ಹೊರ ರಾಜ್ಯಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ``ಬನಾರಸ್``ನ ``ಮಾಯಗಂಗೆ`` ಹಾಡಿಗೆ ಪ್ರಶಂಸೆಯ ಸುರಿಮಳೆ
Posted date: 06 Wed, Jul 2022 10:50:30 AM
ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಾಯಕರಾಗಿ ನಟಿಸಿರುವ "ಬನಾರಸ್" ಚಿತ್ರದ "ಮಾಯಾಗಂಗೆ" ಹಾಡು ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.‌ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ ಸೋನಾಲ್ ಮೊಂತೆರೊ ಈ ಚಿತ್ರದ ನಾಯಕಿ.

ಕನ್ನಡ ಹಾಗೂ ಮಲೆಯಾಳಂ ನಲ್ಲಿ ಏಕಕಾಲಕ್ಕೆ "ಮಾಯಾಗಂಗೆ" ಹಾಡು ಬಿಡುಗಡೆಯಾದ ನಂತರ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿ ಜನಪ್ರಿಯವಾಗಿದೆ. 

ಚೆನ್ನೈನಲ್ಲಿ ‌ತಮಿಳಿನಲ್ಲಿ ಈ ಹಾಡನ್ನು  ನಟ ವಿಶಾಲ್, ಹೈದರಾಬಾದ್ ನಲ್ಲಿ ನಿರ್ದೇಶಕ ಸುಕುಮಾರ್ ಹಾಗೂ ಮುಂಬೈನಲ್ಲಿ ನಿರ್ದೇಶಕ
ಮಧುರ್ ಭಂಡಾರಕರ್ ಬಿಡುಗಡೆ ಮಾಡಿದರು. ಮುಂಬೈನ ಸಮಾರಂಭಕ್ಕೆ ಖ್ಯಾತ ನಟ ಸಂಜಯ್ ದತ್ ಅವರು ಆಗಮಿಸಿ, ಝೈದ್ ಖಾನ್ ಅವರಿಗೆ ಶುಭ ಕೋರಿದರು. 

ಕರ್ನಾಟಕದ ಹೊರಗೂ‌ ನಮ್ಮ "ಬನಾರಸ್" ಚಿತ್ರಕ್ಕೆ ಹಾಗೂ "ಮಾಯಾಗಂಗೆ" ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಂತಹ ಅದ್ಭುತ ಪ್ರತಿಕ್ರಿಯೆಗೆ ನನ್ನ ಮನ ತುಂಬಿ ಬಂದಿದೆ ಎನ್ನುತ್ತಾರೆ ಝೈದ್ ಖಾನ್.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed