸ್ಕರ್ ನಿರ್ಮಾಣದ ಈ ಧಾರಾವಾಹಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಮಾ| ಆನಂದ್.  ವೆಂಕಟ್‌ರ ಸಂಭಾಷಣೆ, ಬಿ.ವಿ. ರಾಜು ಅವರ ಛಾಯಾಗ್ರಹಣ, ವಿ. ಮನೋಹರ್‌ರ ಸಂಗೀತ, ಪಿ.ಜಿ. ಲಕ್ಷ್ಮೀಕಾಂತ್‌ರವರ ಸಂಕಲನ, ಪಾಂಡುರಂಗಾಚಾರ್ ಅವರ ನಿರ್ಮಾಣ-ನಿರ್ವಹಣೆ ಈ ಧಾರಾವಾಹಿಗಿದ್ದು, ಮಾ| ಆನಂದ್, ರವಿಶಂಕರ್, ಅಶೋಕ್ ಶರ್ಮ, ಅಮಿತ್, ಚಂದ್ರಕಲಾ ಮೋಹನ್, ಸಹನಾ, ಗಾನಶ್ರೀ ಪ್ರಮುಖ ತಾರಾಗಣದಲ್ಲಿದ್ದಾರೆ.

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed