ಬಹಳ ಪಸಂದಾಗಿದೆ ``ದಿಲ್ ಪಸಂದ್`` ಟೀಸರ್
Posted date: 05 Wed, Oct 2022 10:01:33 PM
ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸಿರುವ "ದಿಲ್ ಪಸಂದ್" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.‌‌ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. 

ಕಳೆದ ಹನ್ನೊಂದು ತಿಂಗಳ ಹಿಂದೆ ನಮ್ಮ ಚಿತ್ರ ಆರಂಭವಾಗಿತ್ತು. ಇದೇ ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ನೋಡಬಹುದಾದ ನಮ್ಮ ಚಿತ್ರ "ದಿಲ್ ಪಸಂದ್" ನಷ್ಟೇ ಸಿಹಿಯಾಗಿದೆ . ನನ್ನ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಸುಮಂತ್ ಕ್ರಾಂತಿ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶಿವತೇಜಸ್. ‌

ಐಶು ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ತುಂಬಾ ಎಮೋಷನ್ ಹುಡುಗಿ ನಾನು. ಲವ್ ಟ್ರ್ಯಾಕ್ ಇರುವ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ಕಂಪ್ಲೀಟ್ ಲವ್ ಸ್ಟೋರಿಯಳ್ಳ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಾನು ನಟಿಸಿರುವ ಪೂರ್ಣ ಪ್ರೇಮಕಥೆಯುಳ್ಳ ಮೊದಲ ಚಿತ್ರ  "ದಿಲ್ ಪಸಂದ್" ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.

ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ "ದಿಲ್ ಪಸಂದ್". ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗಿದೆ ಎಂದರು ನಟಿ ಮೇಘಾ ಶೆಟ್ಟಿ.

ನಾನು ಕಥೆ ಕೇಳಬೇಕಾದರೆ ಸಾಕಷ್ಟು  ಖುಷಿ ಪಟ್ಟಿದೆ.  ಸಾಕಷ್ಟು ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ "ದಿಲ್ ಪಸಂದ್" ಎಲ್ಲರಿಗೂ ಪ್ರಿಯವಾಗಲಿದೆ.  ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕೆಲವರು ಕಥೆ ಹೇಳುವುದೆ ಬೇರೆ. ಚಿತ್ರ ಮಾಡುವುದೇ ಬೇರೆ. ನಾನು ಇತ್ತೀಚೆಗೆ ಚಿತ್ರ ನೋಡಿದೆ.  ಶಿವತೇಜಸ್ ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನಮ್ಮ"ದಿಲ್ ಪಸಂದ್" ಚಿತ್ರ ಚೆನ್ನಾಗಿದೆ. ನವೆಂಬರ್ 11 ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ಸುಮಂತ್ ಕ್ರಾಂತಿ.

ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ ಹಾಗೂ ಸಹ ನಿರ್ದೇಶಕ, ಮಾರ್ಕೆಟಿಂಗ್ ಹೆಡ್ ಹರೀಶ್ ದೇವಿತ್ "ದಿಲ್ ಪಸಂದ್" ಕುರಿತು ಮಾತನಾಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed