ಅಂತೂ ಸಾವು ಬಿಡುಗಡೆಯಾಯಿತು
Posted date: 16 Sun, Oct 2022 11:31:54 PM
ಅಂತೂ ಸಾವು ಬಿಡುಗಡೆಯಾಯಿತು. ಸಾವಣ್ಣ ಪ್ರಕಾಶನದ 150ನೆಯ ಪುಸ್ತಕವನ್ನಾಗಿ ನನ್ನ ಪುಸ್ತಕ ಆರಿಸಿದ ಜಮೀಲ್‌ಗೆ ಪ್ರೀತಿ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬಂದು ಹಾರೈಸಿದ ಎಲ್ಲರಿಗೂ ಕೃತಜ್ಞತೆ. 
 
1. 1, ಸುಮಾರು ನೂರು ಮಂದಿ ಸಾವು ಎಂದರೇನು ಎಂಬ ಪ್ರಶ್ನೆಗೆ ವಿಡಿಯೋ ಮಾಡಿ ಉತ್ತರಿಸಿದ್ದೀರಿ. ನಿಮ್ಮ ಶ್ರಮ ಮತ್ತು ಪ್ರೀತಿಗೆ ಶರಣು.
 
2. ಟಿಎನ್ ಸೀತಾರಾಮ್ ಸರ್ ಕೂಡ ವಿಡಿಯೋ ಮಾಡಿ ಕಳಿಸಿದ್ದು, ರಾಜು ಹೆಗಡೆಯವರ ವಿಡಿಯೋ, ಕಥೆಕೂಟದ ಗೆಳೆಯರ ದೃಶ್ಯಿಕೆಗಳೆಲ್ಲ ವಿಶಿಷ್ಟ ಖುಷಿ ಕೊಟ್ಟವು. ಸಂಭ್ರಮ ಹೆಚ್ಚಿಸಿದ ಎಲ್ಲರಿಗೂ ಅಕ್ಕರೆ.
 
3. ಇನ್ನೂರೈವತ್ತಕ್ಕೂ ಹೆಚ್ಚು ಮಂದಿ ಖಾಸಗಿಯಾಗಿ ಸಂದೇಶ ಕಳಿಸಿದ್ದಾರೆ. ಅನೇಕರು ತಮ್ಮ ವಾಲ್ ಮೇಲೆ ಬರೆದುಕೊಂಡಿದ್ದಾರೆ. ಹಿರಿಯ ಕವಿಗಳಾದ ರುದ್ರೇಶ್ವರ ಸ್ವಾಮಿ, ಗಿರೀಶ್ ಹಂದಲಗೆರೆ, ಲಕ್ಷ್ಮಣ್ ವಿಎ ಮುಂತಾದವರು ಕವಿತೆ ಬರೆದು ಪ್ರೀತಿ ತೋರಿದ್ದಾರೆ. ಅವರನ್ನೆಲ್ಲ ಸ್ಮರಿಸುವೆ. 
 
4. ಕಾರ್ಯಕ್ರಮ ಸುದೀರ್ಘವಾಗಿ ನಡೆಯಿತು. ಬಾಗಲಕೋಟೆ, ಕೊಪ್ಪಳ, ತುಮಕೂರು, ಚಿತ್ರದುರ್ಗ, ಮಂಗಳೂರು, ಉಡುಪಿ ಮತ್ತು ದಾವಣಗೆರೆಯಿಂದ ತರುಣ ಮಿತ್ರರು ಬಂದಿದ್ದರು. ಮಳೆಯನ್ನೂ ಲೆಕ್ಕಿಸದೇ ಬೆಂಗಳೂರಿನ ಮತ್ತೊಂದು ಅಂಚಿನಿಂದ ದಕ್ಷಿಣಕ್ಕೆ ಬಂದವರು ಹಲವರು. ಕುಳಿತುಕೊಳ್ಳಲು ಜಾಗವಿಲ್ಲದೇ ಹೋದರೂ ಹೊಂದಾಣಿಕೆ ಮಾಡಿಕೊಂಡು ಹೆಚ್ಚಿನ ಖುರ್ಚಿ ಹಾಕಿಸಿಕೊಂಡು ಕೊನೆತನಕವೂ ಇದ್ದರು. ಆಪ್ತರು, ಗೆಳೆಯರು, ಮಿತ್ರರು, ಬಂಧುಗಳು, ಸಹೋದ್ಯೋಗಿಗಳು, ಓದುಗ ಮಿತ್ರರ ಈ ಪ್ರೀತಿಗೆ ಏನೆನ್ನಲಿ?
 
5. ಸಪ್ನಾ ಬುಕ್ ಹೌಸ್ ಮೊದಲ ಆರ್ಡರ್ ಅಂತ 400 ಪುಸ್ತಕ ತರಿಸಿಕೊಂಡಿದೆ. ಶ್ರೀ ನಿತಿನ್ ಶಾ ಮತ್ತು ದೊಡ್ಡೇಗೌಡರಿಗೆ ಥ್ಯಾಂಕ್ಸ್. ಕನ್ನಡ ಲೋಕದ ವಸಂತ್, ಬುಕ್ ಮಾಡಿ ಡಾಟ್ ಕಾಮ್‌ನ ಮಂಜುನಾಥ್ ಚಾಂದ್ – ಪ್ರೀ ಆರ್ಡರ್ ಸಂದರ್ಭದಲ್ಲೇ ನೂರಾರು ಪ್ರತಿಗಳನ್ನು ಓದುಗರಿಗೆ ತಲುಪಿಸಿದ್ದಾರೆ. ಸ್ನೇಹಾ ಬುಕ್ ಹೌಸ್, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಪ್ರಭಾ ಕಂಬತ್ತಳ್ಳಿ, ನವಕರ್ನಾಟಕದ ಉಡುಪರು ಮತ್ತು ಬಳಗ, ಹರಿವು ಬುಕ್ಸ್, ಜೀರುಂಡೆ ಬುಕ್ಸ್ ಮತ್ತು ಎಲ್ಲಾ ಪುಸ್ತಕ ಮಾರಾಟಗಾರರಿಗೂ ನಮಸ್ಕಾರ.
 
6. ಸಮಾರಂಭವನ್ನು ರಂಗಾಗಿಸಿದ್ದು ಸ್ನೇಹಿತರಾದ LTTE ಮೂರ್ತಿ ಮತ್ತು ಬಳಗ. ಅವರು ಕರೆಸಿದ ಡೋಲು ಮತ್ತು ಎಲ್ಲರಿಗೂ ತಿನಿಸಿದ ಸಿಹಿಯನ್ನು ಮರೆಯಲಾಗದು. ಈ ವಿನಾಕಾರಣ ಪ್ರೀತಿಗೆ ಕೃತಜ್ಞ.
 
7. ಪುಸ್ತಕ ರೂಪಿಸುವಲ್ಲಿ ವಿಎಂ ಮಂಜುನಾಥ್, ಸುಧಾಕರ ದರ್ಬೆ, ವಿಕ್ರಮ್ ಅಡಿಗ, ನಿವೇದಿತಾ, ಜ್ಯೋತಿ, ಗಣೈಕ ಮುದ್ರಣಾಲಯದ ಸುನಿಲ್ ಮತ್ತು ತಂಡ ನೆರವಾಗಿದ್ದಾರೆ. ವೆಂಕಟೇಶ ಮೂರ್ತಿ, ಕನ್ನಡಪ್ರಭದ ಸುರೇಶ್ ಮತ್ತು ತಾಯ್ ಲೋಕೇಶ್ ಚೆಂದದ ಫೋಟೋ ತೆಗೆದು ಹಂಚಿದ್ದಾರೆ. ಎಲ್ಲರಿಗೂ ಪ್ರೀತಿ.
 
8. ಕಾರ್ಯಕ್ರಮಕ್ಕೆ ಬಂದ ವಿಶ್ವೇಶ್ವರ ಭಟ್, ರವಿ ಹೆಗಡೆ,ಜಗದೀಶ ಶರ್ಮಾ ಸಂಪ, ಕುಸುಮಬಾಲೆ, ಗೋಪಾಲಕೃಷ್ಣ ಕುಂಟಿನಿ- ಇವರಿಗೆ ಅಭಿವಂದನೆ.
 
9. ಪುಸ್ತಕ ನಿಮ್ಮ ಕೈಲಿದೆ. ಓದು ನಿಮ್ಮದು. 
 
10. ಮತ್ತೆ ಮುಂದಿನ ಸಲ ಸೇರೋಣ. ಸ್ನೇಹ ಜಾರಿಯಲ್ಲಿರಲಿ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed