ಯೋಗಿ ಈ ವಾರ ಬಿಡುಗಡೆ
Posted date: 28/October/2009

ನಾಯ್ಡು ಹೋಟೆಲ್ ಒಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ ನಾಯಕ ಯೋಗಿಗೆ ಜೀವನದಲ್ಲಿ ಇರುವುದು ಒಂದೇ ಆಸೆ. ಬಾಲ್ಯದಲ್ಲಿ ಬೇರೆಯಾದ ತನ್ನ ಗೆಳತಿಯನ್ನು ಹುಡುಕುವುದು. ಆ ಹುಡುಕಾಟದಲ್ಲಿ ತನಗರಿವಿಲ್ಲದಂತೆ ಭೂಗತ ಜಗತ್ತನ್ನು ಪ್ರವೇಶಿಸುತ್ತಾನೆ. ಹೀಗೆ ಹಲವಾರು ಕುತೂಹಲಕಾರಿ ತಿರುವುಗಳನ್ನು ಹೊಂದಿರುವ ಯೋಗಿ ಚಿತ್ರ ಈ ವಾರ ರಾಜ್ಯಾಂದ್ಯಂತ ತೆರೆಕಾಣುತ್ತಿದೆ. ಗಂಡುಗಲಿ ಎಂದೇ ಹೆಸರಾದ ಕೆ.ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಿಂದೆ ಮಂಜು ಅವರ ಯಮಲೋಕದಲ್ಲಿ ವೀರಪ್ಪನ್ ನಿರ್ದೇಶಿಸಿದ್ದ ಪ್ರಕಾಶ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯೋಗೇಶ್-ಬಿಯಾಂಕ ದೇಸಾಯಿ, ರೇಖಾ, ಶಿರೀನ್, ಸುಚೇಂದ್ರ ಪ್ರಸಾದ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ೫ ಹಾಡುಗಳಿಗೆ ಎಮಿಲ್‌ರವರ ಸಂಗೀತ-ಸಂಯೋಜನೆ, ಮುರಳಿ ನೃತ್ಯ ಸಂಯೋಜನೆ ಮಾಡಿದ್ದು, ನಾಯಕ ಯೋಗೀಶ್ ಹಾಗೂ ಎ.ಆರ್. ರೆಹಮಾನ್‌ರ ಸಹೋದರಿ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed