ಮಾನ ಚಿತ್ರೀಕರಣ ಮುಕ್ತಾಯ
Posted date: 09 Tue, Nov 2021 09:44:15 AM
ಕನ್ನಡ ಸಾಹಿತ್ಯಲೋಕದ ಹಿರಿಯ ಮುತ್ಸದಿ ಕುಂ.ವೀರಭದ್ರಪ್ಪ ಅವರ ಅನೇಕ ರಚನೆಗಳು ಈಗಾಗಲೇ ಚಲನಚಿತ್ರ ರೂಪದಲ್ಲಿ ಮೂಡಿಬಂದಿವೆ. ಈಗ ಉಡ ಎಂಬ ಮತ್ತೊಂದು ಕೃತಿಯನ್ನಾಧರಿಸಿ ನಿರ್ಮಾಣವಾಗುತ್ತಿರುವ ಚಿತ್ರ ಮಾನ. ಸೆಬಾಸ್ಟಿಯನ್ ಡೇವಿಡ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ೧೩ನೇ ಚಲನಚಿತ್ರ ಇದಾಗಿದೆ. ಜೀತ ಪದ್ದತಿಯಂಥ ಸಾಮಾಜಿಕ ಅಸಮಾನತೆಯ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದು, ನಟಿ ಉಮಾಶ್ರೀ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಮೂಗು ರಮೇಶ್ ಕೂಡ ನಟಿಸಿದ್ದಾರೆ.  ಮಂಡ್ಯ, ಮದ್ದೂರು ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ೩೦ ದಿನಗಳ ಕಾಲ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಸಿ ಕುಂಬಳಕಾಯಿ ಒಡೆಯಲಾಗಿದೆ.  ಹಿನ್ನೆಲೆಯಲ್ಲಿ ಮೂಡಿಬರುವ ಹಾಡೊಂದರ ಚಿತ್ರೀಕರಣವನ್ನೂ ಇಲ್ಲಿ ನಡೆಸಲಾಗಿದೆ. 
 ಎಪ್ಪತ್ತರ ದಶಕದಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ ನಡೆದಿರುವ ನೈಜಘಟನೆಯನ್ನು ಆಧರಿಸಿ ಮಾಡಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಬರುವ ಪಾತ್ರಗಳು, ವೇಷಭೂಷಣವೆಲ್ಲ ಹಳೇಮೈಸೂರು ಶೈಲಿಯಲ್ಲಿದೆ. ಜಮೀನ್ದಾರರು, ಕೂಲಿ, ಜೀತ ಪದ್ದತಿಯಂಥ ಸಾಮಾಜಿಕ ಅಸಮಾನತೆಯ ವಿರುದ್ದ ನಡೆಯುವ ಹೋರಾಟದ ಗಂಭೀರ ವಸ್ತುವನ್ನು ಚಿತ್ರದಲ್ಲಿ ಹಾಸ್ಯಮಿಶ್ರಿತವಾಗಿ ನಿರೂಪಿಸಲಾಗಿದೆ. ಕಾಂತಲಕ್ಷಿ ಹಾಗೂ ರಮೇಶ್‌ಬಾಬು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed