ಹೊಸ ಸಿನಿಮಾ ಘೋಷಿಸಿದ RX 100 ಚಿತ್ರದ ನಿರ್ದೇಶಕ ಭೂಪತಿ
Posted date: 20 Fri, Jan 2023 09:05:59 AM
2018ರಲ್ಲಿ ಬಂದ RX 100 ಸಿನಿಮಾ ತೆಲುಗಿನಲ್ಲಿ ಹಿಟ್ ಪಟ್ಟಿ ಸೇರಿದ ಸಿನಿಮಾ. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಅಜಯ್ ಭೂಪತಿ ಪದಾರ್ಪಣೆ ಮಾಡಿದ್ದರು. ಅದಾದ ಮೇಲೆ ಮಹಾಸಮುದ್ರಂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಇದೀಗ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾ ಮೂಲಕ ನಿರ್ಮಾಪಕನಾಗಿಯೂ ಅವರು ಹೆಜ್ಜೆ ಇಟ್ಟಿದ್ದಾರೆ.
ಮುದ್ರಾ ಮೀಡಿಯಾ ವರ್ಕ್ಸ್ ಮೂಲಕ ಸದಭಿರುಚಿ ಸಿನಿಮಾ ನೀಡುವ ಬಗ್ಗೆ ಸ್ವತಃ ಭೂಪತಿ ಹೇಳಿಕೊಂಡಿದ್ದಾರೆ. "ಹೊಸ ಕಾಲಘಟ್ಟಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ನಮ್ಮ ಬ್ಯಾನರ್ ಮೂಲಕ ನೀಡಲಿದ್ದೇವೆ. ಶೀಘ್ರದಲ್ಲಿ ನಮ್ಮ ಬ್ಯಾನರ್‌ನ ಮೊದಲ ಸಿನಿಮಾ ಮತ್ತು ಅದರಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ರಿವೀಲ್ ಮಾಡಲಿದ್ದೇವೆ ಎಂದಿದ್ದಾರೆ.